80% ಗೆಲುವು.. ಭಾರತಕ್ಕೇ ಏಷ್ಯಾಕಪ್? – PAK, SL, AFG ವೀಕ್ ನೆಸ್ ಏನು?
WC ಬಳಿಕ T-20Iನಲ್ಲಿ ಯಾರು ಬೆಸ್ಟ್?

2024ರ ಜೂನ್ ತಿಂಗಳಿನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಪ್ರತಿಷ್ಠಿತ ಟೂರ್ನಿ ಮುಗಿದು 15 ತಿಂಗಳೇ ಕಳೆದಿವೆ. ಇದೀಗ ಮತ್ತೊಂದು ಹೈವೋಲ್ಟೇಜ್ ಟೂರ್ನಮೆಂಟ್ ಏಷ್ಯಾಕಪ್ ಸೆಪ್ಟೆಂಬರ್ 9ರಿಂದ ಸ್ಟಾರ್ಟ್ ಆಗಲಿದೆ. ಇದೂ ಕೂಟ ಟಿ-20ಐ ಮಾದರಿಯಲ್ಲೇ ನಡೆಯಲಿದೆ. ಸದ್ಯ ಏಷ್ಯಾಕಪ್‌ನಲ್ಲಿ 8 ಟೀಂಗಳು ಭಾಗಿಯಾಗ್ತಿದ್ದು ಟಿ-20 ವಿಶ್ವಕಪ್ ಬಳಿಕ ಅವ್ರ ಪರ್ಫಾಮೆನ್ಸ್ ಹೇಗಿದೆ ಅನ್ನೋ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಇದೆ.
ಇದನ್ನೂ ಓದಿ : UAE ಬೇಟೆಗೆ ಅಭಿ-ಗಿಲ್ ಓಪನರ್ಸ್ – BCCIಗೆ ಸಂಜು & ಜಿತೇಶ್ ಕನ್ಫ್ಯೂಷನ್
ಟಿ-20ಐನಲ್ಲಿ ಜಗತ್ತಿನಲ್ಲೇ ನಂಬರ್ 1 ಟೀಂ ಭಾರತ!
ಟ-20ಐ ರ್ಯಾಂಕಿಂಗ್ನಲ್ಲಿ ಸದ್ಯ ಭಾರತ ನಂಬರ್ 1 ಪ್ಲೇಸ್ನಲ್ಲಿದೆ. ಕಳೆದೊಂದು ವರ್ಷದಿಂದ ಅವ್ರ ಗೆಲುವಿನ ಪರ್ಸೆಂಟೇಜ್ 80 ಪರ್ಸೆಂಟ್ ಇದೆ. ಸೋ ಕಂಪ್ಲೀಟ್ ಡಾಮಿನೇಟ್ ಮಾಡಿದ್ದಾರೆ. ಟಿ20 ವಿಶ್ವಕಪ್ ಗೆದ್ದ ನಂತರ, ಭಾರತ ಆಡಿದ 20 ಟಿ-20ಐ ಮಾದರಿ ಪಂದ್ಯಗಳಲ್ಲಿ 16 ಪಂದ್ಯಗಳನ್ನು ಗೆದ್ದಿದೆ, ಕೇವಲ ಮೂರರಲ್ಲಿ ಸೋತಿದೆ, ಒಂದು ಪಂದ್ಯ ಟೈ ಆಗಿದೆ. ಅಲ್ಲಿಗೆ ಭಾರತದ ಗೆಲುವು-ಸೋಲಿನ ಅನುಪಾತ ಎಲ್ಲಾ ತಂಡಗಳಿಗಿಂತ ಬೆಸ್ಟ್ ಇದೆ. ವಿಶ್ವಕಪ್ ನಂತರ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಒಟ್ಟಾರೆ ಆರು ಶತಕಗಳನ್ನು ಸಿಡಿಸಿದ್ದಾರೆ. ಸ್ಯಾಮ್ಸನ್ ಮೂರು ಶತಕಗಳನ್ನು ಗಳಿಸಿದ್ದಾರೆ. ವರುಣ್ ಚಕ್ರವರ್ತಿ 31 ವಿಕೆಟ್‌ಗಳೊಂದಿಗೆ ಬೌಲರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್ಸ್ ಸಾಲಿಡ್ ಫಾರ್ಮ್ನಲ್ಲಿದ್ದು ಭಾರತದ ಮೊದಲ ಮೂವರು ಬ್ಯಾಟ್ಸ್‌ಮನ್‌ಗಳು ತಲಾ 400+ ರನ್‌ಗಳನ್ನು ದಾಟಿದ್ದಾರೆ. ಬುಮ್ರಾ, ಅರ್ಶ್‌ದೀಪ್, ಹರ್ಷಿತ್ ರಾಣಾ ಮತ್ತು ಸ್ಪಿನ್ನರ್‌ಗಳಾದ ಕುಲದೀಪ್ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಸ್ಟ್ರಾಂಗ್ ಇದ್ದಾರೆ. ವೀಕ್ನೆಸ್ ಏನು ಅಂತಾ ನೋಡೋದಾದ್ರೆ ಕೆಳ ಕ್ರಮಾಂಕದ ಬ್ಯಾಟಿಂಗ್ ದುರ್ಬಲವಾಗಿದೆ. ವಿಶ್ವಕಪ್ ನಂತರ 7 ನೇ ಕ್ರಮಾಂಕದ ನಂತರ ಬ್ಯಾಟರ್ಗಳು ಯಾರೂ ಇನ್ನಿಂಗ್ಸ್‌ನಲ್ಲಿ 25 ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.
ಟಿ-20ಐನಲ್ಲಿ ಹಳ್ಳ ಹಿಡಿದಿದೆ ಪಾಕಿಸ್ತಾನ ಟೀಂ
ಇನ್ನು ಪಾಕಿಸ್ತಾನದ ಕಥೆಯಂತೂ ಡಮ್ಮಿಯಾಗಿದೆ. ಪ್ರಸ್ತುತ ಏಷ್ಯಾಕಪ್ಗೆ ಹೊಸ ನಾಯಕ ಸಲ್ಮಾನ್ ಅಲಿ ಆಘಾ ಅವ್ರನ್ನ ನೇಮಕ ಮಾಡ್ಲಾಗಿದೆ. ಜೂನ್ 2024 ರಿಂದ ಪಾಕಿಸ್ತಾನ ಆಡಿರುವ 24 T20I ಗಳಲ್ಲಿ 11 ರಲ್ಲಿ ಗೆದ್ದಿದೆ, 13 ರಲ್ಲಿ ಸೋತಿದೆ. ಅವರ ಗೆಲುವು-ಸೋಲಿನ ಅನುಪಾತ 0.846 ರಷ್ಟಿದೆ. ಟಾಪ್ ಸ್ಕೋರರ್ಸ್ ನೋಡೋದಾದ್ರೆ ಸೈಮ್ ಅಯೂಬ್ (479 ರನ್), ಸಾಹಿಬ್‌ಜಾದಾ ಫರ್ಹಾನ್ (284), ಮತ್ತು ಮೊಹಮ್ಮದ್ ಹ್ಯಾರಿಸ್ (253, ಒಂದು ಶತಕ ಸೇರಿದಂತೆ) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹ್ಯಾರಿಸ್ ರೌಫ್ ಮತ್ತು ಅಬ್ಬಾಸ್ ಅಫ್ರಿದಿ ತಲಾ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ವೇಗಿಗಳಾಗಿದ್ದಾರೆ. ವೀಕ್ನೆಸ್ ಏನಂದ್ರೆ ಹೊಸ ನಾಯಕನಿಗೆ ದೊಡ್ಡ ಟೂರ್ನಿಗಳಲ್ಲಿ ಅನುಭವದ ಕೊರತೆ ಇದೆ. ಫೀಲ್ಡಿಂಗ್ ಕಳಪೆಯಾಗಿದ್ದು 14 ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಸರಣಿ ಗೆದ್ದಿಲ್ಲ.
