TRP ಡೌನ್..‌ ದೃಷ್ಟಿಬೊಟ್ಟು ಬಿಟ್ಟ ದತ್ತ.. BBK ಗೂ ಬರಲ್ಲ ವಿಜಯ್‌ ಸೂರ್ಯ? – ಸೀರಿಯಲ್‌ ಬಿಟ್ಟಿದ್ದು ಇದೇ ಕಾರಣಕ್ಕೆ?

TRP ಡೌನ್..‌ ದೃಷ್ಟಿಬೊಟ್ಟು ಬಿಟ್ಟ ದತ್ತ.. BBK ಗೂ ಬರಲ್ಲ ವಿಜಯ್‌ ಸೂರ್ಯ? – ಸೀರಿಯಲ್‌ ಬಿಟ್ಟಿದ್ದು ಇದೇ ಕಾರಣಕ್ಕೆ?

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗ್ತಿರೋ ಸೀರಿಯಲ್‌ಗಳಲ್ಲಿ ದೃಷ್ಟಿಬೊಟ್ಟು  ಕೂಡ ಒಂದು.. ಇಷ್ಟು ದಿನ ದೃಷ್ಠಿ ಮುಖಕ್ಕೆ ಮಸಿ ಬಳಿದುಕೊಂಡು, ನಿಜರೂಪವನ್ನ ಮರೆಮಾಚಿ ಬದುಕ್ತಿದ್ಲು. ಇದೀಗ ದೃಷ್ಠಿಯ ರಿಯಲ್‌ ಲುಕ್‌ ರಿವೀಲ್‌ ಆಗಿದೆ. ರೌಡಿಸಂ ಮಾಡ್ತಿದ್ದ ದತ್ತ ಈಗ ದೃಷ್ಠಿ ಸೌಂದರ್ಯಕ್ಕೆ ಮರುಳಾಗಿದ್ದಾನೆ.. ಇಬ್ಬರು ಪ್ರೀತಿಯಲ್ಲಿ ತೇಲಾಡ್ತಿದ್ದಾರೆ. ವಿಜಯ್‌ ಸೂರ್ಯ  ಆಕ್ಟಿಂಗ್‌ ಗೆ ಫ್ಯಾನ್ಸ್‌ ಕೂಡ ಫಿದಾ ಆಗಿದ್ದಾರೆ.. ಆದ್ರೀಗ ಸೀರಿಯಲ್‌ ಫ್ಯಾನ್ಸ್‌ ಗೆ ಶಾಕಿಂಗ್‌ ಸುದ್ದಿಯೊಂದಿದೆ. ನಟ ವಿಜಯ್‌ ಸೂರ್ಯ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.

ಇದನ್ನೂ ಓದಿ: ‘ಹಳ್ಳಿ ಪವರ್’ ಶೋನಲ್ಲಿ ಅಲ್ಲೋಲ ಕಲ್ಲೋಲ – ರೂಲ್ಸ್ ಬ್ರೇಕ್, ಸ್ಪರ್ಧಿಗಳ ನಿರ್ಗಮನ, ಅಕುಲ್ ಬಾಲಾಜಿ ಮಾಡಿದ್ದೇನು?

ದೃಷ್ಟಿಬೊಟ್ಟು ಸೀರಿಯಲ್‌ ಈಗ ಹೊಸ ತಿರುವು ಪಡೆದುಕೊಳ್ತಿದೆ. ದೊಡ್ಡ ರೌಡಿ ಆಗಿದ್ದ ದತ್ತನ ಬಾಳಲ್ಲಿ ದೃಷ್ಟಿ ಎಂಟ್ರಿಯಾಗಿದ್ಲು. ಆಕೆಯನ್ನೇ ಮದುವೆ ಆಗುವಂತೆ ಆಗಿತ್ತು. ದತ್ತ ದೃಷ್ಠಿಯನ್ನ ಮದುವೆ ಆಗ್ತಿದ್ದಂತೆ ಸಾಕಷ್ಟು ಬದಲಾಗಿದ್ದಾನೆ. ರೌಡಿಸಂನಿಂದ ಆದಷ್ಟು ದೂರ ಉಳ್ಕೊಂಡಿದ್ದಾನೆ. ಮತ್ತೊಂದ್ಕಡೆ ದುಷ್ಟರಿಂದ ದೃಷ್ಠಿಯನ್ನ ಕಾಪಾಡಲು ಆಕೆಯ ಅಮ್ಮ ಇಷ್ಟು ದಿನ ಮಸಿ ಬಳಿಯುತ್ತಾ ಬಂದಿದ್ರು.. ಆದ್ರೀಗ ದೃಷ್ಟಿಯ ಅಸಲಿ ಸೌಂದರ್ಯ ಬೆಳಕಿಗೆ ಬಂದಿದೆ. ಒಮ್ಮೆ ಹೆಂಡ್ತಿ ಮೇಲೆ ಕೋಪ ಮಾಡಿಕೊಂಡು, ರಿಯಾಲಿಟಿಯನ್ನ ದತ್ತಾ ಅರ್ಥ ಮಾಡಿಕೊಂಡಿದ್ದಾನೆ. ಹೀಗಾಗಿ ಆಕೆಯ ರಿಯಲ್‌ ಫೇಸ್‌ ನ ಒಪ್ಪಿಕೊಂಡಿದ್ದಾನೆ. ದೃಷ್ಟಿಯ ಸೌಂದರ್ಯಕ್ಕೆ ದತ್ತಾ ಭಾಯ್ ಮನಸೋತಿದ್ದಾನೆ. ಇನ್ನೇನು ಇಬ್ಬರ ಮಧ್ಯೆ ರೊಮ್ಯಾನ್ಸ್ ಸ್ಟಾರ್ಟ್ ಆಗಬೇಕು ಅನ್ನುವಷ್ಟರಲ್ಲಿ.. ದತ್ತಾ ಬಾಯ್‌ ಸೀರಿಯಲ್‌ ನಿಂದ ಏಕಾಏಕಿ ನಾಪತ್ತೆ ಆಗಿದ್ದಾನೆ. ಇದೀಗ ನಟ ವಿಜಯ್‌ ಸೂರ್ಯ ಸೀರಿಯಲ್‌ನಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗ್ತಿದೆ.

