ಹಳದಿ ಮಾರ್ಗದಲ್ಲಿ ಇಂದಿನಿಂದ ನಾಲ್ಕನೇ ರೈಲು ಸಂಚಾರ – ಹಳದಿ ಮಾರ್ಗದ ವೇಳಾಪಟ್ಟಿಯಲ್ಲಿ ಬದಲಾವಣೆ

ಹಳದಿ ಮಾರ್ಗದಲ್ಲಿ ಇಂದಿನಿಂದ ನಾಲ್ಕನೇ ರೈಲು ಸಂಚಾರ – ಹಳದಿ ಮಾರ್ಗದ ವೇಳಾಪಟ್ಟಿಯಲ್ಲಿ ಬದಲಾವಣೆ

ಸಿಲಿಕಾನ್‌ ಸಿಟಿ ಬೆಂಗಳೂರಿನ ಬಹುತೇಕ ಜನರು ಪ್ರಯಾಣಕ್ಕೆ ನಮ್ಮ ಮೆಟೋವನ್ನೇ ಅಲವಲಂಬಿಸಿದ್ದಾರೆ. ನಿತ್ಯಾ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಗೊಂಡಿತ್ತು. ಇದೀಗ ಹಳದಿ ಮಾರ್ಗದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ವೊಂದಿದೆ. ಇಂದಿನಿಂದ ಹಳದಿ ಮಾರ್ಗದಲ್ಲಿ ಮತ್ತೊಂದು ರೈಲು ಸಂಚರಿಸಲಿದೆ. ಇದೀಗ ಬಿಎಂ ಆರ್‌ಸಿಎಲ್‌ ಮೆಟ್ರೋ ಸಂಚಾರದ ಹೊಸ ವೇಳಾಪಟ್ಟಿ ರಿಲೀಸ್‌ ಮಾಡಿದೆ.

ಇದನ್ನೂ ಓದಿ: ಅಯ್ಯಯ್ಯೋ.. ನಿಂಬೆ ಹಣ್ಣಿನ ಮೇಲೆ ಥಾರ್‌ ಹತ್ತಿಸಲು ಹೋಗಿ ಆಕ್ಸಿಲರೇಟರ್ ಒತ್ತಿದ ಮಹಿಳೆ!

ಹಳದಿ ಮಾರ್ಗದಲ್ಲಿ ಬೆಂಗಳೂರಿನ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೂ ಇಷ್ಟು ದಿನ 3 ಮೆಟ್ರೋ ಮಾತ್ರ ಸಂಚರಿಸುತ್ತಿತ್ತು. 25 ನಿಮಿಷಕ್ಕೊಂದು ಮೆಟ್ರೋವನ್ನ ಬಿಡಲಾಗುತ್ತಿತ್ತು. ಒಂದು ಮೆಟ್ರೋ ಮಿಸ್‌ ಆದ್ರೂ 25 ನಿಮಿಷ ಪ್ರಯಾಣಿಕರು ಕಾಯಬೇಕಿತ್ತು. ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಭಾರೀ ಹೆಚ್ಚಿದ್ದ ಕಾರಣ ದಟ್ಟಣೆ ಹೆಚ್ಚಿತ್ತು. ಇದೀಗ ಹಳದಿ ಮಾರ್ಗದಲ್ಲಿ ಇಂದಿನಿಂದ ನಾಲ್ಕನೇ ಮೆಟ್ರೋ ಸಂಚರಿಸಲಿದೆ.   ಇದರಿಂದ ರೈಲುಗಳ ನಡುವಿನ ಅಂತರವು 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಲಿದೆ.

ಇನ್ನು ಸೋಮವಾರದಿಂದ ಶನಿವಾರದವರೆಗೆ ಮೊದಲ ರೈಲು ಬೆಳಿಗ್ಗೆ 6 ಗಂಟೆಗೆ ಮತ್ತು ಭಾನುವಾರ 7 ಗಂಟೆಗೆ ಹೊರಡಲಿದೆ. ಈ ಬಗ್ಗೆ ಬಿಎಂಆರ್​ ಸಿಎಲ್ ಪ್ರಕಟಣೆ ಹೊರಡಿಸಿದ್ದು, ಇದರಿಂದ ಈ ಮಾರ್ಗದಲ್ಲಿ ಬೆಳಗ್ಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸದ್ಯ ಇದೀಗ ಈ ಮಾರ್ಗದಲ್ಲಿ ಮತ್ತೊಂದು ಹೊಸ ರೈಲು ಸಂಚಾರ ಮಾಡುವುದರಿಂದ ಒಂದು ರೈಲಿನಿಂದ ಇನ್ನೊಂದು ರೈಲಿನ ಅಂತರದ ಓಡಾಡ 19 ನಿಮಿಷಕ್ಕೆ ಇಳಿಕೆಯಾಗಲಿದೆ.ಇದರಿಂದ ಪ್ರಯಾಣಿಕರಿಗೆ ಕೊಂಚ ರಿಲೀಫ್‌ ಸಿಕ್ಕಂತಾಗಿದೆ.

ಹಳದಿ ಮಾರ್ಗದ ಹೊಸ ವೇಳಾಪಟ್ಟಿ

  • ಮೊದಲ ರೈಲು ಸಮಯ – ಸೋಮವಾರದಿಂದ ಶನಿವಾರದವರೆಗೆ ಮೊದಲ ವಾಣಿಜ್ಯ ಸೇವೆಯು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ. (ಸೆಪ್ಟೆಂಬರ್‌ 9 ವರೆಗೂ 6.30 ಕ್ಕೆ ಆರಂಭವಾಗುತ್ತಿತ್ತು).
  • ಭಾನುವಾರದಂದು ಮೊದಲ ರೈಲು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ.
  • ಕೊನೆಯ ರೈಲು ಸಮಯ – ಆ‌ರ್.ವಿ. ರಸ್ತೆಯಿಂದ ರಾತ್ರಿ 11:55 ಕ್ಕೆ, ಬೊಮ್ಮಸಂದ್ರದಿಂದ ರಾತ್ರಿ 10:42 ಕ್ಕೆ ಹೊರಡಲಿದೆ.

5 ನಿಮಿಷಕ್ಕೊಂದು ರೈಲು ಓಡಿಸಲು ಬೇಡಿಕೆ

ಇನ್ನು ಹಳದಿ ಮಾರ್ಗದಲ್ಲಿ ನಿತ್ಯ 50 ರಿಂದ 60 ಸಾವಿರ ಮಂದಿ ಪ್ರಯಾಣ ಮಾಡುತ್ತಾರೆ. ಹೀಗಾಗಿ, ಪ್ರತಿ 5 ಅಥವಾ 10 ನಿಮಿಷಕ್ಕೊಂದು ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಸದ್ಯ ರೈಲುಗಳ ಕೊರತೆ ಇದ್ದು, 2026 ರಲ್ಲಿ ಹೆಚ್ಚಿನ ಸಂಖ್ಯೆಯ ರೈಲುಗಳು ಬರಲಿದ್ದು, ಆಗ ಪ್ರತಿ 10 ನಿಮಿಷಕ್ಕೆ ಒಂದ ರೈಲು ಓಡಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

Shwetha M