ಮಲ್ಲಿಗೆ ಮುಡಿದ ಕನ್ನಡದ ನಟಿಗೆ 1.14 ಲಕ್ಷ ದಂಡ! – ಹೊಸ ರೂಲ್ಸ್ ಗೆ ಬೆಚ್ಚಿಬಿದ್ದ ಬ್ಯೂಟಿ!

ಸೀರೆಯುಟ್ಟು, ಹಣೆಗೆ ಬೊಟ್ಟು, ಮಲ್ಲಿಗೆ ಮುಡಿದ್ರೆ ಹೆಣ್ಣುಮಕ್ಕಳು ಲಕ್ಷಣವಾಗಿ ಕಾಣಿಸುತ್ತಾರೆ. ಆದ್ರೆ ಇದೀಗ ಮಲ್ಲಿಗೆ ಮುಡಿದು ಏರ್ಪೋರ್ಟ್ಗೆ ಬಂದ ನಟಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ: J&Kನಲ್ಲಿ ಭಯೋತ್ಪಾದಕರು & ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ – ಓರ್ವ ಉ*ಗ್ರ ಉಡೀಸ್
ಕೇರಳದ ಕೊಚ್ಚಿಯಿಂದ ಕನ್ನಡದ ‘ಗಜ’ ಖ್ಯಾತಿಯ ನಟಿ ನವ್ಯಾ ನಾಯರ್ ಓಣಂ ಹಬ್ಬಕ್ಕೆಂದು ಆಸ್ಟ್ರೇಲಿಯಾಗೆ ತೆರಳಿದ್ದರು. ಈ ವೇಳೆ ವಿಮಾನ ಹತ್ತುವ ಮುನ್ನ ಆಕೆಯ ತಂದೆ ಮಲ್ಲಿಗೆ ಹೂವನ್ನು ತಂದುಕೊಟ್ಟಿದ್ದರು. ಹೀಗಾಗಿ ಅವರು ಹೂವನ್ನು ಒಂದು ಬ್ಯಾಗ್ನಲ್ಲಿ ಇಟ್ಟುಕೊಂಡು ಮೆಲ್ಬೋರ್ನ್ನಲ್ಲಿ ಇಳಿದಿದ್ದರು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು 1.14 ಲಕ್ಷ ರೂ. ದಂಡವನ್ನು ವಿಧಿಸಿದ್ದಾರೆ ಎಂದು ನಟಿ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ಇದೊಂದು ಅನುಭವ. ಈ ರೀತಿಯ ಅನುಭವಗಳು ಹೊಸದನ್ನು ಕಲಿಸುತ್ತವೆ. ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲ ಮಾಹಿತಿ ನೀಡಬೇಕು ಎಂದು ಬರೆದುಕೊಂಡಿದ್ದಾರೆ.

ನೋಡಿರಿ

