ಏನಿದು Gen Z ಪ್ರೊಟೆಸ್ಟ್? ಸೋಷಿಯಲ್ ಮೀಡಿಯಾವೇ ಅಸ್ತ್ರ..ಶಸ್ತ್ರ!
ನೇಪಾಳ ದಂಗೆ ನೇತಾರ ಗುರುಂಗ್ ಯಾರು?

ಏನಿದು Gen Z  ಪ್ರೊಟೆಸ್ಟ್? ಸೋಷಿಯಲ್ ಮೀಡಿಯಾವೇ ಅಸ್ತ್ರ..ಶಸ್ತ್ರ!ನೇಪಾಳ ದಂಗೆ ನೇತಾರ ಗುರುಂಗ್ ಯಾರು?

ನೇಪಾಳದಲ್ಲಿ ಏನ್ ಆಗ್ತಿದೆ? ಯಾಕೆ ಜನ ರೊಚ್ಚಿಗೆದ್ದಿದ್ದಾರೆ ಅಂತ ಯಾರಾದ್ರೂ ಕೇಳಿದ್ರೆ ಸೋಶಿಯಲ್‌ ಮಿಡಿಯಾ ಬ್ಯಾನ್‌ ಮಾಡಿದ್ದಕ್ಕೆ ಅನ್ನೋ ಉತ್ತರ ಬರುತ್ತೆ.. ಬಟ್ ಸೋಷಿಯಲ್ ಮೀಡಿಯಾ ಬ್ಯಾನ್ ವಿರುದ್ಧದ ಆಕ್ರೋಶ, ನೇಪಾಳದ ಜೆನ್-ಜೀ ಹೋರಾಟದ ಆರಂಭಕ್ಕೆ ಕೇವಲ ಮುನ್ನುಡಿ ಮಾತ್ರ ಬರೆದಿದೆ. ಅಸಲಿಗೆ ಈ ದಂಗೆಯ ಹಿಂದೆ ಸಾಕಷ್ಟು ಕಾಣರಗಳಿವೆ..  ಮೊದ್ಲು ನಾವು ಏನಿದು ಜೆನ್‌ ಜೀ ಅನ್ನೋದ್ದನ್ನ ನೋಡೋಣ..

ನೇಪಾಳ ಸರ್ಕಾರವೂ ಪತನವಾಗುವುದರೊಂದಿಗೆ ಭ್ರಷ್ಟಾಚಾರ ಮತ್ತು ಸರ್ಕಾರದ ದೋರಣೆ ವಿರುದ್ಧ  ಸಿಡಿದೆದ್ದ ಈ ಯುವಪಡೆ ಅದ್ರೆ ಜೆನ್‌ ಜೀ  ಮೂರು ದೇಶಗಳಲ್ಲಿ ಸರ್ಕಾರಗಳನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ಈ 1997 ಮತ್ತು 2012ರ ನಡುವೆ ಜನಿಸಿದವರನ್ನು ‘ಜೆನ್-ಝಡ್’  ಜೆನ್ ಜೀ ಅಥವಾ ಜನರೇಷನ್ ಝಡ್  ಅಂತ ಕರೆಯಲಾಗುತ್ತೆ . ಹೆಚ್ಚಾಗಿ 2000 ಇಸವಿ ಮೇಲೆ ಇರೋರನ್ನ ಜೆನ್‌ ಜೀ ಕಿಡ್ ಅಂತ ಕರೆಯಲಾಗುತ್ತೆ.  ಕಂದ್ರೆ ಇವರಿಗೆ ಬುದ್ಧಿ ಬಂದಾಗಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಇಂಟರ್‌ನೆಟ್ ಜಗತ್ತಿನಲ್ಲಿ ಬೆಳೆದವರಾಗಿದ್ದಾರೆ. ಇವರಿಗೆಸ್ಮಾರ್ಟ್‌ಫೋನ್‌ಗಳು ಮತ್ತು ಸೋಷಿಯಲ್ ಮೀಡಿಯಾ ಇವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಇದರಿಂದಾಗಿ ಇವರು ಜಗತ್ತಿನ ವಿದ್ಯಮಾನಗಳ ಬಗ್ಗೆ ಹೆಚ್ಚು ಅರಿವು ಹೊಂದಿದವರಾಗಿದ್ದಾರೆ ಜೆನ್‌ ಝಡ್‌ಗಳಿಗೆ ನೇಪಾಳದ ಕೆ.ಪಿ. ಶರ್ಮಾ ಓಲಿ ಸರ್ಕಾರ ತೆಗೆದುಕೊಂಡ ಒಂದು ನಿರ್ಧಾರ ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಯಿತು. ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಂನಂತಹ 26 ಸೋಷಿಯಲ್ ಮೀಡಿಯಾಗಳನ್ನ ಬ್ಯಾನ್ ಮಾಡಿದ್ದು ಇಡೀ ಸರ್ಕಾರವನ್ನೇ ಉರುಳಿಸುವಂತಾಯ್ತು.. ಮೊದ್ಲು ಇದ್ದಕ್ಕೆ ಕಾರಣವಾಗಿದ್ದು ಏನು ಅಂತ ನೋಡೋಕೆ ಹೋದ್ರೆ ಒಂದು ಆ್ಯಕ್ಸಿಡೆಂಟ್ ..