ಅಫ್ಘಾನಿಸ್ತಾನಕ್ಕೆ ಸ್ಪಿನ್ ಶಕ್ತಿ ಆಗಿದ್ರೂ ಆಡಿದ್ದು ಬೆರಳೆಣಿಕೆ ಪಂದ್ಯ
2024ರಲ್ಲಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ ನಂತರ, ಅಫ್ಘಾನಿಸ್ತಾನ ಕೇವಲ 5 ಪಂದ್ಯಗಳನ್ನು ಆಡಿದೆ. 3 ರಲ್ಲಿ ಗೆದ್ದಿದೆ ಮತ್ತು 2 ರಲ್ಲಿ ಸೋತಿದೆ. ಅವರ ಗೆಲುವು-ಸೋಲಿನ ಅನುಪಾತ 1.5 ಆಗಿದೆ. ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಅವರಂತಹ ವಿಶ್ವದರ್ಜೆಯ ಸ್ಪಿನ್ ತ್ರಿಮೂರ್ತಿಗಳಿದ್ದಾರೆ. ಅಫ್ಘಾನ್ ಸ್ಪಿನ್ನರ್‌ಗಳು 40 ವಿಕೆಟ್‌ಗಳಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಗುರ್ಬಾಜ್, ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ನಬಿ ಮತ್ತು ರಶೀದ್ ಬ್ಯಾಟಿಂಗ್ನಲ್ಲೂ ಸ್ಟ್ರೆಂತ್ ಆಗ್ತಾರೆ.ವೀಕ್ನೆಸ್ ಅಂತಾ ನೋಡೋದಾದ್ರೆ 15 ತಿಂಗಳಲ್ಲಿ ಕೇವಲ ಐದು ಪಂದ್ಯಗಳನ್ನ ಆಡಿರೋದ್ರಿಂದ ಅಭ್ಯಾಸ ಕಡಿಮೆ ಆಗಿದೆ.
ಬಿಗ್ ಪ್ಲೇಯರ್ ಗಳಿದ್ರೂ ಶ್ರೀಲಂಕಾ ಕಳಪೆ ಫಲಿತಾಂಶ
ಇನ್ನು ಏಷ್ಯಾಕಪ್‌ನಲ್ಲಿ ಭಾರತದ ನಂತ್ರ ಅತೀ ಹೆಚ್ಚು ಬಾರಿ ಟ್ರೋಫಿಗಳನ್ನ ಗೆದ್ದಿರೋ ತಂಡ ಶ್ರೀಲಂಕಾ. 6 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಆದ್ರೆ ಇತ್ತೀಚಿನ ಪ್ರದರ್ಶನ ಕಳಪೆಯಾಗಿದೆ. ಜೂನ್ 2024 ರಿಂದ ಅಂದ್ರೆ ಟಿ-20 ವಿಶ್ವಕಪ್ ಮುಗಿದ ಬಳಿಕ 14 ಟಿ20 ಪಂದ್ಯಗಳನ್ನು ಆಡಿದ್ದಾರೆ. 5 ರಲ್ಲಿ ಗೆಲುವು, 8 ರಲ್ಲಿ ಸೋಲು ಮತ್ತು ಒಂದು ಪಂದ್ಯ ಟೈ ಆಗಿದೆ. ಹಾಗೆ ನೋಡಿದ್ರೆ ಇನ್-ಫಾರ್ಮ್ ಬ್ಯಾಟ್ಸ್‌ಮನ್‌ಗಳ ದಂಡೇ ತಂಡದಲ್ಲಿದೆ. ನಿಸ್ಸಂಕ (573 ರನ್‌ಗಳು), ಪೆರೆರಾ (403), ಮೆಂಡಿಸ್ (378) ರನ್ ಕಲೆ ಹಾಕಿದ್ದಾರೆ. ಆಲ್‌ರೌಂಡರ್ ವನಿಂದು ಹಸರಂಗ 21 ವಿಕೆಟ್‌ಗಳನ್ನ ಉರುಳಿಸಿದ್ದಾರೆ. ಆದ್ರೆ ಬೆಸ್ಟ್ ಪರ್ಫಾಮೆನ್ಸ್ ನೀಡಿಯೂ ಅದನ್ನ ಗೆಲುವಾಗಿ ಕನ್ವರ್ಟ್ ಮಾಡುವಲ್ಲಿ ಸೋತಿದ್ದಾರೆ. 14 ಪಂದ್ಯಗಳಲ್ಲಿ ಕೇವಲ 5 ಗೆಲುವುಗಳನ್ನ ಕಂಡಿರೋದೇ ಇದಕ್ಕೆ ಬೆಸ್ಟ್ ಎಕ್ಸಾಂಪಲ್.
