ಮೈಸೂರು ದಸರಾದಲ್ಲಿ ವೈಭವದ ದೀಪಾಲಂಕಾರ! – ಈ ಬಾರಿ 136 ಕಿಮೀ ರಸ್ತೆ, 118 ವೃತ್ತಗಳಿಗೆ ಲೈಟಿಂಗ್ಸ್‌!

ಮೈಸೂರು ದಸರಾದಲ್ಲಿ ವೈಭವದ ದೀಪಾಲಂಕಾರ! – ಈ ಬಾರಿ 136 ಕಿಮೀ ರಸ್ತೆ, 118 ವೃತ್ತಗಳಿಗೆ ಲೈಟಿಂಗ್ಸ್‌!

ನಾಡಹಬ್ಬ ದಸರಾಗೆ ಕೌಂಟ್‌ಡೌನ್‌ ಶುರುವಾಗಿದೆ. ದಸರಾದಲ್ಲಿ ಪ್ರಮುಖ ಆಕರ್ಷಣೆ ಅಂದ್ರೆ ದೀಪಾಲಂಕಾರ. ದೀಪಾಲಂಕಾರದಲ್ಲಿ ಜಗಮಗಿಸುತ್ತಿರುವ ಅರಮನೆಯನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಕಣ್ಣಿಗೆ ಹಬ್ಬದಂತಿರುತ್ತದೆ. ಇದೀಗ ಮೈಸೂರಿನಲ್ಲಿ ದೀಪಾಲಂಕಾರ ನೋಡಬೇಕು ಅಂದುಕೊಂಡಿರುವವರಿಗೆ ಗುಡ್‌ನ್ಯೂಸ್‌ವೊಂದಿದೆ. ಈ ಬಾರಿ ದಸರಾ ದೀಪಾಲಂಕಾರದ ದಿನವನ್ನು ವಿಸ್ತರಣೆ ಮಾಡಿದೆ.

ಇದನ್ನೂ ಓದಿ:  ನೇಪಾಳದಲ್ಲಿ ಸೋಶಿಯಲ್‌ ಮೀಡಿಯಾ ಬ್ಯಾನ್‌ – ಸರ್ಕಾರದ ವಿರುದ್ಧ ಸಿಡಿದೆದ್ದ ಜನ.. 3 ಮಂದಿ ಸಾವು!

2025 ರ ದಸರಾ ಮಹೊತ್ಸವ ಈ ತಿಂಗಳ ಸೆಪ್ಟೆಂಬರ್ 22 ರಿಂದ ಶುರುವಾಗಿ ಅಕ್ಟೋಬರ್ 2 ರವರೆಗೆ ನಡೆಯಲಿದೆ. ದಸರಾ ಹಿನ್ನಲೆಯಲ್ಲಿ ಕೇವಲ ರಾಜ್ಯವಲ್ಲದೇ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ದಸರಾ ನಂತರವು ಪ್ರವಾಸಿಗರು ಮೈಸೂರಿನ ಕಡೆ ಮುಖ ಮಾಡಲಿ ಎಂದು  ದಸರಾ ಮುಗಿದ ನಂತರವು 15 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಮುಂದುವರಿಯಲಿದೆ.

ದೀಪಾಲಂಕಾರ 15 ದಿನಗಳ ಕಾಲ ಮುಂದುವರೆಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದು ಈ ಕಾರಣದಿಂದ ದಸರಾ ದೀಪಾಲಂಕಾರವನ್ನು ದಸರಾ ಮುಗಿದ ನಂತರವು ಮುಂದುವರೆಸಲು ತೀರ್ಮಾನಿಸಲಾಗಿದೆ.

ಈ ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಬೆಳಕಲಿ ಜಗಮಗಿಸಲಿದೆ. 136 ಕಿ.ಮೀ ರಸ್ತೆ, 118 ವೃತ್ತಗಳಿಗೆ ದೀಪಾಲಂಕಾರ ಮಾಡಲಾಗುತ್ತಿದೆ. ಅಲ್ಲದೆ, ವಿವಿಧೆಡೆ ವರ್ಣರಂಜಿತ ಲೈಟ್​​ಗಳಲ್ಲಿ 60ಕ್ಕೂ ಹೆಚ್ಚು ಪ್ರತಿಕೃತಿಗಳು ಪ್ರವಾಸಿಗರ ಕಣ್ಮನ ಸೆಳೆಯಲಿವೆ.

Shwetha M