ವಿಶ್ವದ ನಂ 1 ಶ್ರೀಮಂತ ಪಟ್ಟಿಯಲ್ಲಿ ಎಲಾನ್ ಮಾಸ್ಕ್ ರನ್ನ ಹಿಂದಿಕ್ಕಿದ ಲ್ಯಾರಿ ಎಲಿಸನ್ – ಲ್ಯಾರಿ ಆಸ್ತಿ ಎಷ್ಟು ಬಿಲಿಯನ್ ಗೊತ್ತಾ?

ವಿಶ್ವದ ನಂಬರ್ 1 ಶ್ರೀಮಂತ ಪಟ್ಟಿಯಿಂದ ಎಲಾನ್ ಮಾಸ್ಕ್ ಹಿಂದೆ ಬಿದ್ದಿದ್ದಾರೆ. ಒರೇಕಲ್ ಕಾರ್ಪೊರೇಶನ್ನ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಇದೀಗ ವಿಶ್ವದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಆಗಿದ್ದಾರೆ. 2021ರಿಂದ ಹೆಚ್ಚಿನ ಅವಧಿ ವಿಶ್ವದ ಅತಿ ಶ್ರೀಮಂತರೆನಿಸಿದ್ದ ಇಲಾನ್ ಮಸ್ಕ್ ಅವರನ್ನು ಲ್ಯಾರಿ ಎಲಿಸನ್ ಹಿಂದಿಕ್ಕಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ (Bloomberg Billionaires Index) ಪ್ರಕಾರ ಲ್ಯಾರಿ ಎಲಿಸನ್ ಅವರ ಒಟ್ಟಾರೆ ಆಸ್ತಿಮೌಲ್ಯ 393 ಬಿಲಿಯನ್ ಡಾಲರ್ಗೆ ಏರಿತ್ತು. ಅದೇ ವೇಳೆ, ಇಲಾನ್ ಮಸ್ಕ್ ಅವರ ಶ್ರೀಮಂತಿಕೆ 385 ಬಿಲಿಯನ್ ಡಾಲರ್ನಷ್ಟಿತ್ತು.
81 ವರ್ಷದ ಲ್ಯಾರಿ ಎಲಿಸನ್ ಅವರು ಒರೇಕಲ್ ಕಾರ್ಪೊರೇಶನ್ ಕಂಪನಿಯ ಸಹ-ಸಂಸ್ಥಾಪಕರು. ಅದರ ಸಿಟಿಒ ಮತ್ತು ಚೇರ್ಮನ್ ಕೂಡ ಆಗಿದ್ದಾರೆ. ಕಂಪನಿಯಲ್ಲಿ ಸಾಕಷ್ಟು ಷೇರು ಪಾಲು ಹೊಂದಿದ್ದಾರೆ. ಅವರ ಶ್ರೀಮಂತಿಕೆ ಹೆಚ್ಚಲು ಇದೇ ಕಾರಣ. ಡಾಟಾಬೇಸ್ ಮ್ಯಾನೇಜ್ಮೆಂಟ್ ಸಾಫ್ಟ್ವೇರ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಒರೇಕಲ್ ಕಂಪನಿಯ ಇತ್ತೀಚಿನ ತ್ರೈಮಾಸಿಕ ವರದಿ ಅಚ್ಚರಿ ಫಲಿತಾಂಶ ನೀಡಿತ್ತು. ನಿರೀಕ್ಷೆಮೀರಿದ ಆದಾಯ ಹೆಚ್ಚಳವಾಗಿತ್ತು. ಅದರ ಪರಿಣಾಮವಾಗಿ ಕಂಪನಿಯ ಷೇರುಬೆಲೆ ಗಣನೀಯವಾಗಿ ಹೆಚ್ಚಿತ್ತು. ಬುಧವಾರ ಒಮ್ಮೆಗೇ ಒರೇಕಲ್ ಷೇರು ಬೆಲೆ ಶೇ. 41ರಷ್ಟು ಹೆಚ್ಚಿತ್ತು.
ಇದಕ್ಕೂ ಮೊದಲು ಈ ವರ್ಷ ಅದರ ಷೇರುಬೆಲೆ ಶೇ. 45ರಷ್ಟು ಹೆಚ್ಚಿರುವುದನ್ನು ಪರಿಗಣಿಸಿದರೆ, ಈ ವರ್ಷ ಶೇ. 85ಕ್ಕಿಂತಲೂ ಹೆಚ್ಚು ಷೇರುಬೆಲೆ ಎರಿಕೆಯಾಗಿದೆ. ಲ್ಯಾರಿ ಎಲಿಸನ್ ಅವರ ಆಸ್ತಿಮೌಲ್ಯ ಕೂಡ 101 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು. ತತ್ಪಿರಿಣಮವಾಗಿ ಅವರು ಇಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ ಅತಿ ಶ್ರೀಮಂತ ಎನಿಸಿದ್ದಾರೆ.

ನೋಡಿರಿ

