ಭಾರತಕ್ಕೆ ಟಾಪ್ ಆರ್ಡರ್ ಬ್ರಹ್ಮಾಸ್ತ್ರ – ಅಭಿ To ಸೂರ್ಯ.. ಹೇಗಿದೆ ರೆಕಾರ್ಡ್ಸ್?

ಸೂರ್ಯಕುಮಾರ್ ಯಾದವ್ ಅಡಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಮೆನ್ ಇನ್ ಬ್ಲೂ ಟೀಂ ಸಾಲಿಡ್ ಪ್ರದರ್ಶನ ನೀಡಿದೆ. ಇದೀಗ ಏಷ್ಯಾಕಪ್ನಲ್ಲೂ ಅಂಥದ್ದೇ ಮ್ಯಾಜಿಕ್ ಮಾಡೋಕೆ ಹೊರಟಿದ್ದಾರೆ. ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ಜಿತೇಶ್ ಶರ್ಮಾ ಇದ್ರೆ ಆಲ್ ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ ಮಿಡಲ್ ಆರ್ಡರ್ ನಲ್ಲಿ ಬೂಸ್ಟ್ ಕೊಡ್ತಾರೆ. ಹಾಗೇ ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ತಮ್ಮ ಬೌಲಿಂಗ್ ಜಾದೂ ಮೂಲಕ ಎದುರಾಳಿಗಳನ್ನ ಬೇಟೆಯಾಡ್ತಾರೆ. ಅದೂ ಅಲ್ದೇ ಭಾರತಕ್ಕೆ ಟಾಪ್ ಆರ್ಡರ್ ಬ್ಯಾಟಿಂಗ್ ಬಲವೇ ಮೇನ್ ಸ್ಟ್ರೆಂಥ್ ಆಗಿದೆ.
ಇದನ್ನೂ ಓದಿ : ನೇಪಾಳದಲ್ಲಿ ಕನ್ನಡಿಗರ ನೆರವಿಗೆ ತಂಡ ರಚಿಸಿದ ರಾಜ್ಯಸರ್ಕಾರ – ಪ್ರವಾಸಕ್ಕೆ ತೆರಳಿದ ಕನ್ನಡಿಗರು ಶೀಘ್ರದಲ್ಲೇ ವಾಪಸ್
ಟಿ-20 ಕ್ರಿಕೆಟ್ ನಲ್ಲಿ ಭಾರತ ಈ ಮಟ್ಟಿಗೆ ಸಕ್ಸಸ್ ಕಾಣೋಕೆ ಕಾರಣವೇ ಟಾಪ್ ಆರ್ಡರ್ ಬ್ಯಾಟಿಂಗ್ ಆರ್ಡರ್. ಈ ಸಲ ಕೂಡ ಅಭಿಷೇಕ್ ಶರ್ಮಾ ಮತ್ತು ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಚಾನ್ಸಸ್ ಇದೆ.
ಟಾಪ್ ಆರ್ಡರ್ ಬಲ!
ಬ್ಯಾಟರ್ ಗಳು ಪಂದ್ಯಗಳು ಸ್ಟ್ರೈಕ್ ರೇಟ್
ಅಭಿಷೇಕ್ ಶರ್ಮಾ 17 193.84
ಶುಭಮನ್ ಗಿಲ್ 21 139.27
ಸೂರ್ಯಕುಮಾರ್ ಯಾದವ್ 83 167.07
ತಿಲಕ್ ವರ್ಮಾ 25 155.07
ಹಾರ್ದಿಕ್ ಪಾಂಡ್ಯ 114 141
ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಸ್ಟ್ರೈಕ್ ರೇಟ್ ಹೊಂದಿರೋದ್ರಿಂದ ಮಿಡಲ್ ಆರ್ಡರ್ ನಲ್ಲಿ ಸ್ವಲ್ಪ ಬೂಸ್ಟ್ ಸಿಕ್ರೂ ಬಿಗ್ ಟಾರ್ಗೆಟ್ ಸೆಟ್ ಮಾಡಬಹುದು. ಅಷ್ಟೇ ಅಲ್ದೇ ಭಾರತ ತಂಡವು 2025 ರ ಏಷ್ಯಾಕಪ್‌ಗೆ ಬಲಿಷ್ಠ ಬೌಲಿಂಗ್ ಲೈನ್‌ಅಪ್‌ನೊಂದಿಗೆ ಎಂಟ್ರಿ ಕೊಡ್ತಿದೆ.
