‘ಹಳ್ಳಿ ಪವರ್’ ಶೋನಲ್ಲಿ ಅಲ್ಲೋಲ ಕಲ್ಲೋಲ – ರೂಲ್ಸ್ ಬ್ರೇಕ್, ಸ್ಪರ್ಧಿಗಳ ನಿರ್ಗಮನ, ಅಕುಲ್ ಬಾಲಾಜಿ ಮಾಡಿದ್ದೇನು?

‘ಹಳ್ಳಿ ಪವರ್’ ಶೋನಲ್ಲಿ ಅಲ್ಲೋಲ ಕಲ್ಲೋಲ – ರೂಲ್ಸ್ ಬ್ರೇಕ್, ಸ್ಪರ್ಧಿಗಳ ನಿರ್ಗಮನ, ಅಕುಲ್ ಬಾಲಾಜಿ ಮಾಡಿದ್ದೇನು?

‘ಹಳ್ಳಿ ಪವರ್’  ರಿಯಾಲಿಟಿ ಶೋ ವಿವಾದಗಳ ಗೂಡಾಗಿದೆ. ರಿಯಾಲಿಟಿ ಶೋನಲ್ಲಿ ಹಿಂದೆಂದೂ ಕಂಡು ಕೇಳರಿಯದ ಕಿರಿಕ್ ಶುರುವಾಗಿದೆ. ಶೋ ನಿಂದ ಕೆಲ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಮತ್ತೊಂದೆಡೆ  ಶೋ ನೇತೃತ್ವದ ವಹಿಸಿಕೊಂಡಿರೋ ಅಕುಲ್ ಬಾಲಾಜಿ ಕೂಡಾ ಅರ್ಧಕ್ಕೆ ಹೊರ ನಡೆದಿದ್ದಾರೆ ಅಂತಾನೂ ಹೇಳಲಾಗ್ತಿದೆ.

ಇದನ್ನೂ ಓದಿ: ಕೇಡಿ ಶಕುಂತಲಾಗೆ ಆಸ್ತಿ ಬರೆದುಕೊಟ್ಟ ಗೌತಮ್ – ಮನೆ ಬಿಟ್ಟು ಹೊರಟೇ ಬಿಟ್ಟ ಗೌತಮ್

ಸಿಟಿ ಮಂದಿ ಹಳ್ಳಿಯಲ್ಲಿ ಹೋಗಿ ಜೀವನ ನಡೆಸಿದ್ರೆ ಹೇಗಿರುತ್ತೆ ಅಂತಾ ತೋರಿಸಲು ಹೊರಟಿರುವ ಹಳ್ಳಿ ಪವರ್ ರಿಯಾಲಿಟಿ ಶೋ ಇದೀಗ ಗೊಂದಲದ ಗೂಡಾಗಿದೆ. ಹಳ್ಳಿ ಜೀವನದಲ್ಲಿ ಬರುವ ಸಾಕಷ್ಟು ಚಾಲೆಂಜ್​ಗಳನ್ನು ಎದುರಿಸಲು ಹಳ್ಳಿ ಪವರ್ ಎಂಬ ರಿಯಾಲಿಟಿ ಶೋ​ನಲ್ಲಿ 12 ಸ್ಪರ್ಧಿಗಳು ಭಾಗವಹಿಸಿದ್ದರು. ಇದೀಗ ಈ ಶೋ ನಲ್ಲಿ ನಡೆದ ವಿವಾದಕ್ಕೆ ಬೇಸತ್ತು ನಾಲ್ವರು ಶೋನಿಂದ ಹೊರ ನಡೆದಿದ್ದಾರೆ. ಒಬ್ಬರು ಎಲಿಮಿನೇಟ್, ಒಬ್ಬರು ಗಾಯಾಳು ಹಾಗೂ ಮತ್ತಿಬ್ಬರು ವೈಯಕ್ತಿಕ ಕಾರಣ ನೀಡಿ ಈ ಆಟದಿಂದ ಹಿಂದೆ ಸರಿದಿದ್ದಾರೆ.

ಶೋನಿಂದ ಹೊರ ಬಂದ ಭೀಮಾ ಸಿನಿಮಾದ ನಟಿ ಆ್ಯಶ್ ಮೆಲೋ ಸ್ಕೈಲರ್ ಗಂಭೀರ ಆರೋಪ ಮಾಡಿದ್ದಾರೆ. ರೀಲ್ಸ್ ಮೂಲಕ ಫೇಮಸ್ ಆಗಿರೋ ನಟಿ ಆ್ಯಶ್, ಹಳ್ಳಿ ಪವರ್ ಶೋನಲ್ಲಿ ಏಳೇ ದಿನಕ್ಕೆ ಅವರು ಸುಸ್ತಾಗಿದ್ದಾರೆ. ಜೊತೆಗೆ ಗಂಭೀರ ಆರೋಪ ಕೂಡಾ ಮಾಡಿದ್ದಾರೆ.

