ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಹಾಕುತ್ತಾ RSS? – ಲಾಠಿ ಏಟು ತಿಂದಿದ್ದ ಯುವತಿ ವಿರುದ್ಧ FIR

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಅದರಲ್ಲೂ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿದ್ದು ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ. ಲಾಠಿ ಪ್ರಹಾರದ ವೇಳೆ ಜ್ಯೋತಿ ಎಂಬ ಯುವತಿ ರಸ್ತೆಯಲ್ಲೇ ಬಿದ್ದು ಒದ್ದಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅದೇ ಯುವತಿ ಮೇಲೆ ಎಫ್ ಐಆರ್ ದಾಖಲಾಗಿದೆ.
ಇದನ್ನೂ ಓದಿ : ಭಾರತ ಪಾಕ್ ಮ್ಯಾಚ್ ರದ್ದು ಕೋರಿ ಪಿಐಎಲ್ – ಮ್ಯಾಚ್ ನಡೆಸೋಕೆ ಸುಪ್ರೀಂ ಗ್ರೀನ್ ಸಿಗ್ನಲ್
ಮಂಡ್ಯ ಜಿಲ್ಲೆ ಮದ್ದೂರು ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಖಂಡಿಸಿ ಹಿಂದೂ ಕಾರ್ತಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಜ್ಯೋತಿ ಎನ್ನುವ ಯುವತಿಗೂ ಸಹ ಲಾಠಿ ಏಟು ಬಿದ್ದಿತ್ತು. ನೋವಿನಿಂದ ಯುವತಿ ರಸ್ತೆಯಲ್ಲೇ ಬಿದ್ದು ಗೋಳಾಡಿದ್ದಳು. ಹಣೆ ಬಡಿದುಕೊಂಡು ಪೊಲೀಸರಿಗೆ ಹಿಡಿಶಾಪ ಹಾಕಿದ್ದಳು. ಸಿಎಂ ಸಿದ್ದರಾಮಯ್ಯಗೆ ಬೈದಿದ್ದಳು. ಇದಾದ ಬಳಿಕ ಜ್ಯೋತಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅಲ್ಲದೇ ಈಕೆಯ ಹಳೆಯ ರೀಲ್ಸ್ ಸಹ ವೈರಲ್ ಆಗಿವೆ. ಅದೇ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಿಎಂ ಹಾಗೂ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಮದ್ದೂರು ಠಾಣೆ ಪಿಐ ಶಿವಕುಮಾರ್ ದೂರು ಆಧರಿಸಿ ಮದ್ದೂರಿನ ಶಿವಪುರ ನಿವಾಸಿ ಜ್ಯೋತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅನ್ಯಧರ್ಮದ ಬಗ್ಗೆ ಧಕ್ಕೆಯಾಗುವ ಪದ ಬಳಕೆ, ಕೋಮುಗಳ ನಡುವೆ ಪರಸ್ಪರ ವೈಮನಸ್ಸು ಉಂಟು ಮಾಡುವ ಹೇಳಿಕೆ, ವೈರತ್ವ ಉತ್ತೇಜನ ನೀಡುವ ಆರೋಪದಡಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಗಣೇಶೋತ್ಸವ ಸಮಯದಲ್ಲಿ ಉಂಟಾದ ಕೋಮು ಗಲಭೆಯ ಲಾಭವನ್ನು ರಾಜ್ಯ ಬಿಜೆಪಿ ಪಡೆಯಲು ಪ್ರಯತ್ನಿಸಿತು. ಆದರೆ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಕಾಣಿಸಿಕೊಳ್ಳದೆ ಮದ್ದೂರಿನ ಹೋರಾಟದಲ್ಲಿ ಹಿನ್ನಡೆ ಉಂಟಾಯಿತು. ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಗ್ಗಟ್ಟು ಇಲ್ಲ ಅನ್ನೋದು ಎದ್ದು ಕಾಣುತ್ತಿತ್ತು. ಬಿಜೆಪಿಯಲ್ಲಿ ಬಿವೈ ವಿಜಯೇಂದ್ರ ನಾಯಕತ್ವಕ್ಕೆ ಪ್ರಬಲ ವಿರೋಧ ಇರೋದು ಮತ್ತೆ ಮತ್ತೆ ಮುನ್ನಲೆಗೆ ಬರುತ್ತಲೇ ಇದೆ. ಬಿವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಗೇಟ್‌ಪಾಸ್ ನೀಡಬೇಕು ಎಂದು ಬಿಜೆಪಿಯ ಒಂದು ಗುಂಪು ಪ್ರಬಲವಾಗಿ ಹೋರಾಟ ಮಾಡಿತ್ತು. ಆದ್ರೀಗ ಹೋರಾಟಗಳಲ್ಲೂ ಕೂಡ ಒಗ್ಗಟ್ಟು ಇಲ್ಲದೆ ಇರೋದು ಕಾಣ್ತಿದೆ. ರಾಜ್ಯ ಬಿಜೆಪಿಯ ಗುಂಪುಗಾರಿಕೆಗೆ RSS ಶಮನ ಮಾಡಲು ಮುಂದಾಗಿದ್ದು, ಶಿಸ್ತು, ಸಂಘಟನೆ, ಸಿದ್ಧಾಂತ ವಿಚಾರವಾಗಿ ಆರ್‌ಎಸ್ಎಸ್ ಪಾಠ ಮಾಡಲು ನಿರ್ಧರಿಸಿದೆ. ಹೀಗಾಗಿ ಚಿಂತನ ಶಿಬಿರದ ಹೆಸರಲ್ಲಿ ಆರೆಸ್ಸೆಸ್ ನೀತಿ ಪಾಠ ಮಾಡಲು ಇದೇ ಸೆ.18-19ರಂದು ಖಾಸಗಿ ಹೋಟೆಲ್‌ನಲ್ಲಿ ಶಿಬಿರವನ್ನು ಆಯೋಜಿಸಿದೆ.

ನೋಡಿರಿ

