ಹೂವಿನ ಬಾಣದಂತೆ ಸಾಂಗ್ ಟ್ರೆಂಡ್.. ವೈರಲ್ ಹುಡ್ಗಿ ಹಾಡು ಮೆಚ್ಚಿದ ಸ್ಟಾರ್ಸ್! – ರಾತ್ರೋ ರಾತ್ರಿ ಫೇಮಸ್.. ಯುವತಿ ಯಾರು?

ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು.. ಸದ್ಯ ಇದೊಂದು ಹಾಡು ವೈರಲ್ ಆಗ್ತಿದೆ.. ಎಲ್ಲರ ಬಾಯಲ್ಲೂ ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ.. ಈ ಹಾಡು ಗುನುಗುಡ್ತಿದೆ.. ಎಷ್ಟು ಸ್ಕ್ರೋಲ್ ಮಾಡಿದ್ರೂ ಈ ಯುವತಿಯದ್ದೇ ವಿಡಿಯೋನೇ ಸಿಗ್ತಾ ಇದೆ.. ತನ್ನದೇ ದಾಟಿಯಲ್ಲಿ ಹಾಡಿರೋ ಯುವತಿ ಈ ಸಾಂಗ್ ಗೆ ಹೊಸ ಮೆರುಗು ತಂದಿದ್ದಾಳೆ. ಅಷ್ಟೇ ಅಲ್ಲಈಗ ಸೋಶಿಯಲ್ ಮೀಡಿಯಾದ ಹೊಸ ಕ್ರಶ್ ಆಗಿದ್ದಾಳೆ.
ಇದನ್ನೂ ಓದಿ: BPL ಕಾರ್ಡ್‌ದಾರರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಸರ್ಕಾರ – ಹೆಚ್ಚು ಆದಾಯವಿದ್ದರೆ ಕಾರ್ಡ್ ಕ್ಯಾನ್ಸಲ್ ಗ್ಯಾರಂಟಿ
ಈಗೇನಿದ್ದರೂ ಸೋಶಿಯಲ್ ಮೀಡಿಯಾ ಕಾಲ. ಯಾವಾಗ ಯಾರು.. ಹೇಗೆ ಫೇಮಸ್ ಆಗ್ತಾರೆ ಅನ್ನೋದೆ ಗೊತ್ತಾಗಲ್ಲ. ಸದ್ಯ ನಾವು ರೀಲ್ಸ್‌ಗಳ ಲೋಕದಲ್ಲಿದ್ದೇವೆ.. ಅದೆಷ್ಟೋ ವರ್ಷಗಳ ಹಿಂದಿನ ಹಾಡುಗಳು.. ಹಾಡಿನ ಯಾವುದಾದ್ರೂ ಒಂದು ಸಾಲು ಕೂಡ ಕೆಲವೊಮ್ಮೆ ಸಕತ್ ಹಿಟ್ ಆಗುತ್ತವೆ. ಕೆಲ ಸಮಯದ ಹಿಂದೆ ಓ ನಲ್ಲ, ನೀನಲ್ಲ.. ಸಾಂಗ್ ಫುಲ್ ಟ್ರೆಂಡ್ ಆಗಿತ್ತು.. ಈ ಹಾಡಿಗೆ ಅದೆಷ್ಟೋ ಜನ ರೀಲ್ಸ್ ಡ್ಯಾನ್ಸ್ ಮಾಡಿದ್ರು. ಇದೀಗ ಇದೇ ಸಾಲಿಗೆ ಶ್ರೇಯಾ ಘೋಷಾಲ್ ಹಾಡಿರೋ ಹಾಡು ಸೇರ್ಪಡೆಯಾಗಿದೆ. ಯುವತಿಯೊಬ್ಬಳು, ತನ್ನದೇ ದಾಟಿಯಲ್ಲಿ ಹಾಡಿ ರಾತ್ರೋ ರಾತ್ರಿ ಫೇಮಸ್ ಆಗಿದ್ದಾಳೆ.
