ಕಾರ್‌ ಪಾರ್ಕಿಂಗ್‌ ಮಾಡಿ ನಿದ್ದೆಗೆ ಜಾರಿದ ವ್ಯಕ್ತಿ! –  ಚಾಲಕನನ್ನ ಎಬ್ಬಿಸಲು ಪೊಲೀಸರೇ ಬರಬೇಕಾಯ್ತು!

ಕಾರ್‌ ಪಾರ್ಕಿಂಗ್‌ ಮಾಡಿ ನಿದ್ದೆಗೆ ಜಾರಿದ ವ್ಯಕ್ತಿ! –  ಚಾಲಕನನ್ನ ಎಬ್ಬಿಸಲು ಪೊಲೀಸರೇ ಬರಬೇಕಾಯ್ತು!

ಡ್ರೈವಿಂಗ್‌ ವೇಳೆ ಕೆಲವರಿಗೆ ನಿದ್ದೆ ಬರೋದು ಕಾಮನ್..‌ ಹೀಗಾಗಿ ಕಾರ್‌ ನ ರಸ್ತೆ ಬದಿಯಲ್ಲಿ ಪಾರ್ಕ್‌ ಮಾಡಿ, ನಿದ್ರೆಗೆ ಜಾರುತ್ತಾರೆ. ಸ್ಪಲ್ಪ ಸಮಯದ ಬಳಿಕ ಎದ್ದು ಮತ್ತೆ ಎದ್ದು, ಡ್ರೈವಿಂಗ್‌ ಶುರುಮಾಡ್ತಾರೆ. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ ತನ್ನ ಕಚೇರಿ ಎದುರು ಕಾರು ನಿಲ್ಲಿಸಿ, ನಿದ್ದೆಗೆ ಜಾರಿದ್ದಾನೆ.. ಆದ್ರೆ ಆಮೇಲೆ ಆಗಿದ್ದೇ ಬೇರೆ!

ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಘಾಟಿ ಹೀನಾಯ ಕಲೆಕ್ಷನ್ – ಪ್ರಚಾರಕ್ಕೆ ಬರದೇ ಸೋಲಿಗೆ ಕಾರಣರಾದ್ರಾ ಅನುಷ್ಕಾ?

ಹೌದು, ಮಧ್ಯಪ್ರದೇಶದ ಬುರ್ಹಾನ್​​ಪುರದಲ್ಲಿಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಆಫೀಸ್‌ ಎದುರು ಕಾರು ನಿಲ್ಲಿಸಿ ನಿದ್ದೆ ಮಾಡಿದ್ದಾನೆ. ಇದ್ರಿಂದಾಗಿ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿದೆ. ಯಾರು ಎಷ್ಟೇ ಹಾರ್ನ್​ ಮಾಡಿದರೂ, ಕರೆದರೂ ಅವರಿಗೆ ಎಚ್ಚರವಾಗದ ಕಾರಣ ಕೊನೆಗೆ ಬಳಿಕ ಜನ ಕಾರಿನ ಕಿಟಕಿ ಗಾಜು ಒಡೆದು ಎಬ್ಬಿಸಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಕಾರು ಚಾಲಕ ಮಧ್ಯಾಹ್ನ 3 ಗಂಟೆ ವೇಳೆಗೆ ತನ್ನ ಆಫೀಸ್‌ ಮುಂದೆ ಕಾರು ಪಾರ್ಕ್‌ ಮಾಡಿದ್ದಾರೆ. ಬಳಿಕ ನಿದ್ದೆಗೆ ಜಾರಿದ್ದಾರೆ. ಆದ್ರೆ ಕಾರನ್ನ ರಸ್ತೆ ಬದಿ ನಿಲ್ಲಿಸದೆ ರಸ್ತೆಯ ಮೇಲೆ ಪಾರ್ಕಿಂಗ್‌ ಮಾಡಿದ್ದಾರೆ. ಇದ್ರಿಂದಾಗಿ ವಾಹನ ಹೋಗಲು ಅಡಚಣೆಯಾಗಿದೆ. ಇದ್ರಿಂದಾಗಿ  ಸಂಚಾರ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಪ್ರಯಾಣಿಕರು ಮತ್ತು ಸ್ಥಳೀಯರು ಪದೇ ಪದೇ ವಿಂಡೋ ಬಡಿದು ಅವರನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಆ ವ್ಯಕ್ತಿ ಎಚ್ಚರಗೊಳ್ಳಲಿಲ್ಲ. ಬಳಿಕ   ಶಿಕಾರಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸ್ಥಳೀಯರೊಂದಿಗೆ ಸೇರಿ ಸುಮಾರು ಒಂದು ಗಂಟೆಗಳ ಕಾಲ ಚಾಲಕನನ್ನು ಎಚ್ಚರಗೊಳಿಸಲು ಪ್ರಯತ್ನಿಸಿದರು. ಹಲವಾರು ವಿಫಲ ಪ್ರಯತ್ನಗಳ ನಂತರ, ಅವರು ಕಾರಿನ ಹಿಂಭಾಗದ ಗಾಜನ್ನು ಒಡೆದು ಎಚ್ಚರಗೊಳಿಸುವಲ್ಲಿ ಯಶಸ್ವಿಯಾದರು.

ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಚಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಒಂದು ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿ, ಪ್ರದೇಶದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾದ ನೂರಾರು ಪ್ರಯಾಣಿಕರಿಗೆ ತೊಂದರೆಯಾಯಿತು. ಕೆಲವರು ಚಾಲಕನ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಇಂತಹ ಘಟನೆಗಳು ಹೆಚ್ಚಿನ ದಟ್ಟಣೆಯ ರಸ್ತೆಯಲ್ಲಿ ಅಪಘಾತಗಳಿಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ.

Shwetha M