2 ವಾರದಲ್ಲಿ 200 ಕೋಟಿ ಕ್ಲಬ್ ಸೇರಿದ ಲೋಕ – 15 ದಿನಗಳಲ್ಲಿ ಧೂಳೆಬ್ಬಿಸಿದ ಮಲಯಾಳಂ ಚಿತ್ರ
ಲೋಕ ಸಿನಿಮಾದ ಗುಹೆಗಾಗಿ ಶುರುವಾಗಿದೆ ಹುಡುಕಾಟ

ಮಲಯಾಳಂ ಸಿನಿಮಾ ‘ಲೋಕ’ ಇದೀಗ ಬಾಕ್ಸಾಫೀಸ್ ಗಳಿಕೆಯಲ್ಲಿ ಧೂಳೆಬ್ಬಿಸಿದೆ. ರಿಲೀಸ್ ಆದ ಕೇವಲ 15 ದಿನಗಳಲ್ಲಿ 200 ಕೋಟಿ ಗಳಿಸಿದೆ. ಮಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ ಲೋಕ ಚಿತ್ರ. ಇದೀಗ ಸಿನಿಮಾ ಸಕ್ಸಸ್ ಆದ ಮೇಲೆ ಗುಹೆಯ ಹುಡುಕಾಟ ಜೋರಾಗಿ ಸಾಗಿದೆ.
ಇದನ್ನೂ ನೋಡಿ: ಶಿವು ತಂಗಿ ರಾಣಿ ಅಂದರೆ ಸುಮ್ನೆನಾ? – ಆಸ್ತಿ ಪತ್ರಕ್ಕೆ ನಕಲಿ ಸಹಿ ಹಾಕಿ, ಶತ್ರುಗಳ ತಲೆಕೆಡಿಸಿದ ರಾಣಿ..!
ನಟಿ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಮಲಯಾಳಂ ಚಿತ್ರ ಲೋಕ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯಲು ಹೊರಟಿದೆ. ರಿಲೀಸ್ ಆಗಿ ಜಸ್ಟ್ 15 ದಿನಗಳಲ್ಲಿ ಸಿನಿಮಾ 200 ಕೋಟಿ ಮೀರಿ ಆಗಿದೆ. ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಶೂಟಿಂಗ್ ಮಾಡಿರುವ ಸ್ಥಳ, ನಟರು, ವಿಮರ್ಶೆ ಅಂತ ಸಿನಿಮಾ ಕುರಿತು ಚರ್ಚೆ ಜೋರಾಗಿದೆ. ಇನ್ನು ಈ ಚಿತ್ರದ ಹೈಲೆಟ್ಸ್ ಶೂಟಿಂಗ್ ಸ್ಥಳಗಳು. ಗುಹೆಯ ದೃಶ್ಯಗಳನ್ನು ಚಿತ್ರೀಕರಿಸಿದ ಭವ್ಯ ಸ್ಥಳಗಳ ಬಗ್ಗೆ ಸರ್ಚಿಂಗ್ ಶುರುವಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಕೇರಳದ ವಿವಿಧ ಗುಹೆಗಳ ಬಗ್ಗೆ ಮಾತನಾಡಿ ಇದೇ ಶೂಟಿಂಗ್ ಸ್ಪಾಟ್ ಇರಬಹುದು ಎಂದು ಊಹಿಸುತ್ತಿದ್ದಾರೆ. ಇದರ ಮಧ್ಯೆ, ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ರಿಯಲ್ ಲೊಕೇಷನ್ ಬಗ್ಗೆ ಕೆಲ ಮಾಹಿತಿ ಹಂಚಿಕೊಂಡಿದೆ.