ಭಾರತದ ಬೌಲಿಂಗ್ ಬಲ!
ಬೌಲರ್ ಗಳು ಪ್ರಕಾರ ವಿಶೇಷತೆ
ಜಸ್ಪ್ರೀತ್ ಬುಮ್ರಾ ಬಲಗೈ ಪೇಸ್ ಡೆತ್ ಓವರ್
ಅರ್ಶ್ದೀಪ್ ಸಿಂಗ್ ಎಡಗೈ ಪೇಸ್ ಪವರ್ ಪ್ಲೇ ಮತ್ತು ಡೆತ್ ಓವರ್
ಹಾರ್ದಿಕ್ ಪಾಂಡ್ಯ ಬಲಗೈ ಮಧ್ಯಮ ವೇಗಿ ಮಿಡಲ್-ಓವರ್ ಗಳು
ಅಕ್ಷರ್ ಪಟೇಲ್ ಎಡಗೈ ಆರ್ಥೊಡಾಕ್ಸ್ ಮಿಡಲ್-ಓವರ್ ಗಳು
ವರುಣ್ ಚಕ್ರವರ್ತಿ ಬಲಗೈ ಮಿಸ್ಟ್ರಿ ಸ್ಪಿನ್ನರ್ ಮಿಡಲ್-ಓವರ್ ಗಳು
ಕುಲದೀಪ್ ಯಾದವ್ ಎಡಗೈ ಸ್ಪಿನ್ನರ್ ಮಿಡಲ್-ಓವರ್ ಗಳು
ಹರ್ಷಿತ್ ರಾಣಾ ಬಲಗೈ ಮಧ್ಯಮ ವೇಗಿ ಪವರ್‌ಪ್ಲೇ
ಬೌಲಿಂಗ್ನಲ್ಲೂ ಸಾಕಷ್ಟು ಸ್ಪೆಷಾಲಿಟಿಗಳು ಇದೆ. ಟಾಪ್ ಟು ಬಾಟಮ್ ಬೆಸ್ಟ್ ಟೀಂ ಎನಿಸುವಂತೆಯೇ ಇದೆ. ಬಟ್ ಕೊರತೆ ಏನಪ್ಪ ಅಂದ್ರೆ ಮಿಡಲ್ ಆರ್ಡರ್.. ಫಿನಿಶರ್ ರೋಲ್. ಭಾರತದ ಫಿನಿಶರ್ ರೋಲ್ ನಲ್ಲಿ ಪರಿಣಾಮಕಾರಿ ಬ್ಯಾಟರ್ ಕೊರತೆಯಿದೆ. ಇತ್ತೀಚಿನ ದೇಶೀಯ ಲೀಗ್‌ನಲ್ಲಿ ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ನಿರೀಕ್ಷೆಯಂತೆ ಪ್ರದರ್ಶನ ನೀಡಿಲ್ಲ. ಶಿವಂ ದುಬೆ ಪಾತ್ರ ಅಷ್ಟೇನು ಸದ್ದು ಮಾಡ್ತಿಲ್ಲ. ಐಪಿಎಲ್ 2025 ರಲ್ಲಿ ಆರ್‌ಸಿಬಿ ಪರ ಕೆಳ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ ಜಿತೇಶ್ ಶರ್ಮಾ ಮೇಲೆ ಕೊಂಚ ಭರವಸೆ ಇಡ್ಬೋದು. ಹಾಗೇ 8ನೇ ಕ್ರಮಾಂಕದ ಬ್ಯಾಟಿಂಗ್ ಬಳಿಕ ಯಾವುದೇ ಬ್ಯಾಟರ್ 20+ ಸ್ಕೋರ್ ಮಾಡೋಕೂ ಸಾಧ್ಯವಾಗ್ತಿಲ್ಲ. ಇದೂ ಕೂಡ ಮೈನಸ್ ಆಗ್ಬೋದು.

ನೋಡಿರಿ

