ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತಮಿತ್ರನ ಹತ್ಯೆ – ಭಾಷಣ ಮಾಡುವಾಗಲೇ ಚಾರ್ಲಿ ಕಿರ್ಕ್ ಮೇಲೆ ಗುಂಡೇಟು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತಮಿತ್ರ ಚಾರ್ಲಿ ಕಿರ್ಕ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿ ಹಾರಿಸಿದ ಗುಂಡಿಗೆ ಕಿರ್ಕ್ ಬಲಿಯಾಗಿದ್ದು, ಈ ಹತ್ಯೆ ಕಂಡು ಅಮೇರಿಕಾ ಬೆಚ್ಚಿಬೆದ್ದಿದೆ.
ಇದನ್ನೂ ಓದಿ: ನೇಪಾಳ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಸುಶೀಲಾ ಕರ್ಕಿ ಆಯ್ಕೆ – Gez Z ಗಳು ಇವರನ್ನ ಆಯ್ಕೆ ಮಾಡೋಕೆ ಕಾರಣವೇನು?
ಅಮೆರಿಕದ ಉತಾಹ್ ಕಾಲೇಜು ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಭಾಷಣ ಮಾಡುತ್ತಿದ್ದರು. ವೇದಿಕೆ ಮೇಲಿದ್ದಾಗಲೇ ದುಷ್ಕರ್ಮಿ ಕಿರ್ಕ್ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಚಾರ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಏನಾಯಿತು ಎಂಬುವುದನ್ನು ವಿವರಿಸಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ರಕ್ತದ ಮಡುವಿನಲ್ಲಿ ಕಿರ್ಕ್ ಬಿದ್ದಿದ್ದರು. ಅವರು ಬಿದ್ದ ಜಾಗದಲ್ಲಿ ರಕ್ತ ಚಿಮ್ಮಿ, ಎಲ್ಲೆಡೆ ಹರಿಯುತ್ತಿತ್ತು” ಎಂದು ಹೇಳಿದ್ದಾರೆ.
ಚಾರ್ಲಿ ಕಿರ್ಕ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ನಲ್ಲಿ ಚಾರ್ಲಿ ಕಿರ್ಕ್ ಅವರ ಸಾವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಬುಧವಾರ ಉಟಾಹ್‌ನಲ್ಲಿ ನಡೆದ ಕಾಲೇಜು ಕಾರ್ಯಕ್ರಮವೊಂದರಲ್ಲಿ ಈ ಭೀಕರ ಹತ್ಯೆ ನಡೆದಿದೆ. ಈ ಹತ್ಯೆ ಅಮೆರಿಕದಾದ್ಯಂತ ರಾಜಕೀಯ ಹಿಂಸಾಚಾರವನ್ನು ಎತ್ತಿ ಹಿಡಿಯುವಂತಿದೆ.
ಯುವ ರಿಪಬ್ಲಿಕನ್ ಮತದಾರರನ್ನು ಒಗ್ಗೂಡಿಸುವಲ್ಲಿ ಚಾರ್ಲಿ ಕಿರ್ಕ್ ಪ್ರಭಾವಶಾಲಿ ಪಾತ್ರ ವಹಿಸಿದ್ದಾರೆ. ಕಿರ್ಕ್ ಇಸ್ರೇಲ್‌ನ ಕಟ್ಟಾ ಬೆಂಬಲಿಗರೂ ಆಗಿದ್ದರು. ಚಾರ್ಲಿ ಕಿರ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಂತ ಆಪ್ತ ವ್ಯಕ್ತಿಗಳಲ್ಲಿ ಒಬ್ಬರು. ಚಾರ್ಲಿಗೆ 31 ವರ್ಷ ವಯಸ್ಸಾಗಿತ್ತು. ಘಟನೆಯ ನಂತರ, SWAT ತಂಡ, ATF ಪೊಲೀಸರು ಮತ್ತು ಇತರ ಸಂಸ್ಥೆಗಳು UVU ಕ್ಯಾಂಪಸ್‌ಗೆ ಬೀಗ ಹಾಕಿ ಶೋಧ ಕಾರ್ಯಾಚರಣೆ ನಡೆಸಿದವು. ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ. ಆದರೆ, ನಿಜವಾದ ದಾಳಿಕೋರ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
ಮಹಾನ್ ಮತ್ತು ಶ್ರೇಷ್ಠ ವ್ಯಕ್ತಿ ಚಾರ್ಲಿ ಕಿರ್ಕ್ ನಿಧನರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಅಮೆರಿಕದಲ್ಲಿ ಚಾರ್ಲಿಗಿಂತ ಯುವಕರ ಹೃದಯವನ್ನು ಯಾರೂ ಚೆನ್ನಾಗಿ ಅರ್ಥಮಾಡಿಕೊಂಡಿಲ್ಲ. ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು ಮತ್ತು ಗೌರವಿಸುತ್ತಿದ್ದರು, ವಿಶೇಷವಾಗಿ ನಾನು, ಮತ್ತು ಈಗ ಅವರು ನಮ್ಮೊಂದಿಗೆ ಇಲ್ಲ. ಮೆಲಾನಿಯಾ ಮತ್ತು ನಾನು ಅವರ ಪತ್ನಿ ಎರಿಕಾ ಮತ್ತು ಕುಟುಂಬಕ್ಕೆ ನಮ್ಮ ಸಂತಾಪ ಸೂಚಿಸುತ್ತೇವೆ. ಚಾರ್ಲಿ, ನಾವು ನಿನ್ನನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ನೋಡಿರಿ