ಕಳೆದ ಎರಡ್ಮೂರು ದಿನಗಳಿಂದ ಯುವತಿಯೊಬ್ಬಳು ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಎಂಬ ಹಾಡನ್ನ ಹಾಡಿ ಸಖತ್ ವೈರಲ್ ಆಗ್ತಿದ್ದಾಳೆ. ಅಂದ್ಹಾಗೆ ಈ ಹಾಡು, 2009ರಲ್ಲಿ ರಿಲೀಸ್ ಆದ ಬಿರುಗಾಳಿ ಸಿನಿಮಾದ್ದು.. ಆ ದಿನಗಳು ಚೇತನ್ ಕುಮಾರ್, ಚರಿಷ್ಮಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಚಿತ್ರದ ಹಾಡುಗಳು ಆ ಕಾಲದಲ್ಲೇ ಹಿಟ್ ಆಗಿದ್ದವು. ಈ ಸಿನಿಮಾದ ಹೂವಿನ ಬಾಣದಂತೆ ಮೆಲೋಡಿ ಸಾಂಗ್ ಅನ್ನ ಶ್ರೇಯಾ ಘೋಷಲ್ ಹಾಡಿದ್ರು.. ಇದೇ ಹಾಡನ್ನ ಈ ಯುವತಿ ಹಾಡಿದ್ದು, ಒರಿಜಿನಲ್ ಹಾಡೇ ಮರೆತು ಹೋಗುವಂತೆ ಮಾಡಿದ್ದಾಳೆ.. ಕಳೆದ ಎರಡ್ಮೂರು ದಿನಗಳಿಂದ ಇಂಟರ್‌ನೆಟ್ ಧೂಳೆಬ್ಬಿಸ್ತಿದ್ದಾಳೆ. ಮಿಲಿಯನ್ ಗಟ್ಟಲೇ ವೀನ್ಸ್ ಪಡೆದುಕೊಂಡಿದೆ. ಇದೀಗ ಶ್ರೇಯಾ ಘೋಷಾಲ್ ಹಾಗೂ ಈ ಯುವತಿ ಹಾಡಿದ ಹಾಡನ್ನ ರಿಮೀಕ್ಸ್ ಮಾಡ್ತಿದ್ರೆ.. ಇನ್ನು ಕೆಲವರು ಕಂಪ್ಯಾರ್ ಮಾಡ್ತಿದ್ದಾರೆ. ಮತ್ತೆ ಕೆಲವರು ಆಕೆ ವಾಯ್ಸ್ ಗೆ ರೀಲ್ಸ್ ಮಾಡ್ತಿದ್ದಾರೆ.
ಈ ವೈರಲ್ ಹುಡುಗಿ ಯಾರು ಅನ್ನೋದು ಸದ್ಯ ಗೊತ್ತಾಗಿದೆ. ಇನ್ಸ್ಟಾಗ್ರಾಂ ನಲ್ಲಿ ಆಕೆಯ ಪ್ರೋಫೈಲ್ ಅಮ್ಮು ಗೌಡ ಅಂತಾ ಇದೆ. ಆಕೆ ಗೌತಮ್ ಟ್ರಸ್ಟ್ ಶಿಬಿರಾರ್ಥಿ.. ಶಿಬಿರದಲ್ಲೇ ಈ ಹಾಡನ್ನ ಹಾಡಿದ್ದಾಳೆ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ ಈಕೆ ವೈರಲ್ ಆಗ್ತಿದ್ದಂತೆ ಆಕೆಯ ಇನ್ಸ್ಟಾಗ್ರಾಮ್ ಫಾಲೋವರ್ಸ್ ಕೂಡ ಜಾಸ್ತಿಯಾಗಿದ್ದಾರೆ. ಸದ್ಯ 20 ಸಾವಿರಕ್ಕೂ ಅಧಿಕ ಫಾಲೋವರ್ಸ್ ನ ಸಂಪಾದಿಸಿದ್ದಾಳೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ಸಿನಿಮಾದ ಹಾಡನ್ನ ಅದೇ ಸ್ಟೈಲ್ ನಲ್ಲಿ ಹಾಡಿದ್ದಾಳೆ. ಆಕಾಶ್ ಸಿನಿಮಾದ ನೀನೇ ನೀನೇ ನನಗೆಲ್ಲಾ ನೀನೆ ಹಾಡನ್ನ ಹಾಡಿದ್ದು, ಈ ಹಾಡು ಕೂಡ ಸಖತ್ ವೈರಲ್ ಆಗಿದೆ.
