ಪಿತೃ ಪಕ್ಷದಲ್ಲಿ ಆಹಾರವನ್ನು ಕಾಗೆ ಮುಟ್ಟದೇ ಇದ್ದರೆ ಅಥವಾ ಕಾಗೆ ಬಾರದೇ ಇದ್ದರೆ ಏನು ಮಾಡಬೇಕು.?

ಪಿತೃ ಪಕ್ಷದಲ್ಲಿ ಆಹಾರವನ್ನು ಕಾಗೆ ಮುಟ್ಟದೇ ಇದ್ದರೆ ಅಥವಾ ಕಾಗೆ ಬಾರದೇ ಇದ್ದರೆ ಏನು ಮಾಡಬೇಕು.?

ಪಿತೃ ಪಕ್ಷದ ಅವಧಿಯಲ್ಲಿ ಶ್ರಾದ್ಧ ಕಾರ್ಯವನ್ನು ಮಾಡುವಾಗ ನಾವು ಕಾಗೆಗಳಿಗೆ ಆಹಾರವನ್ನು ನೀಡುವುದು ಸಂಪ್ರದಾಯ. ಶ್ರಾದ್ಧ ಆಹಾರವನ್ನು ಕಾಗೆಗಳು ಸೇವಿಸಿದಾಗ ಮಾತ್ರ ಅದು ಪರಿಪೂರ್ಣವೆನಿಸಿಕೊಳ್ಳುತ್ತೆ. ಆದ್ರೆ ಪಿತೃ ಪಕ್ಷದಲ್ಲಿ ಶ್ರಾದ್ಧದ ಆಹಾರವನ್ನು ಕಾಗೆ ತಿನ್ನದೇ ಇದ್ದರೆ ಏನು ಮಾಡಬೇಕು.? ಶ್ರಾದ್ಧ ಆಹಾರ ತಿನ್ನಲು ಕಾಗೆ ಬಾರದೇ ಇದ್ದರೆ ಏನು ಮಾಡಬೇಕು.? ಅನ್ನೋ ಗೊಂದಲ ಸಾಕಷ್ಟು ಜನರಲ್ಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಕೆ ಸುದ್ದಿಯಾನದ ಸ್ಟೋರಿಯನ್ನ ಓದಿ.

2025ರ ಪಿತೃ ಪಕ್ಷ ಪ್ರಾರಂಭವಾಗಿದೆ. ಈ ವರ್ಷದ ಪಿತೃ ಪಕ್ಷವು ಸೆಪ್ಟೆಂಬರ್‌ 7ರಂದು ಭಾದ್ರಪದ ಪೂರ್ಣಿಮಾದಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್‌ 21ರಂದು ಮುಕ್ತಾಯಗೊಳ್ಳಲಿದೆ. ಈ 15 ದಿನಗಳ ಪವಿತ್ರ ಸಮಯದಲ್ಲಿ ಪಿತೃಗಳಿಗೆ ಶ್ರಾದ್ಧ, ತರ್ಪಣ ಹಾಗೂ ಪಿಂಡದಾನವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಬ್ರಾಹ್ಮಣರಿಗೆ ಆಹಾರವನ್ನು ದಾನ ಮಾಡಲಾಗುತ್ತದೆ. ಹಾಗೂ ಹಸುಗಳಿಗೆ, ಕಾಗೆಗಳಿಗೂ ಆಹಾರವನ್ನು ನೀಡಲಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಕಾಗೆಗೆ ಆಹಾರವನ್ನು ನೀಡುವುದು ತುಂಬಾನೇ ಮುಖ್ಯವಾದ ಕಾರ್ಯವಾಗಿದೆ.

