ಕಂದಮ್ಮನ ಭವಿಷ್ಯಕ್ಕಾಗಿ ಅಮ್ಮನ ಹೋರಾಟ! – ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಿರುವ ಮಹಾತಾಯಿ!

ತಾಯಿಯ ಪರಿಶುದ್ಧವಾದ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಮಕ್ಕಳ ಸಂತೋಷದಲ್ಲೇ ತನ್ನ ಖುಷಿಯನ್ನು ಕಾಣುತ್ತಾಳೆ. ತನಗೆ ಎಷ್ಟು ನೋವಾದ್ರೂ ಪರವಾಗಿಲ್ಲ, ತಾನು ಹೆತ್ತ ಮಗು ಖುಷಿಯಾಗಿ ಇರ್ಬೇಕು ಅಂತಾ ಬಯಸ್ತಾಳೆ. ಇದೀಗ ಇಲ್ಲೊಬ್ಬಳು ಮಹಾತಾಯಿ ಮಗುವನ್ನ ಮಡಿಲಲ್ಲಿ ಕೂಡಿಸಿಕೊಂಡು ಆಟೋ ಓಡಿಸುತ್ತಿದ್ದಾಳೆ. ಈ ಮನ ಮಿಡಿಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 2 ವಾರದಲ್ಲಿ 200 ಕೋಟಿ ಕ್ಲಬ್ ಸೇರಿದ ಲೋಕ – 15 ದಿನಗಳಲ್ಲಿ ಧೂಳೆಬ್ಬಿಸಿದ ಮಲಯಾಳಂ ಚಿತ್ರ
ಅಮ್ಮನ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧವಾಗಿರ್ತಾಳೆ. ಮಗುವನ್ನ ನೋಡಿಕೊಳ್ಳುವುದರ ಜೊತೆಗೆ ಬದುಕಿನ ಬಂಡಿ ಸಾಗಿಸುತ್ತಾಳೆ ಅನ್ನೋದಿಕ್ಕೆ ವೈರಲ್ ಆಗಿರುವ ವಿಡಿಯೋನೇ ಸಾಕ್ಷಿ. ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಎದೆಗೆ ಅಪ್ಪಿಕೊಂಡು ಆಟೋ ಓಡಿಸಿ ಬದುಕಿನ ಬಂಡಿ ಸಾಗಿಸುತ್ತಿದ್ದಾಳೆ. ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
come-learndrivingskills ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಮಡಿಲಿನಲ್ಲಿ ಕೂರಿಸಿ, ಎದೆಗೆ ಅಪ್ಪಿಕೊಂಡು, ಆಟೋ ಓಡಿಸುತ್ತಿದ್ದಾಳೆ. ಬದುಕಿಗಾಗಿ ಆಟೋ ಓಡಿಸುವ ಕಾಯಕವನ್ನು ಅವಲಂಬಿಸಿಕೊಂಡಿರುವುದನ್ನು ಕಾಣಬಹುದು. ಟ್ರಾಫಿಕ್ ನಡುವೆ ಆಟೋ ನಿಂತಿದ್ದು, ಈ ಕಂದಮ್ಮನನ್ನು ಮುದ್ದಿಸುತ್ತಿದ್ದಾಳೆ.
ಈ ವಿಡಿಯೋ ಇದುವರೆಗೆ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ಬಳಕೆದಾರರೊಬ್ಬರು ಸಾವಿರ ಸಾರಿ ಚಿಂತಿಸಿದರೂ, ನಿನ್ನ ಪ್ರೀತಿಯ ಸಾಟಿಗೊಂದು ಪದವಾದರೂ ಸಿಗಬಹುದೇ? ಎಂದು ಹೇಳಿದ್ದಾರೆ. ಸಂಸಾರ ಎಂಬ ಯುದ್ಧಕ್ಕೆ ಕೃಷ್ಣನಂತೆ ಏರಿದಳು ಸಾರಥಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಪ್ರಪಂಚದಲ್ಲಿ ಬೆಲೆ ಕಟ್ಟಲಾಗದ ಪ್ರೀತಿ ಅಂದ್ರೆ ಅದು ತಾಯಿಯ ಪ್ರೀತಿ ಮಾತ್ರ ಎಂದಿದ್ದಾರೆ.

ನೋಡಿರಿ

