ಕಿಸ್‌ ಕೊಟ್ರೆ ಫೋನ್‌ ಕೊಡ್ತೀನಿ.. ಅಪ್ರಾಪ್ತೆಗೆ ಬಸ್‌ ಡ್ರೈವರ್‌ನಿಂದ ಕಿರುಕುಳ! – ಕಾಮುಕನಿಗೆ ಬಿತ್ತು ಧರ್ಮದೇಟು!

ಕಿಸ್‌ ಕೊಟ್ರೆ ಫೋನ್‌ ಕೊಡ್ತೀನಿ.. ಅಪ್ರಾಪ್ತೆಗೆ ಬಸ್‌ ಡ್ರೈವರ್‌ನಿಂದ ಕಿರುಕುಳ! – ಕಾಮುಕನಿಗೆ ಬಿತ್ತು ಧರ್ಮದೇಟು!

ಬಸ್‌ಗಳಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವ ಮುನ್ನ ಎಚ್ಚರ.. ಇಲ್ಲೊಬ್ಬ ಕಾಮುಕ ಬಸ್ ಡ್ರೈವರ್‌ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕಿಗೆ ಕಿರುಕುಳ ಕೊಟ್ಟ ಡ್ರೈವರ್‌ ಗೆ ಆಕೆಯ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ:ಭಾರತ ಪಾಕ್ ಮ್ಯಾಚ್ ರದ್ದು ಕೋರಿ ಪಿಐಎಲ್ – ಮ್ಯಾಚ್ ನಡೆಸೋಕೆ ಸುಪ್ರೀಂ ಗ್ರೀನ್ ಸಿಗ್ನಲ್

ಏನಿದು ಘಟನೆ?

15 ವರ್ಷದ ಅಪ್ರಾಪ್ತ ಬಾಲಕಿ ಹೈದರಾಬಾದ್​ನಿಂದ ಬೆಂಗಳೂರಿಗೆ ಇಂಡಿಯಾ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ   ಬಸ್​ನಲ್ಲಿ ಪ್ರಯಾಣಿಸಿದ್ದಾಳೆ. ಈ ವೇಳೆ ಮೊಬೈಲ್ ಚಾರ್ಜ್​ ಮಾಡಲು ಡ್ರೈವರ್ ಆರೀಫ್ ​​ಗೆ ಫೋನ್ ನೀಡಿದ್ದಳು. ಸ್ವಲ್ಪ ಸಮಯದ ಬಳಿಕ ಮೊಬೈಲ್​ ವಾಪಸ್ ಕೇಳಿದಾಗ ಸ್ಪೇರ್ ಡ್ರೈವರ್ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.  ನೀನು ನನಗೆ ಕಿಸ್ ಕೊಟ್ಟರೆ ಮೊಬೈಲ್ ಕೊಡ್ತೀನಿ ಎಂದಿದ್ದಾನೆ. ಅಲ್ಲದೇ ಯುವತಿ ಮಲಗಿದ್ದ ಸೀಟ್​ಗೆ ಬಂದು ಕಿರುಕುಳ ನೀಡಿದ್ದಾನೆ. ಇದರಿಂದ ಗಾಬರಿಯಾದ ಅಪ್ರಾಪ್ತೆ, ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

ಬಾಲಕಿಯ ಪೋಷಕರು ಬಸ್‌ ಬೆಂಗಳೂರಿಗೆ ಬರುತ್ತಿದ್ದಂತೆ ಅಡ್ಡಗಟ್ಟಿದ್ದಾರೆ. ಬೆಂಗಳೂರಿನ ಚಾಲುಕ್ಯ ಸರ್ಕಾಲ್ ಬಳಿ‌ ತಾಯಿ ಮತ್ತು ಅಣ್ಣ ಬಸ್‌ ನಿಲ್ಲಿಸಿ,  ಸ್ಪೇರ್ ಡ್ರೈವರ್ ಆರೀಫ್​ನ ಬಸ್ಸಿನಿಂದ ಕೆಳಗಿಳಿಸಿ ವಿಚಾರಿಸಿದ್ದಾರೆ. ಬಳಿಕ ಆತನಿಗೆ ಸರಿಯಾಗಿ ಥಳಿಸಿದ್ದಾರೆ.. ಕೊನೆಗೆ ಆರೀಫ್ ತಪ್ಪಾಯ್ತು ಎಂದು ಕ್ಷಮೆ ಕೇಳಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿ, ಆತನನ್ನ ವಿಚಾರಣೆ ನಡೆಸುತ್ತಿದ್ದಾರೆ.

Shwetha M