ಕ್ರಿಕೆಟ್ ಫ್ಯಾನ್ಸ್‌ಗೆ ಹಬ್ಬದೂಟ – ಇಂದಿನಿಂದ ಯುಎಇ ನಲ್ಲಿ ಟಿ20 ಏಷ್ಯಾಕಪ್ 2025 ಟೂರ್ನಿ ಶುರು

ಕ್ರಿಕೆಟ್ ಫ್ಯಾನ್ಸ್‌ಗೆ ಹಬ್ಬದೂಟ – ಇಂದಿನಿಂದ ಯುಎಇ ನಲ್ಲಿ ಟಿ20 ಏಷ್ಯಾಕಪ್ 2025 ಟೂರ್ನಿ ಶುರು

ಕ್ರಿಕೆಟ್‌ ಅಭಿಮಾನಿಳಿಗೆ ಕಳೆದ ಕೆಲ ದಿನಗಳಿಂದ ಯಾವುದೇ ಪಂದ್ಯಗಳೂ ಇಲ್ಲದೇ ಬೇಸರದಿಂದ ಕುಳಿತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಹಬ್ಬದೂಟ. ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿ ಬಳಿಕ ಒಂದು ಲಾಂಗ್‌ ಗ್ಯಾಪ್‌ ಬಳಿಕ ಮತ್ತೆ ಭಾರತ ತಂಡ ಸಹ ದೊಡ್ಡ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ. ಹೌದು, ಇಂದಿನಿಂದ ಯುಎಇ ನಲ್ಲಿ ಟಿ20 ಏಷ್ಯಾಕಪ್‌ 2025 ಟೂರ್ನಿ ಆರಂಭವಾಗಲಿದೆ. ಭಾರತ ತಂಡ ನಾಳೆ  ತನ್ನ ಮೊದಲ ಪಂದ್ಯವನ್ನಾಡಲಿದೆ. ಬಳಿಕ ಸೆ.14ರಂದು ಬದ್ಧ ಎದುರಾಳಿಯಾದ ಪಾಕ್‌  ವಿರುದ್ಧ ಸೆಣಸಾಡಲಿದೆ.

8 ತಂಡಗಳ ನಡುವಣ ಈ  ಟೂರ್ನಿಯು  ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್​ನಲ್ಲಿರುವ ತಂಡಗಳು ತಲಾ ಒಂದೊಂದು ಬಾರಿ ಮುಖಾಮುಖಿಯಾಗಲಿದೆ. ಇದಾದ ಬಳಿಕ ಸೂಪರ್-4 ಹಂತದ ಮ್ಯಾಚ್​ಗಳು ಶುರುವಾಗಲಿದೆ. ಇತ್ತ ಮೊದಲ ಸುತ್ತಿಗಾಗಿ 8 ತಂಡಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಈ ಗ್ರೂಪ್​ಗಳಲ್ಲಿರುವ ತಂಡಗಳ ಪಟ್ಟಿ ಈ ಕೆಳಗಿನಂತಿದೆ…

  • ಗ್ರೂಪ್ A
  • ಭಾರತ,
  • ಪಾಕಿಸ್ತಾನ್
  • ಒಮಾನ್
  • ಯುಎಇ
  • ಗ್ರೂಪ್ B
  • ಬಾಂಗ್ಲಾದೇಶ್
  • ಶ್ರೀಲಂಕಾ
  • ಅಫ್ಘಾನಿಸ್ತಾನ್
  • ಹಾಂಗ್​ ಕಾಂಗ್

ಇಲ್ಲಿ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ತಂಡಗಳು ಇವೆ. ಹೀಗಾಗಿ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್, ಯುಎಇ ಹಾಗೂ ಒಮಾನ್ ತಂಡಗಳನ್ನು ಮಾತ್ರ ಎದುರಿಸಲಿದೆ. ಇಲ್ಲಿ ಎರಡೂ ಗ್ರೂಪ್​ಗಳಿಗೂ ವಿಭಿನ್ನ ಅಂಕ ಪಟ್ಟಿ ಇರಲಿದ್ದು, ಈ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಸೂಪರ್-4 ಹಂತಕ್ಕೆ ಅರ್ಹತೆ ಪಡೆಯಲಿದೆ.

ಮೊದಲ ಸುತ್ತಿನ ಎರಡು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ 4 ಟೀಮ್​ಗಳು ಮಾತ್ರ ದ್ಚಿತೀಯ ಸುತ್ತಿಗೆ ಪ್ರವೇಶಿಸುತ್ತದೆ. ಈ ಹಂತದಲ್ಲಿ ಯಾವುದೇ ಗ್ರೂಪ್​ಗಳಿರುವುದಿಲ್ಲ. ಅಂದರೆ 4 ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ದ್ವಿತೀಯ ಸುತ್ತಿನ ಬಳಿಕ ಯಾವುದೇ ಸೆಮಿಫೈನಲ್ ಪಂದ್ಯ ಇರುವುದಿಲ್ಲ. ಅಂದರೆ ಸೂಪರ್-4 ಹಂತದಲ್ಲಿ ಒಂದು ತಂಡವು ಮೂರು ಮ್ಯಾಚ್​ಗಳನ್ನು ಆಡಲಿದೆ. ಇಲ್ಲಿ ಕೂಡ ಅಂಕ ಪಟ್ಟಿ ಇರಲಿದ್ದು, ಈ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್​ ಆಡಲಿದೆ.

Kishor KV