ಅಭಿ-ಗಿಲ್ ಫಾರ್ಮುಲಾ ಸಕ್ಸಸ್ – ಭಾರತಕ್ಕೆ ಪ್ಲಸ್ ಆಗುತ್ತಾ ದುಬೈ ಪಿಚ್?

ಅಭಿ-ಗಿಲ್ ಫಾರ್ಮುಲಾ ಸಕ್ಸಸ್ – ಭಾರತಕ್ಕೆ ಪ್ಲಸ್ ಆಗುತ್ತಾ ದುಬೈ ಪಿಚ್?

ಏಷ್ಯಾಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಯುಎಇ ಟೀಮ್​ಗಳು ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ಭಾರತವೇ ಗೆಲ್ಲೋದು ಅನ್ನೋದು ಇಡೀ ಜಗತ್ತಿಗೇ ಗೊತ್ತಿತ್ತು. ಮ್ಯಾಚ್ ನೋಡ್ಬೇಕಾದ್ರೆ ಯುಎಇ ತಂಡದ ಆಟಗಾರರ ಬಾಡಿ ಲಾಂಗ್ವೇಜ್ ನೋಡ್ತಾ ಇದ್ರೆ ಗೆಲ್ಲೋದಿರ್ಲಿ ಫೈಟ್ ಕೊಡ್ತೇವೆ ಅನ್ನೋ ಕಾನ್ಫಿಡೆನ್ಸ್ ಕೂಡ ಅವ್ರಲ್ಲಿ ಕಾಣ್ತಾ ಇರ್ಲಿಲ್ಲ. ಯಾಕಂದ್ರೆ ನಾವು ಆಡ್ತಾ ಇರೋದು ಜಗತ್ತಿನಲ್ಲೇ ನಂಬರ್ ಟಿ-20ಐ ಟೀಂ ಮತ್ತು ಪ್ಲೇಯರ್ಸ್ ವಿರುದ್ಧ ಅನ್ನೋದು ಅವ್ರಿಗೂ ಗೊತ್ತಿತ್ತು. ಸೋ ಇಡೀ ಮ್ಯಾಚ್ ನೋಡೋಕೆ ಒಂಥರಾ ಹೈಲೇಟ್ಸ್ ಥರನೇ ಇತ್ತು. ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡಿ ಆತಿಥೇಯ ತಂಡವನ್ನ ಸೋಲಿಸಿ 2 ಅಂಕಗಳನ್ನ ಖಾತೆಗೆ ಹಾಕಿಕೊಳ್ತು. ಅದ್ರಲ್ಲೂ ಬಿಗ್ ಮಾರ್ಜಿನ್​ನಿಂದ ಗೆದ್ದಿದ್ರಿಂದ ನೆಟ್ ರನ್ ರೇಟ್ +10.483 ಇದೆ.

ಇದನ್ನೂ ಓದಿ : UAE ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಗೆಲುವು – 4.3 ಓವರ್‌ಗಳಲ್ಲಿ ಆಟ ಮುಗಿಸಿದ ಟೀಂ IND

ಭಾರತದ ಬೌಲರ್ಸ್ ಎದುರು 57 ರನ್ ಗಳಿಗೆ ಯುಎಇ ಆಲೌಟ್!

ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್​ನ ಆಯ್ಕೆ ಮಾಡಿಕೊಳ್ತು. ಯುಎಇ ನಾಯಕ ಮೊಹಮ್ಮದ್ ವಾಸೀಮ್ ಹಾಗೂ ಅಲಿಶನ್ ಶರಾಫು ಇನ್ನಿಂಗ್ಸ್ ಆರಂಭಿಸಿದ್ರು. ಇಬ್ಬರು ಕೂಡ ಆರಂಭದಲ್ಲಿ ಚೆನ್ನಾಗೇ ಬ್ಯಾಟ್ ಬೀಸಿದ್ರು. 26 ರನ್​ಗಳ ಜೊತೆಯಾಟವಾಡಿದ್ರು. ಬಟ್ ಬಿಗ್ ಸ್ಕೋರ್ ಆಗಿ ಕನ್ವರ್ಟ್ ಮಾಡೋಕೆ ಟೀಂ ಇಂಡಿಯಾ ಬೌಲರ್ಸ್ ಬಿಡ್ಲಿಲ್ಲ. 17 ಎಸೆತಗಳಲ್ಲಿ ಅಲಿಶನ್ 22 ರನ್ ಸಿಡಿಸಿ ಔಟಾದ್ರು. ಇದರ ಬೆನ್ನಲ್ಲೇ ವಾಸೀಮ್ 19 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ರು. ಅಲ್ಲಿಂದ ಶುರುವಾದ ಪತನ ನಿಲ್ಲಲೇ ಇಲ್ಲ. ನಂಬರ್ 3 ಬ್ಯಾಟ್ಸ್​ಮನ್​ನಿಂದ ಹಿಡಿದು 10ವರೆಗೂ ವೈಯಕ್ತಿಕವಾಗಿ ಯಾರೊಬ್ರೂ 3 ರನ್​ಗಿಂತ ಜಾಸ್ತಿ ಗಳಿಸ್ಲೇ ಇಲ್ಲ. 13.1 ಓವರ್​ಗಳಲ್ಲೇ 57 ರನ್ ಗಳಿಸಿ ಆಲೌಟ್ ಆದ್ರು.

ಫಸ್ಟ್ ಬಾಲ್ ನಲ್ಲೇ ಸಿಕ್ಸ್ ಮೂಲಕ ಗರ್ಜಿಸಿದ ಭಾರತೀಯರು!

ಯುಎಇ ನೀಡಿದ 58 ರನ್‌ಗಳ ಗುರಿ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಫಸ್ಟ್ ಬಾಲ್ ನಲ್ಲೇ ಅಭಿಷೇಕ್ ಸಿಕ್ಸ್ ಸಿಡಿಸಿದ್ರೆ ನೆಕ್ಸ್ ಟ್ ಬಾಲ್​ನ ಬೌಂಡರಿಗಟ್ಟಿದ್ರು.      ಇತ್ತ ಶುಭ್ ಮನ್ ಗಿಲ್ ಕೂಡ ಸಿಕ್ಸ್, ಫೋರ್ ಗಳಲ್ಲೇ ಡೀಲ್ ಮಾಡ್ತಿದ್ರು. ಇವ್ರಿಬ್ರೇ ಮ್ಯಾಚ್ ಫಿನಿಶ್ ಮಾಡ್ತಾರೆ ಅನ್ನುವಾಗ 16 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ಮೂಲಕ 30 ರನ್ ಗಳಿಸಿದ್ದ ಅಭಿಷೇಕ್ ಶರ್ಮಾ ವಿಕೆಟ್ ಒಪ್ಪಿಸಿದ್ರು. ಆ ಬಳಿಕ ಮೂರನೇ ಸ್ಲಾಟ್ ನಲ್ಲಿ ಮೈದಾನಕ್ಕಿಳಿದ ಸೂರ್ಯ ಕೂಡ ಫಸ್ಟ್ ಬಾಲ್ ನ ಸಿಕ್ಸರ್ ಸಿಡಿಸಿದ್ರು. ಅಂತಿಮವಾಗಿ ಭಾರತ ತಂಡ  ಕೇವಲ 4.3 ಓವರ್‌ಗಳಲ್ಲಿ ಟಾರ್ಗೆಟ್ ಚೇಸ್ ಮಾಡಿ, T20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಅತ್ಯಂತ ವೇಗದ ಚೇಸ್ ದಾಖಲೆಯನ್ನು ಬರೆಯಿತು. ಭಾರತದ ಪರ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಇನ್ನು ಶಿವಂ ದುಬೆ 3, ವರುಣ್ ಚಕ್ರವರ್ತಿ 1, ಅಕ್ಸರ್ ಪಟೇಲ್ 1, ಜಸ್ಪ್ರೀತ್ ಬುಮ್ರಾ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಕಬಳಿಸಿದರು. ಬಟ್ ಇಲ್ಲಿ ಮ್ಯಾಚ್​ಗಿಂತ ಗಮನ ಸೆಳೆದಿದ್ದು ಭಾರತದ ಪ್ಲೇಯಿಂಗ್ 11.

ಬಲಿಷ್ಠ ಭಾರತ ತಂಡ!