ಹಳ್ಳಿ ಪವರ್ ಶೋನಲ್ಲಿ ವೈಯಕ್ತಿಕ ಕಾರಣ ನೀಡಿ ಮಂಗಳೂರಿನ ಸ್ನೇಹಾ ಶೆಟ್ಟಿ ಹೊರ ಹೋಗೋದಾಗಿ ಅಕುಲ್ ಬಾಲಾಜಿ ಎದುರು ಹೇಳಿದರು. ಮತ್ತೆ ಯಾರಾದರೂ ಶೋನಿಂದ ಹೊರ ಹೋಗ್ತೀರಾ ಎಂದಾದರೆ ಕೈ ಎತ್ತಿ ಎಂದು ಅಕುಲ್ ಕೇಳಿದರು. ಆಗ, ಆ್ಯಶ್ ಕೈ ಎತ್ತಿದರು. ಈ ವೇಳೆ ಅವರು, ವೈಯಕ್ತಿಕ ಕಾರಣ ಎಂದಷ್ಟೇ ಹೇಳಿದ್ದರು. ಆ್ಯಶ್, ಶೋನಿಂದ ಹೊರ ಬಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ವಿವರವಾಗಿ ಬರೆದುಕೊಂಡಿದ್ದಾರೆ. ‘ನಾನು ನನ್ನ ಎಲ್ಲಾ ಪ್ರೇಕ್ಷಕರನ್ನು ಮತ್ತು ಕಾರ್ಯಕ್ರಮದ ವೀಕ್ಷಕರನ್ನು ನಿಜವಾಗಿಯೂ ಗೌರವಿಸುತ್ತೇನೆ. ನನ್ನನ್ನು ಕೆಟ್ಟ ರೀತಿಯಲ್ಲಿ ತೋರಿಸಿದ್ದರಿಂದ ಕಾರ್ಯಕ್ರಮವನ್ನು ತೊರೆದಿದ್ದೇನೆ. ನಾನು ಮಾತನಾಡಿದ ಎಲ್ಲಾ ಮಾತುಗಳನ್ನು ನೀವು ನೋಡಿರಬಹುದು. ಅದರಲ್ಲಿ ನಾನು ನನ್ನ ಎಲ್ಲಾ ಪ್ರೇಕ್ಷಕರನ್ನು ಮತ್ತು ಹಳ್ಳಿ ಪವರ್ ಶೋನ ಗೌರವಿಸಿದೆ. ಆದರೆ ನನ್ನ ಮಾತುಗಳನ್ನು ತಪ್ಪಾಗಿ ಚಿತ್ರಿಸಿ, ಕೆಳಕ್ಕೆ ಹಾಕುವ ರೀತಿಯಲ್ಲಿ ತೋರಿಸಲಾಯಿತು’ ಎಂದಿದ್ದಾರೆ ಅವರು.

‘ಹಳ್ಳಿ ಪವರ್’ ಶೋನಲ್ಲಿ ಕಳೆದ ವಾರಾಂತ್ಯದಲ್ಲಿ ಯುಕ್ತ ಎಲಿಮಿನೇಟ್ ಆದರು. ಈ ಮಧ್ಯೆ ಕಾವ್ಯಾ ಅವರು ಕಾಲಿಗೆ ಪೆಟ್ಟು ಮಾಡಿಕೊಂಡು ಹೊರ ಹೋದರು. ಈಗ ಶೋನಿಂದ ಮತ್ತಿಬ್ಬರು ಹೊರ ಹೋಗಿದ್ದಾರೆ. ಆ್ಯಶ್ ಮೆಲೋ ಸ್ಕೈಲರ್ ಹಾಗೂ ಮಂಗಳೂರಿನ ಸ್ನೇಹಾ ಶೆಟ್ಟಿ ವೈಯಕ್ತಿಕ ಕಾರಣ ನೀಡಿ ಹೊರಕ್ಕೆ ಬಂದಿದ್ದಾರೆ.

ಮತ್ತೊಂದೆಡೆ ಹಳ್ಳಿ ಪವರ್ ಶೋಗೆ ನೇತೃತ್ವವಹಿಸಿಕೊಂಡಿರುವ ಅಕುಲ್ ಬಾಲಾಜಿ ಅಸಮಾಧಾನದಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪರ್ಧಿಗಳು ಗೊತ್ತಿದ್ದೂ ತಪ್ಪು ಮಾಡಿದ್ದಾರೆ. ಸ್ನೇಹಾ ಶೆಟ್ಟಿ ಅವರು ಶೋ ನಡೆಯೋ ಜಾಗಕ್ಕೆ ಮನೆಯವರನ್ನು ಕರೆಸಿಕೊಂಡಿದ್ದಾರೆ. ಇನ್ನು ಆ್ಯಶ್ ಮೆಲೋ ಸ್ಕೈಲರ್, ‘ಈ ಶೋ ನನಗಲ್ಲ’ ಎಂದಿದ್ದಾರೆ. ಇದರಿಂದ ಅಕುಲ್ ಸಿಟ್ಟಾಗಿದ್ದಾರೆ. ಅವರು ಸಿಟ್ಟಲ್ಲಿ ಅರ್ಧಕ್ಕೆ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

Sulekha