ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ಕಟ್..! – ಈ ಕೃತ್ಯದ ಹಿಂದೆ ಉಗ್ರರ ಕೈವಾಡ?

ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ಕಟ್..! – ಈ ಕೃತ್ಯದ ಹಿಂದೆ ಉಗ್ರರ ಕೈವಾಡ?

ಭಾರತ, ಏಷ್ಯಾ, ಪಾಕಿಸ್ತಾನ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಇಂಟರ್ನೆಟ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಕೆಂಪು ಸಮುದ್ರದ ಆಳದಲ್ಲಿರುವ ಫೈಬರ್‌ ಕೇಬಲ್‌ ಕಟ್‌ ಆಗಿದ್ದು, ವಿಶ್ವದಾದ್ಯಂತ ಇಂಟರ್‌ನೆಟ್‌ ಬಳಕೆಯಲ್ಲಿ ಭಾರಿ ಸಮಸ್ಯೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ – ಬೂದಿ ಮುಚ್ಚಿದ ಕೆಂಡದಂತಾದ ಮಂಡ್ಯ

ಕೆಂಪು ಸಮುದ್ರದ ಮೂಲಕ ಫೈಬರ್‌ ಕೇಬಲ್‌ ಹಾದು ಹೋಗುತ್ತದೆ. ಆದ್ರೀಗ ಈ ಕೇಬಲ್‌ ಕಟ್‌ ಆಗಿದ್ದು, ಭಾರತದ ಹಲವೆಡೆ ಇಂಟರ್ನೆಟ್ ಸೇವೆ ನಿಧಾನಗೊಂಡಿದೆ. ಹಲವರು ಇಂಟರ್ನೆಟ್ ಇಲ್ಲದೆ ಪರದಾಡಿದ್ದಾರೆ. ಮಧ್ಯಪ್ರಾಚ್ಯದ ಮೈಕ್ರೋಸಾಫ್ಟ್ ಕಚೇರಿಗಳು ಇಂಟರ್ನೆಟ್ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದೆ. ರೆಡ್ ಸೀನಲ್ಲಿರುವ ಕೇಬಲ್ ಸಮಸ್ಯೆಯಿಂದ ಇಂಟರ್ನೆಟ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಸಮಸ್ಯೆ ಹೆಚ್ಚಾಗುತ್ತಿದೆ. ಸೌದಿ ಅರೇಬಿಯಾದ ಜೆಡ್ಡಾ ಸಮೀಪ SMW4 ಮತ್ತು IMEWE ಕೇಬಲ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ನೆಟ್‌ಬ್ಲಾಕ್ಸ್ ಹೇಳಿದೆ.

ಇನ್ನು ಫೈಬರ್‌ ಕೇಬಲ್‌ಗಳು ತುಂಡಾಗಿದ್ದು ಹೇಗೆ ಎನ್ನುವುದಕ್ಕೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ಈ ಹಿಂದೆ ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಮಾಡುತ್ತಿರುವ ದಾಳಿಯನ್ನು ನಿಲ್ಲಿಸದೇ ಇದ್ದರೆ ಸಮುದ್ರದಲ್ಲಿ ಹೋಗಿರುವ ಕೇಬಲ್‌ ಕತ್ತರಿಸುತ್ತೇವೆ ಎಂದು ಯೆಮನ್‌ನ ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದರು.ಈ ಕೃತ್ಯದಲ್ಲಿ ಹೌತಿ ಬಂಡುಕೋರರ ಕೈವಾಡ ಇರುವ ಶಂಕೆ ಈಗ ವ್ಯಕ್ತವಾಗುತ್ತಿದೆ.

Shwetha M