ಇದೇ ತಿಂಗಳ 6ರ ಬೆಳಗ್ಗೆ 7:15ಕ್ಕೆ , ನೇಪಾಳದ ಕೋಶಿ ಪ್ರಾಂತ್ಯದ ಸಚಿವ ರಾಮ್‌ ಬಹಾದ್ದೂರ್‌ ಮಗರ್‌ ಅವರ ಬೆಂಗಾವಲು ಪಡೆ, ಲಲಿತಪುರದ ಹರಿಸಿದ್ಧಿ ಮಾಧ್ಯಮಿಕ ಶಾಲೆ ಬಳಿ 11 ವರ್ಷದ ಉಷಾ ಮಗರ್‌ ಸುನುವರ್‌ ಎಂಬ ಬಾಲಕಿಗೆ ಡಿಕ್ಕಿ ಹೊಡೆದಿತ್ತು. ಆದರೆ ಸಚಿವ ರಾಮ್‌ ಬಹಾದ್ದೂರ್‌ ಆಗಲಿ, ಅವರ ಬೆಂಗಾವಲು ಪಡೆಯಾಗಲಿ ಕೆಳಗಿಳಿದು ಆ ಬಾಲಕಿಯ ಸ್ಥಿತಿ ಏನಾಗಿದೆ ಎಂಬುದನ್ನು ನೋಡುವ ಕನಿಷ್ಠ ಸೌಜನ್ಯತೆಯನ್ನೂ ತೋರಿಸಲಿಲ್ಲ. ಅಪಘಾತದಲ್ಲಿ ಬಾಲಕಿ ಉಷಾ ಮಗರ್‌ ಸುನುವರ್‌ ಬದುಕುಳಿದರೂ, ಗಂಭೀರ ಗಾಯಗಳ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆಯ ಬಗ್ಗೆ ಉಡಾಫೆಯ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಕೆಪಿ ಶರ್ಮಾ ಓಲಿ, “ಇದೊಂದು ಸಣ್ಣ ಅಪಘಾತ ಘಟನೆಯಾಗಿದ್ದು, ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿ ಕೈ ತೊಳೆದುಕೊಂಡ್ರು..

