ವರದಕ್ಷಿಣೆಗಾಗಿ ಮಗಳನ್ನ ಕೊಂದ ಅತ್ತೆ, ಮಾವ – ಶವ ಕಂಡು ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ!

ವರದಕ್ಷಿಣೆಗಾಗಿ ಮಗಳನ್ನ ಕೊಂದ ಅತ್ತೆ, ಮಾವ – ಶವ ಕಂಡು ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ!

ಮದುವೆ ಆಗೋಕೆ ಹೆಣ್ಣು ಸಿಗ್ತಿಲ್ಲ ಎಂಬ ಕಾಲ ಇದು. ಯಾವುದೇ ವರದಕ್ಷಿಣೆ ಬೇಡ, ಹುಡುಗಿ ಕೊಡಿ ಸಾಕು ಅಂತ ಗಂಡಿನ ಕಡೆಯವರು ಕೇಳಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಕಾಲದಲ್ಲಿಯೂ ಇನ್ನೂ ವರದಕ್ಷಿಣೆ ಕಿರುಕುಳದ ಕೇಸ್​​ಗಳು ಕಡಿಮೆ ಆಗುತ್ತಿಲ್ಲ. ಇಲ್ಲು ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಇದೀಗ ವರದಕ್ಷಿಣೆಗಾಗಿ ಮಹಿಳೆಯ ಕೊಲೆಯಾಗಿದ್ದು, ಮಗಳ ಶವ ಕಂಡು ತಾಯಿಯೂ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ! – ಸ್ಪರ್ಶ ಆಸ್ಪತ್ರೆಯ ತಂಡದಿಂದ ರೋಚಕ ಕಾರ್ಯಾಚರಣೆ!

ಏನಿದು ಘಟನೆ?

ಈ ಘಟನೆ ಬಿಹಾರದಲ್ಲಿ ನಡೆದಿದೆ. ಮೃತರನ್ನು ಸುನೈನಾ ದೇವಿ ಮತ್ತು ಅವರ ತಾಯಿ ಬಬ್ಲಿ ದೇವಿ ಎಂದು ಗುರುತಿಸಲಾಗಿದೆ. ಸುನೈನಾ ದೇವಿಯ ಗಂಡನಿಗೆ ಸರಿಯಾದ ಕೆಲಸವಿರಲಿಲ್ಲ ಹೀಗಾಗಿ ಅವರ ನಡುವೆ ನಿತ್ಯವೂ ಜಗಳವಾಗುತ್ತಿತ್ತು. ಹಾಗೆಯೇ ಆಕೆಯ ಅತ್ತೆ-ಮಾವ ವರದಕ್ಷಿಣೆಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು. ಬಳಿಕ ಮಹಿಳೆಯೊಬ್ಬಳನ್ನು ಆಕೆಯ ಅತ್ತೆ-ಮಾವ ಕತ್ತು ಹಿಸುಕಿ ಕೊಂದಿದ್ದಾರೆ.

ಮಗಳ ಶವ ಕಂಡು ತಾಯಿಯೂ ಸಾವು!

ಸುನೈನಾ ಅವರ ಸಾವಿನ ಸುದ್ದಿ ಅವರ ಕುಟುಂಬಕ್ಕೆ ತಲುಪಿದಾಗ, ಅವರ ತಾಯಿ ಭಾಗಲ್ಪುರದ ಜೆಎಲ್ಎನ್ ಆಸ್ಪತ್ರೆಗೆ ಸಂಬಂಧಿಕರೊಬ್ಬರೊಂದಿಗೆ ಬಂದಿದ್ದರು. ಮಗಳ ಶವವನ್ನು ನೋಡಿದ ಬಬ್ಲಿ ದೇವ್ ಆಘಾತದಿಂದ ಕುಸಿದು ಬಿದ್ದಾರೆ. ಕೂಡಲೇ ವೈದ್ಯರು ಆಕೆಯನ್ನ ಪರಿಶೀಲಿಸಿದ್ದು, ಅಷ್ಟರಲ್ಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Shwetha M