ಗ್ರ್ಯಾಂಡ್‌ ಮಾಸ್ಟರ್ ಅಭಿಮನ್ಯು ಮಿಶ್ರಾ ಹೊಸ ಇತಿಹಾಸ!- ಹಾಲಿ ಚಾಂಪಿಯನ್ ಡಿ. ಗುಕೇಶ್ ಸೋಲಿಸಿದ ಹದಿನಾರರ ಚೆಸ್ ಚತುರ

ಗ್ರ್ಯಾಂಡ್‌ ಮಾಸ್ಟರ್ ಅಭಿಮನ್ಯು ಮಿಶ್ರಾ ಹೊಸ ಇತಿಹಾಸ!- ಹಾಲಿ ಚಾಂಪಿಯನ್ ಡಿ. ಗುಕೇಶ್ ಸೋಲಿಸಿದ ಹದಿನಾರರ ಚೆಸ್ ಚತುರ

ಹದಿನಾರರ ಚೆಸ್ ಚತುರ ಅಭಿಮನ್ಯು ಮಿಶ್ರಾ ಹೊಸ ಇತಿಹಾಸ ಬರೆದಿದ್ದಾರೆ. ಚೆಸ್ ಆಟದಲ್ಲಿ ಹಾಲಿ ಚಾಂಪಿಯನ್‌ನನ್ನು ಸೋಲಿಸಿದ, ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:IPL 10 ಟೀಂ.. ರಿಲೀಸ್ ಲಿಸ್ಟ್ ರೆಡಿ – 2026ಕ್ಕೆ ಬಿಗ್ ಸ್ಟಾರ್ಸ್ ಗೂ ಗೇಟ್ ಪಾಸ್?

ಚೆಸ್ ದುನಿಯಾದಲ್ಲಿ 2021ರಲ್ಲಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದ್ದ ಪುಟ್ಟ ಪೋರ ಈಗ ಮತ್ತೆ ಅದೇ ರೀತಿ ಇತಿಹಾಸ ಸೃಷ್ಟಿಸಿದ್ದು ಚೆಸ್ ಲೋಕವೇ ಫಿದಾ ಆಗಿದೆ. ಹೌದು. ಭಾರತೀಯ ಮೂಲದ, ಅಮೆರಿಕನ್‌ ಬಾಲಕ ಅಭಿಮನ್ಯು ಮಿಶ್ರಾ ಈಗ ಮತ್ತೊಂದು ಚರಿತ್ರೆ ಸೃಷ್ಟಿಸಿದ್ದಾರೆ. ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ FIDE ಗ್ರ್ಯಾಂಡ್ ಸ್ವಿಸ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ ಪ್ರಸ್ತುತ ವಿಶ್ವ ಚಾಂಪಿಯನ್ ಡಿ ಗುಕೇಶ್ ಅವರನ್ನು ಸೋಲಿಸಿದ್ದಾರೆ 16 ವರ್ಷದ ಅಭಿಮನ್ಯು ಮಿಶ್ರಾ.

ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿರುವ 16 ವರ್ಷದ ಅಭಿಮನ್ಯು ಮಿಶ್ರಾ, 61-ನಡೆಗಳ ಹೋರಾಟದ ನಂತರ ಹಾಲಿ ವಿಶ್ವ ಚಾಂಪಿಯನ್ ಡೊಮ್ಮರಾಜು ಗುಕೇಶ್ ಅವರನ್ನು ಸೋಲಿಸಿದರು. ಗೆಲುವಿನ ನಂತರ ಮಾತನಾಡಿದ ಮಿಶ್ರಾ, “ಟೂರ್ನಮೆಂಟ್ ನಾನು ಊಹಿಸಿದ್ದಕ್ಕಿಂತ ಉತ್ತಮವಾಗಿ ನಡೆಯುತ್ತಿದೆ. ನಾನು ಈ ಫಾರ್ಮ್ ಅನ್ನು ಮುಂದುವರಿಸಿದರೆ ಟೂರ್ನಮೆಂಟ್ ಗೆಲ್ಲುವ ಅವಕಾಶವಿದೆ. ನಾನು ಪ್ರಾಗ್ ವಿರುದ್ಧ ಕೆಲವು ತಪ್ಪುಗಳನ್ನು ಮಾಡಿದೆ. ನಾನು ಈ ಆಟಗಾರರಿಗಿಂತ ಕೀಳು ಎಂದು ನನಗೆ ಎಂದಿಗೂ ಅನಿಸಲಿಲ್ಲ. ನಾನು ಅವರೊಂದಿಗೆ ಸರಿಸಮಾನನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಗೆಲುವನ್ನು ಸಂಭ್ರಮಿಸಿದರು. ಇಷ್ಟೇ ಅಲ್ಲದೇ ಚೆಸ್ ಆಟದಲ್ಲಿ ಅತ್ಯುತ್ತಮ ಆಟಗಾರನನ್ನು ಸೋಲಿಸಿದ್ದು ಜೀವಮಾನದ ಕ್ಷಣವಾಗಿದೆ ಎಂದು 16 ವರ್ಷದ ಮಿಶ್ರಾ ಹೇಳಿದರು. ಫೆಬ್ರವರಿ 5, 2009ರಲ್ಲಿ ಜನಿಸಿದ ಅಭಿಮನ್ಯು ಮಿಶ್ರಾ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ಜೂನ್ 2021 ರಲ್ಲಿ ಚೆಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗುವ ಮೂಲಕ ಸುದ್ದಿಯಾಗಿದ್ದರು. ಅಭಿಮನ್ಯು ಮಿಶ್ರಾ 12 ವರ್ಷದಲ್ಲೇ ಗ್ರ್ಯಾಂಡ್ ಮಾಸ್ಟರ್ ಸಾಧನೆ ಮಾಡಿದ್ದರು.

Sulekha