ಲೋಕ ಸಿನಿಮಾ ಶೂಟಿಂಗ್ ಮಾಡಿರುವ ಮೂಲ ಸ್ಥಳ ಕಣ್ಣೂರಿನ ಕುಂಜಿಪರಂಬ ಗುಹೆಗಳು. ಕೇರಳದ ಕಣ್ಣೂರು ಜಿಲ್ಲೆಯಲ್ಲಿದೆ. ಈ ಗುಹೆಗಳು ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲ್ಲೂಕಿನ ಪಯ್ಯವೂರಿನಲ್ಲಿರುವ ಖಾಸಗಿ ರಬ್ಬರ್ ತೋಟದಲ್ಲಿವೆ. ಕಣ್ಣೂರು ನಗರದಿಂದ ಸುಮಾರು 46 ಕಿ.ಮೀ ದೂರದಲ್ಲಿದೆ.
ಸ್ವಯಂ-ರಚಿತವಾದ, ನೈಸರ್ಗಿಕ ಗುಹೆ ಇದಾಗಿದ್ದು, ಇದು ಸುಮಾರು 500 ಮೀಟರ್ ಉದ್ದ ಮತ್ತು ಸುಮಾರು 15 ಮೀಟರ್ ಎತ್ತರವಿದೆ ಎಂದು ಹೇಳಲಾಗುತ್ತದೆ. ಇದು ಎರಡು ಕ್ಯಾಬಿನ್ಗಳನ್ನು ಹೊಂದಿದೆ. ಹಿಂದೆ ಈ ಸ್ಥಳವನ್ನು ಸುತ್ತಾಡಿರುವ ಮಂದಿ “ಗುಹೆಯೊಳಗೆ ಹಗಲಿನ ವೇಳೆಯಲ್ಲಿಯೂ ಸಹ ಇದು ತುಂಬಾ ಕತ್ತಲೆಯಾಗಿದೆ, ಸ್ಪಷ್ಟವಾಗಿ ನೋಡಲು ನಮಗೆ ಟಾರ್ಚ್ ಬೇಕಾಗುತ್ತದೆ ಎಂದಿದ್ದಾರೆ. ಸಾಂದರ್ಭಿಕ ಬೆಳಕಿನ ರಂಧ್ರಗಳಿವೆ. ಗುಹೆಗಳು ಬಾವಲಿಗಳ ಮನೆಯಾಗಿ ಬದಲಾಗಿದೆ. ಅವುಗಳ ಮಲದಿಂದ ಬರುವ ವಾಸನೆಯು ಸಾಕಷ್ಟು ಬಲವಾಗಿರುತ್ತದೆ. ಮಳೆಗಾಲದಲ್ಲಿ ಗುಹೆಗಳಲ್ಲಿ ಮಳೆನೀರು ತುಂಬುವುದರಿಂದ ಯಾರೂ ಅಲ್ಲಿಗೆ ಹೋಗುವುದಿಲ್ಲ.
ಗುಹೆಗೆ ಭೇಟಿ ನೀಡುವವರನ್ನು ಕರೆದೊಯ್ಯುವ ಮೆಟ್ಟಿಲುಗಳನ್ನು ರೂಪಿಸುವಲ್ಲಿ ಸ್ಥಳೀಯ ಪಾದ್ರಿಯೊಬ್ಬರು ಪ್ರಮುಖ ಪಾತ್ರ ವಹಿಸಿದ್ದರು. ಈ ಗುಹೆಗಳು ಹಿಂದೆ ಇತರ ಅನೇಕ ಸಿನಿಮಾಗಳ ಚಿತ್ರೀಕರಣಕ್ಕೂ ಬಳಸಲಾಗಿದೆ. ಇದು ಪ್ರವಾಸಿ ತಾಣ ಅಲ್ಲ ಗುಹೆಗಳು ಖಾಸಗಿ ಜಮೀನಿನಲ್ಲಿ ಇರುವುದರಿಂದ, ಇದನ್ನು ಪಂಚಾಯತ್ ಪ್ರವಾಸೋದ್ಯಮಕ್ಕಾಗಿ ಅಧಿಕೃತವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಪ್ರವಾಸಿಗರು ಇನ್ನೂ ಗುಹೆಗಳಿಗೆ ಭೇಟಿ ನೀಡುತ್ತಾರೆ.

ನೋಡಿರಿ