ಹೌದು.. ದೃಷ್ಟಿ ಬೊಟ್ಟು ಸೀರಿಯಲ್‌ನಲ್ಲಿ ವಿಜಯ್‌ಸೂರ್ಯ ದತ್ತ ಭಾಯ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದೆಷ್ಟೋ ಜನ ವಿಜಯ್ ಸೂರ್ಯಗಾಗಿಯೇ ಈ ಸೀರಿಯಲ್ ನೋಡ್ತಿದ್ರು ಅಂದ್ರೆ ತಪ್ಪಾಗಲ್ಲ. ಅಗ್ನಿಸಾಕ್ಷಿ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರೋ ವಿಜಯ್ ಸೂರ್ಯ ನಟನೆಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಇದೀಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲೂ ವಿಜಯ್‌ ಸೂರ್ಯ ನಟನೆಗೆ ಅಭಿಮಾನಿಗಳು ಭೇಷ್‌ ಅಂದಿದ್ದಾರೆ. ಆದ್ರೀಗ ದತ್ತಾ ಭಾಯ್‌ ಕಾಣಿಸುತ್ತಿಲ್ಲ ಅಂತಾ ಸೀರಿಯಲ್‌ನಲ್ಲಿ ತೋರಿಸಲಾಗಿದೆ. ಗಂಡ ಇಲ್ಲ ಅಂತಾ ದೃಷ್ಟಿ ಕೂಡ ಆತಂಕಗೊಂಡಿದ್ದಾಳೆ. ಈ ಬೆನ್ನಲ್ಲೇ ವಿಜಯ್‌ ಸೂರ್ಯ ದೃಷ್ಟಿಬೊಟ್ಟು ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ದಾರೆ ಎಂದು ಹೇಳಲಾಗ್ತಿದೆ.

ಅಂದ್ಹಾಗೆ ದೃಷ್ಟಿಬೊಟ್ಟು ಸೋರಿಯಲ್‌ ಶುರುವಾಗಿ ಒಂದು ವರ್ಷ ಆಯ್ತು.  ಸೆಪ್ಟೆಂಬರ್ 9, 2024 ರಿಂದ ದೃಷ್ಟಿಬೊಟ್ಟು ಸೀರಿಯಲ್‌ ಪ್ರಸಾರ ಕಾಣ್ತಿದೆ.. ಈ ಸೀರಿಯಲ್‌ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ ಸೀರಿಯಲ್‌ ಆರಂಭವಾದಾಗಿನಿಂದಲೂ  ಟಿಆರ್‌ಪಿಯಲ್ಲಿ ಕಮಾಲ್ ಮಾಡಿಲ್ಲ. ಟಿಆರ್‌ಪಿ ಕಾರಣದಿಂದಲೇ ನಟ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ರಾ ಅನ್ನೋ ಪ್ರಶ್ನೆ ಕೂಡ ವೀಕ್ಷಕರನ್ನ ಕಾಡ್ತಿದೆ. ಮತ್ತೊಂದ್ಕಡೆ ಬಿಗ್‌ ಬಾಸ್‌ಗಾಗಿ ಈ ಸೀರಿಯಲ್‌ ನ ಮುಗಿಸಲಾಗ್ತಿದೆ.. ವಿಜಯ್‌ ಸೂರ್ಯ ದೊಡ್ಮನೆಗೆ ಬರ್ತಾರೆ ಎಂದು ಹೇಳಲಾಗ್ತಿದೆ. ಆದ್ರೆ ವಿಜಯ್‌ ಸೂರ್ಯ ಶೋಗೆ ಬರೋದು ಡೌಟ್ ಅಂತಾ ಹೇಳಲಾಗ್ತಿದೆ. ವೈಯಕ್ತಿಕ ಕಾರಣಗಳಿಂದಾಗಿ ಸೀರಿಯಲ್‌ನಿಂದ ದೂರ ಉಳಿದಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ದೃಷ್ಟಿಬೊಟ್ಟು ತಂಡ ಅಥವಾ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Shwetha M