ನಾಡಹಬ್ಬದಲ್ಲಿ ಇಷ್ಟದ ರುಚಿ ಸವಿಯಲು ರೆಡಿಯಾಗಿ- ಈ ಬಾರಿ 15 ದಿನ ನಡೆಯಲಿದೆ ದಸರಾ ಆಹಾರ ಮೇಳ

ಮೈಸೂರಲ್ಲಿ ದಸರಾ ನೋಡಲು ಬಂದವರು ಆಹಾರ ಮೇಳವನ್ನು ಮಿಸ್ ಮಾಡುವುದೇ ಇಲ್ಲ. ಅದಕ್ಕಾಗಿ ಈ ಬಾರಿ ಆಹಾರ ಪ್ರಿಯರಿಗೆ ಮೈಸೂರು ಜಿಲ್ಲಾಡಳಿತ ಗುಡ್ನ್ಯೂಸ್ ಕೊಟ್ಟಿದೆ. ಈ ಬಾರಿ 15 ದಿನ ಆಹಾರ ಮೇಳ ನಡೆಯಲಿದೆ.
ಇದನ್ನೂ ಓದಿ: ಸರ್ಕಸ್ನಲ್ಲಿ ಸಿಕ್ಕವಳಿಗೆ ಅರಮನೆಯಲ್ಲಿ ವೈಭೋಗ – ಎಲ್ಲರಿಗೂ ಅಚ್ಚು ಮೆಚ್ಚು ಬಳ್ಳೆ ಲಕ್ಷ್ಮಿ..!
ದಸರಾ ಹಬ್ಬ ಅಂದ್ರೆನೇ ಖುಷಿಯ ಹಬ್ಬ. ಅದರಲ್ಲೂ ದಸರಾ ಆಹಾರ ಮೇಳ ಪ್ರಮುಖ ಆಕರ್ಷಣೆ. ನಾಡಹಬ್ಬ ನೋಡಲು ಬಂದವರು ತಮ್ಮ ತಮ್ಮ ನಾಲಗೆಯ ರುಚಿ ತಣಿಸಿಕೊಳ್ಳದೇ ಹೋಗುವುದೇ ಇಲ್ಲ. ಇಲ್ಲಿ ಅನೇಕ ವಿಧ ವಿಧ ತಿಂಡಿಗಳು ಸವಿಯುವುದಕ್ಕೆ ಸಿಗುತ್ತದೆ. ಪ್ರತಿ ಬಾರಿಯೂ ಆಹಾರ ಮೇಳ ಕೇವಲ ದಸರಾ ಸಮಯದಲ್ಲಿ ಮಾತ್ರ ಇರ್ತಿತ್ತು. ಆದ್ರೆ, ಈಗ ಜನರಿಗೆ ಮೈಸೂರು ಜಿಲ್ಲಾಡಳಿತ ಗುಡ್ ನ್ಯೂಸ್ ನೀಡಿದೆ. ಹೌದು. ಈ ಬಾರಿ 15 ದಿನ ಆಹಾರ ಮೇಳ ಇರಲಿದೆ. ದಸರಾ ಮುಗಿದರು ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ. ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ರಾತ್ರಿ ಸಮಯದಲ್ಲಿ ಸಾವಿರಾರು ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಈ ಕಾರಣದಿಂದ ಮೈಸೂರು ಜಿಲ್ಲಾಡಳಿತ ಈ ಬಾರಿ ಆಹಾರ ಮೇಳದ ಅವಧಿಯನ್ನು ವಿಸ್ತರಣೆ ಮಾಡಿದೆ. ಅಕ್ಟೊಬರ್ 5 ರವರೆಗೆ ಆಹಾರ ಮೇಳ ಪ್ರತಿ ವರ್ಷ ಅಹಾರ ಮೇಳ ಜಂಬೂ ಸವಾರಿ ದಿನದಂದೆ ಅಂತ್ಯಗೊಳ್ಳುತ್ತಿತ್ತು ಆದರೆ ಈ ವರ್ಷ ಸೆಪ್ಟೆಂಬರ್ 22 ರಂದು ದಸರಾ ಉದ್ಘಾಟನೆ ದಿನದಂದೆ ಆಹಾರ ಮೇಳವು ಉದ್ಘಾಟನೆಗೊಳ್ಳಲಿದೆ. ಅಲ್ಲಿಂದ ಅಕ್ಟೋಬರ್ 2 ರಂದು ಜಂಬೂಸಾವರಿ ಮೆರವಣಿಗೆ ನಡೆಯಲಿದೆ.
ಜಂಬೂಸವಾರಿ ಮುಗಿದ ನಂತರ ಶನಿವಾರ ಭಾನುವಾರ ವಾರಾಂತ್ಯ ಸೇರಿದಂತೆ ಅಕ್ಟೊಬರ್ 5 ರವರೆಗೆ ಈ ಬಾರಿ 15 ದಿನಗಳ ಕಾಲ ಅಹಾರ ಮೇಳ ನಡೆಯಲಿದೆ. ಆಹಾರ ಮೇಳದಲ್ಲಿ ಮಳಿಗೆ ತೆಗೆಯುವುದಕ್ಕೆ ಬಾರಿ ಬೇಡಿಕೆ ಶುರುವಾಗಿದೆ. ಮೇಳದಲ್ಲಿ 120 ಮಳಿಗೆ ತೆರೆಯುವುದಕ್ಕೆ ನಿರ್ಧಾರ ಮಾಡಿದ್ದು, 250 ಕ್ಕೂ ಹೆಚ್ಚು ಅರ್ಜಿಗಳು ಆಹಾರ ಮೇಳದಲ್ಲಿ ಮಳಿಗೆ ತೆರೆಯುವುದಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ನೋಡಿರಿ

