ಅನುಷ್ಕಾ ಶೆಟ್ಟಿ ಘಾಟಿ ಹೀನಾಯ ಕಲೆಕ್ಷನ್ – ಪ್ರಚಾರಕ್ಕೆ ಬರದೇ ಸೋಲಿಗೆ ಕಾರಣರಾದ್ರಾ ಅನುಷ್ಕಾ?

ಅನುಷ್ಕಾ ಶೆಟ್ಟಿ ಘಾಟಿ ಹೀನಾಯ ಕಲೆಕ್ಷನ್ – ಪ್ರಚಾರಕ್ಕೆ ಬರದೇ ಸೋಲಿಗೆ ಕಾರಣರಾದ್ರಾ ಅನುಷ್ಕಾ?

ಬಹುದಿನಗಳ ನಂತರ ಅನುಷ್ಕಾ ಶೆಟ್ಟಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅದು ಕೂಡಾ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅನುಷ್ಕಾ ಇಡೀ ಚಿತ್ರವನ್ನೇ ಆವರಿಸಿಕೊಂಡಿದ್ದಾರೆ. ‘ಘಾಟಿ’ ಸಿನಿಮಾ ಮೂಲಕ ತೆರೆ ಮೇಲೆ ಬಂದ ಅನುಷ್ಕಾ ಶೆಟ್ಟಿ ಇದೀಗ ತನ್ನ ಸಿನಿಮಾ ಸೋಲಿಗೆ ತಾವೇ ಕಾರಣರಾಗಿದ್ದಾರೆ ಎಂಬ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ರಶ್ಮಿಕಾ ಮಂದಣ್ಣ? ಕೈಯಲ್ಲಿರೋ ಉಂಗುರ ಯಾವುದು?

ಘಾಟಿ ಸಿನಿಮಾ ಬಿಡುಗಡೆಯಾದ ನಂತರ ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಗಿದೆ. ಒಂದು ಸಿನಿಮಾ ಗೆಲ್ಲಬೇಕು ಎಂದರೆ ಅದಕ್ಕೆ ಪ್ರಚಾರ ತುಂಬಾನೇ ಮುಖ್ಯ. ಸಿನಿಮಾ ಪ್ರಚಾರ ಮಾಡಲು ನಾಯಕ-ನಾಯಕಿ ಬಂದಿಲ್ಲ ಎಂದರೆ ಅದು ಚಿತ್ರಕ್ಕೆ ದೊಡ್ಡ ಹಿನ್ನಡೆ ಎಂದೇ ಹೇಳಬಹುದು. ‘ಘಾಟಿ’ ಸಿನಿಮಾ ಚಿತ್ರಕ್ಕೂ ಈಗ ಅದೇ ಆಗಿದೆ. ಅನುಷ್ಕಾ ಶೆಟ್ಟಿ ಈ ಸಿನಿಮಾದಲ್ಲಿ ಲೀಡ್ ರೋಲ್ ಇದೆ.

ಆದರೆ, ಅನುಷ್ಕಾ ಶೆಟ್ಟಿ ಅವರು ಮೊದಲಿನ ಚಾರ್ಮ್ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ. ‘ಘಾಟಿ’ ಸಿನಿಮಾ ಸೆಪ್ಟೆಂಬರ್ 5ರಂದು ರಿಲೀಸ್ ಆಗಿದೆ. ಸಿನಿಮಾ ಮೊದಲ ದಿನ 2 ಕೋಟಿ ರೂಪಾಯಿ ಗಳಿಕೆ ಮಾಡಿತು. ಶನಿವಾರ 1.74 ಕೋಟಿ ರೂಪಾಯಿ ಹಾಗೂ ಭಾನುವಾರ 1.15 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 4.89 ಕೋಟಿ ರೂಪಾಯಿ ಆಗಿದೆ. ಸಿನಿಮಾದ ಕಲೆಕ್ಷನ್ ಏರಿಕೆ ಕಾಣುವ ಬದಲು ಇಳಿಕೆ ಕಂಡಿದೆ. ‘ಘಾಟಿ’ ಸಿನಿಮಾಗೆ ಬುಕ್​ ಮೈ ಶೋನಲ್ಲಿ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಚಿತ್ರಕ್ಕೆ ಈವರೆಗೆ (ಸೆಪ್ಟೆಂಬರ್ 8 ಮಧ್ಯಾಹ್ನ 12.30) 4.4 ಸಾವಿರ ಜನರು ವೋಟ್ ಮಾಡಿದ್ದು, 8.3 ರೇಟಿಂಗ್ ಸಿಕ್ಕಿದೆ. ಆದರೂ, ‘ಘಾಟಿ’ ಸಿನಿಮಾ ವೀಕ್ಷಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿಲ್ಲ. ಇದಕ್ಕೆ ಅನುಷ್ಕಾ ಶೆಟ್ಟಿ ನೇರ ಕಾರಣ ಎಂದು ಅನೇಕರು ಹೇಳಿದ್ದಾರೆ. ‘ಬಾಹುಬಲಿ’, ‘ಭಾಗಮತಿ’ ಸಿನಿಮಾಗಳ ರಿಲೀಸ್ ಸಂದರ್ಭದಲ್ಲಿ ಅನುಷ್ಕಾ ಶೆಟ್ಟಿ ಅವರು ಸಾಕಷ್ಟು ಪ್ರಚಾರ ಮಾಡಿದ್ದರು. ಆದರೆ, ‘ಘಾಟಿ’ ಸಿನಿಮಾ ಪ್ರಚಾರಕ್ಕೆ ಅವರು ಬರಲೇ ಇಲ್ಲ. ಇದೇ ಚಿತ್ರದ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.

Sulekha