ಇನ್ನು ಈ ಸಾಂಗ್ ಹೇಳಿದ ಯುವತಿ ಕಾನ್ಫಿಂಡೆನ್ಸ್ ಗೆ ಮೆಚ್ಚಲೇ ಬೇಕು.. ಯಾಕಂದ್ರೆ ಈ ಹುಡುಗಿ ಹಾಡುವಾಗ, ಆಕೆ ಧ್ವನಿಯನ್ನು ಕೇಳಿ ಅಕ್ಕ ಪಕ್ಕದಲ್ಲಿದ್ದ ಸ್ನೇಹಿತರೇ ನಕ್ಕಿದ್ದಾರೆ. ಆದರೆ ಯುವತಿ ಮಾತ್ರ ಧೈರ್ಯ ಕಳೆದುಕೊಳ್ಳದೇ ಹಾಡನ್ನು ಮುಂದುವರೆಸಿದ್ದಾಳೆ. ಈಕೆ ಆತ್ಮ ವಿಶ್ವಾಸ ಕಂಡು ಎಲ್ಲರೂ ಶಹಬ್ಬಾಸ್ ಎಂದಿದ್ದಾರೆ. ಇನ್ನು ಆಕೆ ಧ್ವನಿ ಮುದ್ದಾಗಿದೆ.. ಎಷ್ಟು ಕೇಳಿದ್ರೂ ಬೋರ್ ಅನ್ನಿಸ್ತಿಲ್ಲ.. ಮತ್ತೆ ಮತ್ತೆ ಕೇಳ್ಬೇಕು ಅನ್ನಿಸುತ್ತೆ.. ಬೆಸ್ಟ್ ಸಿಂಗರ್ ನೀನು.. ನಗೋರಿಗೆ ಹಾಡೋಕೆ ಬರಲ್ಲ, ನೀನು ಅವರಿಗಿಂತ ಒಂದು ಹೆಜ್ಜೆ ಮುಂದೇ ಇದ್ದಿಯಾ.. ನಿನ್ಗೆ ಒಳ್ಳೆಯ ವೇದಿಕೆ ಸಿಗುತ್ತೆ ಅಂತ ಕಮೆಂಟ್ ಮಾಡಿದ್ದಾರೆ. ವಿಶೇಷವೆಂದರೆ ‘ಇಂಡಿಯನ್ ಐಡಲ್’ ನಂತಹ ಶೋನಲ್ಲಿ ಮಿಂಚಿ, ಇಂದು ಕನ್ನಡ ಮತ್ತು ಹಿಂದಿ ಸಿನಿಮಾರಂಗದಲ್ಲಿ ಫೇಮಸ್ ಸಿಂಗರ್ಸ್ ಆಗಿರುವ ನಿಹಾಲ್ ತಾವೋ ಹಾಗೂ ‘ದ್ವಾಪರ..’ ಹಾಡನ್ನು ಹಾಡಿದ ಜಸ್ಕರಣ್ ಸಿಂಗ್ ಸೇರಿದಂತೆ ಹಲವರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಸದ್ಯ ಯುವತಿಯ ಈ ಹಾಡು ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡ್ತಿದ್ದಂತೆ, ಆ ಹುಡುಗಿ ಯಾರು? ಯಾವ ಕಾಲೇಜು? ಯಾಕೆ ಹೀಗೆ ಹಾಡಿದ್ಲು ಅಂತಾ ಹುಡುಕಾಟ ನಡೆಸಿದ್ದಾರೆ.. ಒಟ್ನಲ್ಲಿ ಈ ಯುವತಿ ಗೊತ್ತಿದ್ದೂ. ಗೊತ್ತಿಲ್ಲದೆಯೋ ವೈರಲ್ ಆಗಿ, ಕರ್ನಾಟಕರ ಕ್ರಶ್ ಅನಿಸಿಕೊಂಡಿದ್ದಾಳೆ.

ನೋಡಿರಿ

