ಅಂಗ ಮತ್ತು ಅಂಗಾಂಶ ದಾನ ಮಾಡಿದ ಕಿಚ್ಚನ ಪತ್ನಿ – ಸುದೀಪ್ ಬರ್ತ್‌ಡೇಗೆ ಮಹತ್ತರ ಕಾರ್ಯ ಕೈಗೊಂಡ ಪ್ರಿಯಾ ಸುದೀಪ್

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ತಮ್ಮ 52ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ರು. ಇದೀಗ ಸುದೀಪ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸುದೀಪ್ ಪತ್ನಿ ಪ್ರಿಯಾ ಅಂಗ ಮತ್ತು ಅಂಗಾಂಶ ದಾನ ಮಾಡೋ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: UAE ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಭರ್ಜರಿ ಗೆಲುವು – 4.3 ಓವರ್‌ಗಳಲ್ಲಿ ಆಟ ಮುಗಿಸಿದ ಟೀಂ IND
ನಟ ಕಿಚ್ಚ ಸುದೀಪ್ ಅವರ ಕೆಲಸಗಳಿಗೆ ಪತ್ನಿ ಸದಾ ಬೆನ್ನೆಲುಬಾಗಿದ್ದಾರೆ. ಹೆಜ್ಜೆ ಹೆಜ್ಜೆಗೂ ಸಪೋರ್ಟ್ ಮಾಡ್ತಾ ಬಂದಿದ್ದಾರೆ. ಇದೀಗ ಪ್ರಿಯಾ ಅವರು ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ಅಂಗ ಮತ್ತು ಅಂಗಾಂಶ ದಾನ ಮಾಡಿದ್ದಾರೆ. ಈ ಬಗ್ಗೆ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಿಯಾ ಸುದೀಪ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
ನಮಸ್ಕಾರ.. ಪ್ರತಿ ವರ್ಷ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಸ್ನೇಹಿತರು ಒಳ್ಳೆ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ರಕ್ತದಾನ, ಅನ್ನದಾನ, ಬಡಮಕ್ಕಳಿಗೆ ಸಹಾಯ ಹೀಗೆ ತಮ್ಮದೇ ಆದ ಸಣ್ಣ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ. ಹಾಗೆಯೇ, ಈ ವರ್ಷ ನಾನು ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ಅದರ ಪ್ರಕ್ರಿಯೆ ಬಹಳ ಸುಲಭ. ನಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ಕೆಲಸ ಬೇರೆ ಇಲ್ಲ. ಕಿಚ್ಚ ಸುದೀಪ್ ಕೇರ್ ಫೌಂಡೇಶನ್ ಮೂಲಕ ನಾನು ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ನೀವು ದಾನ ಮಾಡಿ ಎಂದು ಮನವಿ ಎಂದು ಜನತೆಗೆ ಸುದೀಪ್ ಪತ್ನಿ ಪ್ರಿಯಾ ಅವರು ಕರೆ ಕೊಟ್ಟಿದ್ದಾರೆ.
ಇನ್ನು ಅಂಗಾಂಗ ದಾನ ಮಾಡಬೇಕು ಅಂದ್ರೆ ನಮಗೆ ಜವಾಬ್ದಾರಿಗಳಿರುತ್ತವೆ. ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನೀವು ಸ್ವಾಸ್ಥರಾಗಿರಿ, ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ಆಗ ಈ ಮಹತ್ಕಾರ್ಯಕ್ಕೆ ಅರ್ಥ ಬರುತ್ತದೆ. ನಾವು ಯಾವಾಗ ಹೋಗುತ್ತೇವೋ ನಮಗೆ ಗೊತ್ತಿಲ್ಲ. ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ. ಹಾಗಾಗಿ, ಅಂಗಾಂಗ ದಾನ ಮಾಡಿ ಎಂದು ಜಾಗೃತಿ ಮೂಡಿಸಿದ್ದಾರೆ.
ಇದು @AcademyCFC ಅಕಾಡೆಮಿಯ ಆಶಯ ಆಗಿತ್ತು. 2024ರ ಕಾರ್ಯಕ್ರಮದ ಉದ್ದೇಶ ಇದಾಗಿತ್ತು. ಅದರ ಮುಂದುವರಕೆ ಅನ್ನುವಂತೆ @KicchaSudeep ಅವರ ಪತ್ನಿ ಅಂಗಾಂಗ ದಾನ ಮಹತ್ವಕ್ಕೆ ಹೆಜ್ಜೆ ಇಟ್ಟಿದ್ದಾರೆ. ಧನ್ಯವಾದಗಳು ಮೇಡಂ. pic.twitter.com/2x6lFPnbuM
— Dr.Sharanu Hullur (@sharanuhullur1) September 10, 2025
ಅಮ್ಮನ ಹುಟ್ಟುಹಬ್ಬದಂದು ಕಿಚ್ಚನ ಹಸಿರು ಕ್ರಾಂತಿ!
ಇನ್ನು ಆಗಸ್ಟ್ 30 ರಂದು ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರ ಹುಟ್ಟುಹಬ್ಬ. ಆ ದಿನ ಕೂಡ ಸುದೀಪ್ ಫ್ಯಾಮಿಲಿ ಸಮಾಜ ಮೆಚ್ಚುವಂತಹ ಕೆಲಸ ಮಾಡಿದ್ರು. ತಾಯಿಯ ನೆನಪಿಗಾಗಿ ಹಸಿರು ಕ್ರಾಂತಿ ಆರಂಭಿಸಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಿದ್ದರು. ಇದಾದ ಬಳಿಕ ಹಲವು ಕಡೆಗಳಲ್ಲಿ ಸುದೀಪ್ ಗಿಡ ನೆಡುವ ಕಾರ್ಯ ಮಾಡುತ್ತಾ ಬರುತ್ತಿದೆ.

ನೋಡಿರಿ