ಸಚಿವ ರಾಮ್‌ ಬಹಾದ್ದೂರ್‌ ದೌಲತ್ತು.. ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಉಡಾಫೆ ಉತ್ತರ ನೇಪಾಳಿಗರ ಯುವಪಡೆ ಸ್ವಾಭಿಮಾನವನ್ನು ಬಡಿದೆಬ್ಬಿಸಿತು. ಈ ಘಟನೆಯ ವಿರುದ್ಧ ನೇಪಾಳದ ಸೋಶಿಯಲ್‌ ಮಿಡಿಯಾದಲ್ಲಿ  ಅಭಿಯಾನ ಆರಂಭಿಸಿದರು. ಈ ಅಭಿಯಾನಕ್ಕೆ ಬೆಚ್ಚಿದ ಓಲಿ ಸರ್ಕಾರ, ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನೇ ನಿರ್ಬಂಧಿಸುವ ಕಠಿಣ ನಿರ್ಧಾರ ತೆಗೆದುಕೊಂಡಿತು. ಜಾಲತಾಣಗಳು ಸರ್ಕಾರದ ಬಳಿ ನೋಂದಣಿ ಮಾಡಿಕೊಳ್ಳಲಿಲ್ಲ ಎಂಬ ಕಾರಣ ನೀಡಿ ನಿಷೇಧ ಹೇರಲಾಯಿತು.. ಇದು ಜೆನ್ ಜೀ ಪ್ರತಿಭಟನೆಯನ್ನ ದೊಡ್ಡ ಮಟಕ್ಕೆ ಕರೆದುಕೊಂಡು ಹೋಯ್ತು.  ಸರ್ಕಾರದ ಈ ನಿರ್ಧಾರ ಜನರನ್ನು ಕೆರಳಿಸಿದ್ದಲ್ಲದೇ, ಈ ತೀರ್ಮಾನದ ವಿರುದ್ಧ ದಂಗೆ ಏಳುವಂತೆ ಪ್ರೆರೇಪಿಸಿತು. ಅದೇ ರೀತಿ ರಾಜಧಾನಿ ಕಠ್ಮಂಡುವಿನ ಬೀದಿಗಳಲ್ಲಿ ಸಾವಿರಾರು ಯುವಕರು ಪ್ರತಿಭಟನೆ ಆರಂಭಿಸಿದರು. ಈ ಪ್ರತಿಭಟನೆಗಳನ್ನು ಅತ್ಯಂತ ಕ್ರೂರವಾಗಿ ಹತ್ತಿಕ್ಕುವ ನಿರ್ಧಾರ ತೆಗೆದುಕೊಂಡ ಓಲಿ ಸರ್ಕಾರ, ಪೊಲೀಸ್‌ ಬಲ ಪ್ರಯೋಗ ಮಾಡಿತು. ಕಠ್ಮಂಡುವಿನಲ್ಲಿ ನಡೆದ ಪೊಲೀಸ್‌ ಹಾಗೂ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳಲ್ಲಿ, 19 ಜನ ಸಾವನ್ನಪ್ಪಿ ನೂರಾರು ಜನ ಗಂಭೀರವಾಗಿ ಗಾಯಗೊಂಡರು. ಈ ಪ್ರತಿಭಟನೆಯ ತೀವ್ರತೆಯನ್ನು ಅರಿತು ಓಲಿ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿರ್ಬಂಧ ತೆರವು ಮಾಡಿತು. ಆದರೂ ಯುವ ಸಮುದಾಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತನ್ನ ಪ್ರತಿಭಟನೆಗಳನ್ನು ಮುಂದುವರೆಸಿತು.  ಜೆನ್ ಜೀ ಪ್ರತಿಭಟನೆ ಹೇಗಿತ್ತು ಅಂದ್ರೆ  ಪ್ರಧಾನಿ, ರಾಷ್ಟ್ರಪತಿಗಳ ಮನೆಗೇ ಬೆಂಕಿ ಇಡಲಾಯಿತು. ಹಣಕಾಸು ಸಚಿವರನ್ನು ಬೀದಿ ಬೀದಿಗಳಲ್ಲಿ ಅಟ್ಟಾಡಿಸಿಕೊಂಡು ಹೊಡೆಯಲಾಯಿತು. ಕೊನೆಗೀಗ ಬೇರೆ ದಾರಿ ಕಾಣದೆ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ನಡೆದಂತೆ ಸಚಿವರು, ಪ್ರಧಾನಿ ಆದಿಯಾಗಿ ಸರ್ಕಾರದ ಎಲ್ಲರೂ ರಾಜೀನಾಮೆ ನೀಡಿದ್ರು.