ಆರಕ್ಕೇರದ ಮೂರಕ್ಕಿಳಿಯದ ತಂಡ ಬಾಂಗ್ಲಾದೇಶ
ಇನ್ನು ಬಾಂಗ್ಲಾದೇಶದ ಕತೆ ಸ್ವಲ್ಪ ಡಿಫ್ರೆಂಟ್ ಆಗಿದೆ. ಜೂನ್ 2024 ರಿಂದ ಬಾಂಗ್ಲಾದೇಶ ರಿಸಲ್ಟ್ನಲ್ಲಿ 50% ದಾಖಲೆಯನ್ನು ಹೊಂದಿದೆ. 20 ಪಂದ್ಯಗಳಿಂದ 10 ಗೆಲುವುಗಳು ಮತ್ತು 10 ಸೋಲುಗಳನ್ನ ಕಂಡಿದೆ. 300+ ರನ್‌ಗಳೊಂದಿಗೆ ನಾಲ್ವರು ಬ್ಯಾಟ್ಸ್‌ಮನ್‌ಗಳಿದ್ದಾರೆ. ತಾಂಜಿದ್ ಹಸನ್ (425), ಲಿಟ್ಟನ್ ದಾಸ್ (425), ಪರ್ವೇಜ್ ಹಸನ್ (386), ಜಾಕಿರ್ ಅಲಿ (326) ರನ್ ಕಲೆ ಹಾಕಿದ್ದಾರೆ. ಬೌಲರ್‌ಗಳು ಟೋಟಲ್ಲಾಗಿ ಕಳೆದ 15 ತಿಂಗಳಲ್ಲಿ 140 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪೈಕಿ ತಸ್ಕಿನ್ ಅಹ್ಮದ್ 22 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಬಾಂಗ್ಲಾದ ವೀಕ್ನೆಸ್ ಗಮನಿಸಿದ್ರೆ ರಾಜಕೀಯ ಅಸ್ಥಿರತೆಯಿಂದಾಗಿ ತಂಡವು ಪರಿವರ್ತನೆಯ ಹಂತದಲ್ಲಿದೆ. ಶಕೀಬ್ ಅಲ್ ಹಸನ್ ಮತ್ತು ನಜ್ಮುಲ್ ಹೊಸೈನ್ ಶಾಂತೊ ಅವರಂತಹ ಪ್ರಮುಖ ಹೆಸರುಗಳನ್ನು ಕೈಬಿಡಲಾಗಿದೆ.
ತಿಮಿಂಗಿಲಗಳ ಮುಂದೆ ಡಮ್ಮಿಯಾಗಿದೆ ಯುಎಇ ಟೀಂ
ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಪರ್ಫಾಮೆನ್ಸ್ ಒಂದ್ ರೇಂಜ್ಗೆ ಚೆನ್ನಾಗೇ ಇದೆ. ಅಂದ್ರೆ ಟಿ-20 ವಿಶ್ವಕಪ್ ನಂತ್ರ 27 ಟಿ20ಐಗಳಲ್ಲಿ 20ರಲ್ಲಿ ಗೆಲುವು ಸಾಧಿಸಿದ್ದಾರೆ. ಎಲ್ಲವೂ ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ. ಮುಹಮ್ಮದ್ ವಸೀಮ್ (882) ರನ್ ಗಳಿಸಿದ್ರೆ 500+ ರನ್ ಗಳಿಸಿದ ನಾಲ್ವರು ಬ್ಯಾಟ್ಸ್‌ಮನ್‌ಗಳಿದ್ದಾರೆ. ಮುಹಮ್ಮದ್ ಜವಾದುಲ್ಲಾ (33) ಸೇರಿದಂತೆ 20+ ವಿಕೆಟ್‌ಗಳನ್ನು ಪಡೆದ ಮೂವರು ಬೌಲರ್‌ಗಳು ಟೀಮ್ನಲ್ಲಿದ್ದಾರೆ. ತಂಡದ ವೀಕ್ನೆಸ್ ಅಂದ್ರೆ ಪ್ರಮುಖ ಟೂರ್ನಿಗಳಳಲ್ಲೇ ಎಡವುತ್ತಾರೆ. ಏಷ್ಯಾಕಪ್‌ನಲ್ಲಿ ಗುಂಪು ಹಂತವನ್ನು ಮೀರಿ ಮುಂದಕ್ಕೆ ಹೋಗಿದ್ದೇ ಇಲ್ಲ.
