ಮದ್ದೂರಿನಲ್ಲಿ ಘರ್ಜಿಸಿದ ಕಮಲ ಪಡೆ – ಸಿದ್ದುಗೆ R. ಅಶೋಕ್, BYV ವಾರ್ನಿಂಗ್
ಧರ್ಮ ರಾಜಕೀಯದಲ್ಲಿ ಗೆದ್ದವರು ಯಾರು?
ಮಂಡ್ಯದ ಮದ್ದೂರಲ್ಲಿ ಗಲಭೆಯಾದ ಬಳಿಕ, ಇಂದು ಪೊಲೀಸ್ ಕಟ್ಟೆಚ್ಚರದಲ್ಲಿ ಬಿಜೆಪಿ ನಿಯೋಗದ ಮುಖಂಡರ ಸಮ್ಮುಖದಲ್ಲಿ ಬೃಹತ್ ಗಣೇಶ ವಿಸರ್ಜನಾ ಶೋಭಾಯಾತ್ರೆ ನಡೆಸಲಾಯ್ತು. ಮದ್ದೂರಿನ ವಿವಿಧ ಕಡೆ ಪ್ರತಿಷ್ಠಾಪನೆ ಮಾಡಿದ್ದ 28 ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ತಂದು ಸಾಮೂಹಿಕ ವಿಸರ್ಜನೆ ಮಾಡಿದ್ರು. ಮೆರವಣಿಗೆ ಮುನ್ನವೇ ಜಾನಪದ ಕಲಾ ತಂಡಗಳೊಂದಿಗೆ ಹಿಂದೂ ಕಾರ್ಯಕರ್ತರು ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. 10ಕ್ಕೂ ಹೆಚ್ಚು ಕಲಾತಂಡಗಳು, ಪೂಜಾಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ತಮಟೆ ಸೇರಿದಂತೆ ಹಲವು ಕಲಾ ತಂಡಗಳು ಸಾಥ್ ನೀಡಿದವು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಕಾಶಿ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ಕೊಡಲಾಯಿತು. ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆಗೆ ಚಾಲನೆ. ಬಿ.ವೈ.ವಿಜಯೇಂದ್ರ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಯದುವೀರ್, ಅಶ್ವತ್ಥ ನಾರಾಯಣ ಮತ್ತಿತರರು ಸಾಥ್ ಕೊಟ್ಟರು ಗಣೇಶ ಮೆರವಣಿಗೆಗೆ ಜನ ಸಾಗರವೇ ನೆರೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನ, ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಭಾಗಿಯಾದರು. ಮೆರವಣಿಗೆಯುದ್ದಕ್ಕೂ ಜೈಶ್ರೀರಾಮ್ ಘೋಷಣೆ ಕೂಗಿದರು. ಇನ್ನು ಕಾರ್ಯಕರ್ತರ ಅಭಿಮಾನಕ್ಕೆ ಕೇಸರಿ ನಾಯಕರು ಖುಷಿಯಾಗಿದ್ರು.. ಮೆರವಣಿಗೆ ವೇಳೆ ಅಶೋಕ್, ಅಶ್ವತ್ಥ ನಾರಾಯಣರನ್ನ ಹೆಗಲ ಮೇಲೆ ಹೊತ್ತು ಕಾರ್ಯಕರ್ತರು ಕುಣಿದಿದ್ದಾರೆ.

ಮೆರವಣಿಗೆಗೂ ಮುನ್ನ ಬಿಜೆಪಿ ನಾಯಕರು ಗಾಯಗೊಂಡವರ ಮನೆಗೆ ಭೇಟಿ. ನೀಡಿ, ಸ್ಥಳೀಯರಿಗೆ ಧೈರ್ಯ ತುಂಬಿದರು. ನಂತರ ಲಾಠಿ ಚಾರ್ಜ್ ವೇಳೆ ಗಾಯಗೊಂಡವರ ಮನೆಗಳಿಗೂ ಭೇಟಿ ನೀಡಲಾಯಿತು. ಬಿಜೆಪಿ, ಜೆಡಿಎಸ್ ಹಾಗೂ ಹಿಂದೂಪರ ಸಂಘಟನೆಗಳಿಂದ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನೆ ಅದ್ದೂರಿಯಾಗಿ ನಡೆಸಲಾಯ್ತು.. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ರು. ಮದ್ದೂರು ಪಟ್ಟಣದಾದ್ಯಂತ ಖಾಕಿ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು. ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ಹಾಸನ ಸೇರಿ ಹಲವು ಜಿಲ್ಲೆಗಳ ಪೊಲೀಸರ ನಿಯೋಜನೆಯಾಗಿತ್ತು. ಕೆಎಸ್ಆರ್ಪಿ, ಡಿಎಆರ್ ತುಕಡಿ, ರ್ಯಾಪಿಡ್ ಆ್ಯಕ್ಷನ್ ಪೋರ್ಸ್ ಸೇರಿ 2 ಸಾವಿರ ಪೊಲೀಸ್ ಸಿಬ್ಬಂದಿಗಳು ಕೂಡಾ ಇದ್ದರು.![]()
