OTTಗೆ ಕಾಲಿಟ್ರೂ ನಿಂತಿಲ್ಲ ಸು ಫ್ರಮ್ ಸೋ ಅಬ್ಬರ! – ಥಿಯೇಟರ್ನಲ್ಲೇ ಸಿನಿಮಾ ವೀಕ್ಷಿಸ್ತಿದ್ದಾರೆ ಜನ!

ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ಸಿನಿಪ್ರಿಯರ ಮನಗೆದ್ದಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾ 122.34 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು, ಆದ್ರೂ ಕೂಡ ಈ ಸಿನಿಮಾ ಥಿಯೇಟರ್ನಲ್ಲಿ ಕಲೆಕ್ಷನ್ ಮಾಡೋದನ್ನು ಮುಂದುವರಿಸಿದೆ.
ಇದನ್ನೂ ಓದಿ: ಚಪಾತಿ ತಯಾರಿಸುವಾಗ ಈ ತಪ್ಪು ಮಾಡ್ಬೇಡಿ! – ಒಂದು ತಪ್ಪಿನಿಂದ ಹೊಟ್ಟೆ ಕೆಡುತ್ತೆ!
ಸು ಫ್ರಮ್ ಸೋ ಸಿನಿಮಾ ಜುಲೈ 25ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಒಂದೇ ದಿನ 6 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಉದಾಹರಣೆ ಇದೆ. ಈಗ ಚಿತ್ರ ಸೆಪ್ಟೆಂಬರ್ 9ರಂದು ಒಟಿಟಿಗೆ ಕಾಲಿಟ್ಟಿದೆ. ಈ ಸಿನಿಮಾ ವಿಶ್ವಮಟ್ಟದಕ್ಕು 122.34 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಸಿನಿಮಾದ ಅಂತಿಮ ಕಲೆಕ್ಷನ್ ಎಂದೇ ಹೇಳಬಹುದು. ಈ ಚಿತ್ರದ ಭಾರತದಲ್ಲಿ 107.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ವಿದೇಶದಿಂದ 15 ಕೋಟಿ ರೂಪಾಯಿ ಹರಿದು ಬಂದಿದೆ. ಸುಮಾರು 46 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರದಲ್ಲಿ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಆದ್ರೂ ಕೂಡ ಸು ಫ್ರಮ್ ಸೋ ಸಿನಿಮಾದ ಅಬ್ಬರ ಥಿಯೇಟರ್ನಲ್ಲಿ ನಿಂತಿಲ್ಲ.
ಹೌದು ಸು ಫ್ರಮ್ ಸೋ ಸಿನಿಮಾ ಈಗಲೂ ಥಿಯೇಟರ್ನಲ್ಲಿ ಓಡಾಡುತ್ತಿದೆ. ಯಾಕಂದ್ರೆ ಅನೇಕರಿಗೆ ಸಿನಿಮಾ ಒಟಿಟಿಗೆ ಕಾಲಿಟ್ಟ ವಿಚಾರ ತಿಳಿದಿಲ್ಲದೇ ಇರಬಹುದು. ಹೀಗಾಗಿ, ದುಡ್ಡು ಕೊಟ್ಟು ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ಕೆಲವರು ಈ ಸಿನಿಮಾವನ್ನ ಥಿಯೇಟರ್ನಲ್ಲಿ ನೋಡಿದ್ರೇನೆ ಎಂಜಾಯ್ ಮಾಡೋದಿಕ್ಕೆ ಆಗೋದು ಅಂತ ಚಿತ್ರಮಂದಿರದತ್ತ ಬರುತ್ತಿದ್ದಾರೆ.

ನೋಡಿರಿ