ದುರ್ಬಲ ತಂಡಗಳ ವಿರುದ್ಧವಷ್ಟೇ ಹಾಂಗ್ ಕಾಂಗ್ ಅಬ್ಬರ
ಇನ್ನು ವಿಶ್ವಕ್ರಿಕೆಟ್ನಲ್ಲಿ ಹತ್ತರಲ್ಲಿ ಹನ್ನೊಂದು ಅನ್ನುವಂತಿರೋ ತಂಡ ಹಾಂಗ್ಕಾಂಗ್. ಈ ತಂಡ ವಿಶ್ವಕಪ್ ನಂತರ 27 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. 14ರಲ್ಲಿ ಗೆಲುವು ಸಾಧಿಸಿದೆ. ಗೆಲುವು-ಸೋಲಿನ ಅನುಪಾತ 1.4 ಇದೆ. ಟೋಟಲ್ಲಾಗಿ ಎಲ್ಲಾ ಬ್ಯಾಟ್ಸ್ಮನ್ ಗಳು 3,524 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದ್ರಲ್ಲಿ 2 ಶತಕಗಳು, 15 ಅರ್ಧಶತಕಗಳು ಸೇರಿವೆ. ಸ್ಪಿನ್ನರ್‌ಗಳಾದ ಯಾಸಿಮ್ ಮುರ್ತಾಜಾ (40 ವಿಕೆಟ್‌ಗಳು) ಮತ್ತು ಎಹ್ಸಾನ್ ಖಾನ್ (36) ವಿಕೆಟ್ ತೆಗೆದಿದ್ದಯ ಬೌಲಿಂಗ್‌ನಲ್ಲಿ ಪ್ರಮುಖ ಪ್ಲೇಯರ್ಸ್ ಆಗಿದ್ದಾರೆ. ಈ ಟೀಮ್ನ ವೀಕ್ನೆಸ್ ಅಂದ್ರೆ ದುರ್ಬಲ ತಂಡಗಳ ವಿರುದ್ಧ ಹೆಚ್ಚಾಗಿ ಯಶಸ್ಸು ಸಾಧಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಎಂದಿಗೂ ಗುಂಪು ಹಂತವನ್ನು ಮೀರಿಲ್ಲ.
ಚೊಚ್ಚಲ ಬಾರಿಗೆ ಏಷ್ಯಾಕಪ್ ಗೆ ಕಾಲಿಟ್ಟಿದೆ ಓಮನ್ ಟೀಂ!
ಇನ್ನು ಇದೇ ಮೊದಲ ಬಾರಿಗೆ ಏಷ್ಯಾಕಪ್ಗೆ ಕಾಲಿಟ್ಟಿರೋ ಓಮನ್ ಟೀಂ ಟಿ-20 ವಿಶ್ವಕಪ್ ಬಳಿಕ 15 ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಗೆದ್ದಿದೆ. ತಂಡದ ಪರ ಜತಿಂದರ್ ಸಿಂಗ್ 301 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ್ದಾರೆ; ಶಕೀಲ್ ಅಹ್ಮದ್ 15 ವಿಕೆಟ್ ಪಡೆದಿದ್ದಾರೆ. ವೀಕ್ನೆಸ್ ಏನಂದ್ರೆ ಅಗ್ರ ತಂಡಗಳ ವಿರುದ್ಧ ಪರ್ಫಾಮೆನ್ಸ್ ಕೆಟ್ಟದಾಗಿದೆ. ಸಣ್ಣ ತಂಡಗಳ ವಿರುದ್ಧವಷ್ಟೇ ಗೆಲುವು ಸಾಧಿಸಿದ್ದಾರೆ.

ನೋಡಿರಿ