ಬೃಹತ್ ಶೋಭಾಯಾತ್ರೆಯಲ್ಲಿ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ನ ಪ್ರಮುಖ ನಾಯಕರು ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಜಿಲ್ಲಾಧಿಕಾರಿ, ಎಸ್ಪಿ, ನಡೆದಿರುವ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.. ದುಷ್ಕರ್ಮಿಗಳ ಅಟ್ಟಹಾಸ ಎಷ್ಟರ ಮಟ್ಟಿಗೆ ಇದೆ ಅನ್ನೋದು ಗೊತ್ತಾಗುತ್ತದೆ. ರಸ್ತೆಯಲ್ಲಿ ಹೆಣ್ಣು ಮಕ್ಕಳು ನಡೆದುಕೊಂಡು ಹೋಗುವುದಕ್ಕೆ ಆಗ್ತಿಲ್ಲ ಎಂದರು
ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ “ಮಸೀದಿ ಮುಂದೆ ಬರಬಾರದು ಎಂದಿದ್ದಾರೆ. ನಮಗೆ ತೊಡೆ ತಟ್ಟುವ ಕೆಲಸ ಮಾಡಬೇಡಿ. ಎಲ್ಲವನ್ನೂ ಎದುರಿಸುವ ಶಕ್ತಿ ಹಿಂದೂ ಸಮಾಜಕ್ಕೆ ಇದೆ. ಸಿದ್ದರಾಮಯ್ಯನವರು ಕೇವಲ ಮುಸ್ಲಿಮರ ಮತಗಳಿಂದ ಮಾತ್ರ ಮುಖ್ಯಮಂತ್ರಿ ಆಗಿದ್ದರೆ. ಮುಸ್ಲಿಮರಿಗೆ ಏನೂ ಆಗಬಾರದು ಎನ್ನುವ ಮಾನಸಿಕತೆಯಿಂದ ಹೊರ ಬನ್ನಿ ಎಂದು ಕಿಡಿ ಕಾರಿದರು.
ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ರು. ಮದ್ದೂರು ವಡೆಗೆ ಫೇಮಸ್ಸು. ಸಿದ್ದರಾಮಯ್ಯ, ಡಿಕೆಶಿ ಹೀಗೆ ಮದ್ದೂರು ಜನರಿಗೆ ಸರ್ಪೋರ್ಟ್ ಮಾಡದಿದ್ರೆ. ಮದ್ದೂರು ಜನ ನಿಮ್ಮ ತಲೆ ಮೇಲೆ ವಡೆ ತಟ್ತಾರೆ.ಡಿಕೆಶಿ ಮಂಡ್ಯದವರನ್ನ ಛತ್ರಿಗಳು ಅಂದ್ರು.ಈಗ ತಮ್ಮ ಛತ್ರಿಗಳ ಕೆಲಸ ತೋರಿಸಿದ್ರು ಎಂದು ವಿಧಾನಸಭೆಯ ವಿಪಕ್ಷನಾಯಕ ಆರ್.ಅಶೋಕ್ ಹೇಳಿದರು. ಇದು ಹಿಂದುಗಳ ದೇಶ, ಹಿಂದೂಗಳ ಭೂಮಿ. ನೀವು ಪಾಕಿಸ್ತಾನಕ್ಕೆ ಜೈ ಅಂದ್ರೆ ನಿಮ್ಮ ಹೆಡೆಮುರಿ ಕಟ್ಟಿ ಪಾಕಿಸ್ತಾನಕ್ಕೆ ಕಳಿಸ್ತೀವಿ. ಸಿದ್ದರಾಮಯ್ಯ ಮುಲ್ಲಾಗಳ ಟೋಪಿ ಹಾಕೋತಾರೆ. ಹಿಂದೂಗಳಿಗೆ ಟೋಪಿ ಹಾಕ್ತಾರೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ರು. ಬುರುಡೆ, ಬುರುಡೆ ಅಂತ ಬುರುಡೆ ಬಿಟ್ರು. ಆಮೇಲೆ ಅಯ್ಯಪ್ಪಸ್ವಾಮಿಗೆ ಅಪಮಾನ. ಈಗ ಚಾಮುಂಡಿ ಬೆಟ್ಟಕ್ಕೆ ಅಗೌರವ ತೋರಲು ಹೊರಟಿದ್ದಾರೆ. ನಿಮಗೆ ಸರಿಯಾದ ಪಾಠ ಕಲಿಸ್ತೀವಿ ಎಂದು ಆರ್ ಅಶೋಕ್ ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ನೋಡಿರಿ