ಬ್ಯಾಟಿಂಗ್ – ಅಭಿಶೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸ್
ಆಲ್ ರೌಂಡರ್ಸ್ – ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್,
ಬೌಲಿಂಗ್ – ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ

ಶುಭ್​ಮನ್ ಗಿಲ್ ಏಷ್ಯಾಕಪ್​ ತಂಡಕ್ಕೆ ಆಯ್ಕೆಯಾದಾಗಿನಿಂದಲೂ ಓಪನರ್ಸ್ ಯಾರು ಅನ್ನೋದೇ ದೊಡ್ಡ ಪ್ರಶ್ನೆಯಾಗಿತ್ತು. ಕೊನೆಗೂ ಅಭಿಷೇಕ್ ಶರ್ಮಾ ಜೊತೆ ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಇನ್ನು ಸಂಜು ಸ್ಯಾಮ್ಸನ್​ಗೂ ಅವಕಾಶ ಸಿಕ್ಕಿದ್ದು ಸ್ಲಾಟ್ ಚೇಂಜ್ ಆಗಿದೆ. ಕಳೆದ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3 ಶತಕ ಸಿಡಿಸಿರುವುದರಿಂದ ಸಂಜುರನ್ನ ಬೆಂಚ್ ಕಾಯಿಸೋಕೆ ಮ್ಯಾನೇಜ್​ಮೆಂಟ್ ರೆಡಿ ಇಲ್ಲ.  ಇನ್ನು ಮೂರನೇ ಸ್ಲಾಟ್​ನಲ್ಲಿ ಸೂರ್ಯಕುಮಾರ್ ಯಾದವ್​ರನ್ನ ಕಣಕ್ಕಿಳಿಸಿದ್ರೆ ನಾಲ್ಕನೇ ಸ್ಲಾಟ್​ನಲ್ಲಿ ತಿಲಕ್ ವರ್ಮಾ ಮತ್ತು ಐದನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಇರ್ತಾರೆ. ಅದ್ರಲ್ಲೂ ಇಂಟ್ರೆಸ್ಟಿಂಗ್ ಏನಪ್ಪಾ ಅಂದ್ರೆ ಟೂರ್ನಿಗೆ ಸೆಲೆಕ್ಟ್ ಆಗಿದ್ದ ಮೂವರೂ ಆಲ್​ರೌಂಡರ್​ಗಳನ್ನ ಮೈದಾನಕ್ಕಿಳಿಸಿರೋದು. ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮೂರೂ ಜನ ಪ್ಲೇಯಿಂಗ್ 11ನಲ್ಲಿದ್ರು. ಬಟ್ ಬಿಗ್ ಸರ್ಪ್ರೈಸ್ ಏನಂದ್ರೆ  ಏಕೈಕ ಸ್ಪೆಷಲಿಸ್ಟ್ ವೇಗಿಯೊಂದಿಗೆ ಕಣಕ್ಕಿಳಿದಿದ್ದು. ಇಲ್ಲಿ ಸ್ಪಿನ್ನರ್​ಗಳಿಗೆ ಹೆಚ್ಚಿನ ಚಾನ್ಸ್ ಕೊಡೋಕೆ ಕಾರಣ ಯುಎಇ ಪಿಚ್. ಯುಎಇನ ಪಿಚ್​ಗಳು ಸ್ಪಿನ್ ಬೌಲರ್ ಫ್ರೆಂಡ್ಲಿ ಆಗಿರೋದ್ರಿಂದ ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಹಾಗೂ ಕುಲ್ದೀಪ್ ಯಾದವ್ ಮೂವರು ಅವಕಾಶ ಪಡೆದಿದ್ದಾರೆ. ಏಕೈಕ ಸ್ಪೆಷಲಿಸ್ಟ್ ವೇಗಿ ಸ್ಪ್ರೀತ್ ಬುಮ್ರಾ ಜೊತೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 2ನೇ ವೇಗಿಯಾಗಿ ಆಡಿದ್ರು. ಉಳಿದಂತೆ ರಿಂಕು ಸಿಂಗ್, ಜಿತೇಶ್ ಶರ್ಮಾ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಬೆಂಚ್ ಕಾಯಬೇಕಾಯ್ತು.

Shantha Kumari