ಪಿತೃ ಪಕ್ಷದ ಸಮಯದಲ್ಲಿ ಕಾಗೆಗಳನ್ನು ನಮ್ಮ ಪಿತೃಗಳು ಎಂದು ಪರಿಗಣಿಸಲಾಗುತ್ತದೆ. ಕಾಗೆಗಳಿಗೆ ಆಹಾರವನ್ನು ನಿಡುವುದರಿಂದ ಅದು ನೇರವಾಗಿ ನಮ್ಮ ಪಿತೃಗಳನ್ನು ತಲುಪುತ್ತದೆ ಎಂಬುದು ನಂಬಿಕೆಯಾಗಿದೆ. ಇದು ಪಿತೃಗಳನ್ನು ಸಂತುಷ್ಟಗೊಳಿಸುವ ಒಂದು ಮಾರ್ಗವಾಗಿದೆ. ಪ್ರಸ್ತುತ ದಿನಗಳಲ್ಲಿ ಕಾಗೆಗಳು ತುಂಬಾನೇ ವಿರಳವೆನ್ನಬಹುದು. ಒಂದು ವೇಳೆ ಪಿತೃ ಪಕ್ಷದ ಸಮಯದಲ್ಲಿ ಕಾಗೆಗಳಿಗೆ ಆಹಾರವನ್ನು ನೀಡಲು ಕಾಗೆಗಳು ಸಿಗದೇ ಇದ್ದರೆ ನೀವು ಈ ಕಳಗಿನಂತೆ ಮಾಡಬಹುದು.ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಗೆಗಳು ಯಮರಾಜನ ಸಂಕೇತ. ಪಿತೃ ಪಕ್ಷದಲ್ಲಿ ಕಾಗೆಗಳು ನಮ್ಮ ಮನೆಯ ಸುತ್ತ ಸುತ್ತಾಡಿದರೆ ಅಥವಾ ನಾವು ಕಾಗೆಗಳನ್ನು ನೋಡಿದರೆ ಅದನ್ನು ನಮ್ಮ ಪಿತೃಗಳು ಎಂದು ಹೇಳಲಾಗುತ್ತದೆ. ಅದು ಪಿತೃಗಳು ನಮ್ಮ ಸುತ್ತ ಇರುವುದರ ಸಂಕೇತವಾಗಿದೆ. ನಾವು ಪಿತೃ ಪಕ್ಷದಲ್ಲಿ ಕಾಗೆಗಳಿಗೆಆಹಾರವನ್ನು ನೀಡದೇ ಇದ್ದರೆ ನಮ್ಮ ಪಿತೃಗಳು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾರೆ. ಹಾಗೂ ಅವರ ಅಸಾಮಾನದಿಂದಾಗಿ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಕಾಗೆಗಳು ನಾವು ನೀಡಿದ ಆಹಾರವನ್ನು ಸ್ಪರ್ಶಿಸಿದರೆ ಅಥವಾ ತಿಂದರೆ ಅದು ಪಿತೃಗಳು ನಮ್ಮ ಮೇಲೆ ಸಂತುಷ್ಟರಾಗಿರುವುದನ್ನು ಸೂಚಿಸುತ್ತದೆ. ಪಿತೃಗಳು ನಮ್ಮ ನೋವು – ನವಿನಲ್ಲೂ ಬಾಗಿಯಾಗಿದ್ದಾರೆ ಎಂಬುದನ್ನು ಹೇಳುತ್ತದೆ. ಒಂದು ವೇಳೆ ಪಿತೃ ಪಕ್ಷದ ಅವಧಿಯಲ್ಲಿ ಶ್ರಾದ್ಧವನ್ನು ಮಾಡಿ ಕಾಗೆಗೆ ಆಹಾರವನ್ನು ನೀಡಿದಾಗ ಕಾಗೆಗಳು ಅದನ್ನು ತಿನ್ನಲು ಬಾರದೇ ಇದ್ದಾಗ ಹಸುಗಳಿಗೆ ಅಥವಾ ನಾಯಿಗಳಿಗೆ ಕಾಗೆಗಳ ಹೆಸರಿನಲ್ಲಿ ನೀಡಬಹುದಾಗಿದೆ. ಯಾಕೆಂದರೆ, ಪಿತೃಗಳಿಗೆ ನೀಡುವ ಆಹಾರವನ್ನು ನಾವು ಪಂಚಬಲಿ ಎಂದು ಕರೆಯುತ್ತೇವೆ. ಈ ಪಂಚಬಲಿಯನ್ನು ನಾವು ಪಿತೃಗಳ ಹೆಸರಿನಲ್ಲಿ ಕಾಗೆ, ಹಸು, ನಾಯಿ, ಇರುವೆ ಮತ್ತು ದೇವರಿಗೆ ನೀಡುತ್ತೇವೆ.

ಒಂದು ದಂತಕಥೆಯ ಪ್ರಕಾರ, ತ್ರೇತಾಯುಗದಲ್ಲಿ, ಇಂದ್ರನ ಮಗ ಜಯಂತನು ಕಾಗೆಯ ರೂಪವನ್ನು ತೆಗೆದುಕೊಂಡು ತಾಯಿ ಸೀತೆಯನ್ನು ಕುಕ್ಕಲು ಮುಂದಾದನು. ನಂತರ ಭಗವಾನ್ ಶ್ರೀ ರಾಮನು ಒಣಹುಲ್ಲಿನಿಂದ ಮಾಡಿದಬಾಣದಿಂದ ಅವನನ್ನು ಹೊಡೆದನು. ನಂತರ, ಕಾಗೆ ಕ್ಷಮೆಯಾಚಿಸಿತು ಮತ್ತು ಭಗವಾನ್ ರಾಮನು ಅವನಿಗೆ ಇಂದಿನಿಂದ ಪೂರ್ವಜರಿಗೆ ಕಾಗೆಗಳ ಮೂಲಕ ಮಾತ್ರ ಮೋಕ್ಷ ಸಿಗುತ್ತದೆ ಎನ್ನುವ ವರವನ್ನು ನೀಡಿದನು.
ರಾಮನು ಕಾಗೆಗಳಿಗೆ ನೀಡಿದ ವರದಿಂದಾಗಿ ಪಿತೃ ಪಕ್ಷದಲ್ಲಿ ಶ್ರಾದ್ಧ ಕಾರ್ಯ ಮಾಡುವಾಗ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ನಮಗೆ ಕಾಗೆಗಳು ಸಿಗದೇ ಇದ್ದಾಗ ನಾವು ಆಹಾರವನ್ನು ಹಸು, ನಾಯಿ, ಇರುವೆಗಳಿಗೆ ನೀಡಬಹುದು. ಇದರಿಂದಾಗಿ ಕೂಡ ನಾವು ಕಾಗೆಗಳಿಗೆ ಆಹಾರ ನೀಡಿದಷ್ಟೇ ಪುಣ್ಯವನ್ನು ಪಡೆದುಕೊಳ್ಳಬಹುದಾಗಿದೆ.

Kishor KV