ಸಾಮಾನ್ಯವಾಗಿ ಜೆನ್ ಝಡ್ ಯುವಕರು ಹಠಮಾರಿಗಳು. ತಮ್ಮ ನಿಲುವಿಗೆ ಬದ್ಧರಾಗಿರುವವರು ಎಂದೇ ಹೇಳಲಾಗುತ್ತದೆ. ಅವರ ಇದೇ ಗುಣಗಳು ಪ್ರತಿಭಟನೆಯಲ್ಲಿ ದೊಡ್ಡ ಶಕ್ತಿಯಾಗಿ ಮಾರ್ಪಟ್ಟವು. ಈ ಯುವಪಡೆಗೆ ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಮೇಲೆ ನಂಬಿಕೆ ಕಡಿಮೆ. ಕುಟುಂಬ ರಾಜಕೀಯದ ವಿರುದ್ಧ ತಿರುಗಿ ಬೀಳುವರು. ಇವರು ಕೇವಲ ಸೋಷಿಯಲ್ ಮೀಡಿಯಾ  ಬ್ಯಾನ್ ಆಗಿದ್ದಕ್ಕೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು ಅಲ್ಲ.  ನಿರುದ್ಯೋಗ ಕೂಡ ಒಂದು ಪ್ರಮುಖ ಕಾರಣವಾಗಿದೆ. ನೇಪಾಳ ದಕ್ಷಿಣ ಏಷ್ಯಾದಲ್ಲಿ ಅತಿಹೆಚ್ಚು ನಿರುದ್ಯೋಗ ಪ್ರಮಾಣ ಹೊಂದಿರುವ ಅಪಖ್ಯಾತಿಗೆ ಗುರಿಯಾಗಿದೆ. ದೇಶದಲ್ಲಿ 15-24 ವರ್ಷದೊಳಗಿನ ಯುವಕರ ನಿರುದ್ಯೋಗ ಪ್ರಮಾಣ ಶೇ. 20.8ರಷ್ಟಿದೆ. ಆದರೆ ಓಲಿ ಸರ್ಕಾರ ಉದ್ಯೋಗ ಸೃಷ್ಟಿಸುವ ಗೋಜಿಗೆ ಹೋಗಿಲ್ಲ. ಜೊತೆಗೆ ನೇಪಾಳದ ಜನರೇಶನ್, ಅಂದರೆ, 13ರಿಂದ 28ರ ಹರೆಯದ ಯುವ ಜನರು ಅದೇ ಭ್ರಷ್ಟ, ವಯಸ್ಸಾದ ಹಳೆ ರಾಜಕಾರಣಿಗಳ ಆಡಳಿತದಿಂದ ರೋಸಿ ಹೋಗಿದ್ದಾರೆ. ಈ ಹಳೇ ರಾಜಕಾರಣಿಗಳು ಕಳೆದ ಎರಡು ದಶಕಗಳಿಂದ ಅಧಿಕಾರವನ್ನು ತಾವೇ ಒಬ್ಬರ ನಂತರ ಒಬ್ಬರಂತೆ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಕುಟುಂಬ ರಾಜಕಾರಣ ಹೆಚ್ಚು ನಡೆಯಿತು ಇದು ಕೂಡ  ನೇಪಾಳದಲ್ಲಿ ಈ ಮಟ್ಟಿಗಿನ ಹಿಂಸಾತ್ಮಕ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಇನ್ನೂ ನೇಪಾಳದಲ್ಲಿ ಇಷ್ಟೆಲ್ಲಾ ಪ್ರತಿಭಟನೆ ನಡೆಯೋಕೆ ಕಾರಣ ಸುದಾನ್ ಗುರುಂಗ್ ಅನ್ನೋ ವ್ಯಕ್ತಿ.. ಈತನಿಗೆ  36 ವರ್ಷ.. ಆತ ನೀಡಿದ ಪ್ರತಿಭಟನೆಯ ಒಂದೇ ಒಂದು ಕರೆಗೆ ಓಗೊಟ್ಟ ನೇಪಾಳದ ಕೋಟ್ಯಂತರ ಯುವಜನರು, ತಮ್ಮ ಶಾಲಾಕಾಲೇಜುಗಳನ್ನು ತೊರೆದು, ತಮ್ಮ ಉದ್ಯೋಗ, ಮನೆ-ಮಠಗಳನ್ನು ಬಿಟ್ಟು ಬಂದು ಹೋರಾಟದಲ್ಲಿ ಭಾಗವಹಿಸಿದ್ರು.  ಈತ  ಹಮಿ ನೇಪಾಳ್ ಎಂಬ ಸಂಘಟನೆ ನಡೆಸುತ್ತಿದ್ದು,  ಈತ ಒಂದು ಮಾತು ಹೇಳಿದ್ರೆ ಸಾಕು ಯುವಜನರು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಬೀದಿಯಲ್ಲಿ ಪ್ರತಿಭಟನೆಗೆ ಇಳಿಯುತ್ತಾರೆ. ಅದರಂತೆ ನೇಪಾಳದಲ್ಲಿ ಈ ಪ್ರತಿಭಟನೆ ಕಾರಣ..

ಇತ್ತೀಚೆಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲೂ ಇದೇ ರೀತಿಯ ಬೃಹತ್ ಯುವಜನರ ಹೋರಾಟಗಳು ನಡೆದಿದ್ದವು. ಅಲ್ಲೂ ಕೂಡ ಲಕ್ಷಾಂತರ ಜೆನ್ ಜೀ ಕಾರ್ಯಕರ್ತರು ಬೀದಿಗಿಳಿದಿದ್ದರು. ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಬಿಸಿಗೆ ಪ್ರಧಾನಿ ಶೇಕ್‌ ಹಸೀನಾ ದೇಶವನ್ನೇ ತೊರೆದು ಭಾರತಕ್ಕೆ ಓಡಿ ಬಂದಿದ್ದರು. ಶ್ರೀಲಂಕಾದದ ಪ್ರಧಾನಿ ಕೂಡ ಸಿಂಗಾಪುರಕ್ಕೆ ಓಡಿ ಹೋಗಿದ್ದರು. ಹೀಗೆ ಯುವ ಪಡೆ ವಯಸ್ಸಾದ ಸರ್ಕಾರವನ್ನ ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ಕಡೆಗಣಿಸಿದರೆ ಅಥವಾ ತಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ಹೇರಿದರೆ, ಈ ಡಿಜಿಟಲ್ ಯುಗದ ಯುವಜನತೆ ಸುಮ್ಮನಿರುವುದಿಲ್ಲ ಎಂಬುದು ಇವರು ಈವರೆಗೆ ನೀಡಿರುವ ಸ್ಪಷ್ಟ ಸಂದೇಶ.

Kishor KV