ಪುಷ್ಪ 3  ತೆರೆಗೆ ಬರೋದು ಫಿಕ್ಸ್!‌ – ಕಡೆಗೂ ಗುಡ್‌ನ್ಯೂಸ್‌ ಕೊಟ್ಟ ಅಲ್ಲು ಅರ್ಜುನ್!‌

ಪುಷ್ಪ 3  ತೆರೆಗೆ ಬರೋದು ಫಿಕ್ಸ್!‌ – ಕಡೆಗೂ ಗುಡ್‌ನ್ಯೂಸ್‌ ಕೊಟ್ಟ ಅಲ್ಲು ಅರ್ಜುನ್!‌

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸರಣಿಯ ಎರಡು ಚಿತ್ರಗಳು ಭಾರೀ ಯಶಸ್ಸು ಕಂಡಿವೆ. ಪುಪ್ಪ: ದಿ ರೈಸ್ ದೇಶಾದ್ಯಂತ ಸಂಚಲನ ಮೂಡಿಸಿದರೆ, ಪುಷ್ಪ 2: ದಿ ರೂಲ್  ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿತ್ತು. ಈ ನಡುವೆ, ಪುಷ್ಪ 3 ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಈ ವಿಷಯದ ಕುರಿತು ಈ ಸಿನಿಮಾದ ಮುಂದುವರೆದ ಭಾಗವನ್ನು ಮಾಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಪುಷ್ಪ 3 ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ. ಅಲ್ಲು ಅರ್ಜುನ್‌ ಫ್ಯಾನ್ಸ್‌ ಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಪಿತೃಪಕ್ಷ ಆರಂಭ – ‘ಮಹಾಲಯ’ ಅಂದ್ರೆ ಏನು? ಹೇಗೆ ಮಾಡಬೇಕು?

ಅಲ್ಲು ಅರ್ಜುನ್‌ ನಟನೆಯ `ಪುಷ್ಪ ದಿ ರೈಸ್’ ಹಾಗೂ ‘ಪುಷ್ಪ ದಿ ರೂಲ್’ ಸರಣಿ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದ ಸೀಕ್ವೆಲ್ ಸಿನಿಮಾ. ಈ ಹಿಟ್ ಸರಣಿ ಮುಂದುವರೆಯುವ ಸುಳಿವನ್ನ ಎರಡನೇ ಭಾಗದ ಅಂತ್ಯದಲ್ಲಿ ಚಿತ್ರತಂಡ ತೋರಿಸಿತ್ತು. ಆದರೆ ಯಾವಾಗ ಪುಷ್ಪ 3 ಬರುತ್ತೆ..? ಸ್ಕ್ರೀಪ್ಟ್‌ ಪ್ರಗತಿಯಲ್ಲಿದೆಯಾ ಇಲ್ವಾ? ಅಥವಾ ಚಮಕ್ ಕೊಟ್ಟಿರೋದಾ..? ಹೀಗೆ ಪುಷ್ಪ ಅಭಿಮಾನಿಗಳ ಯಾವುದೇ ಪ್ರಶ್ನೆಗೂ ಪುಷ್ಪ ರಿಲೀಸ್ ಬಳಿಕ ಚಿತ್ರತಂಡ ಉತ್ತರಿಸಿರಲಿಲ್ಲ. ಆದರೆ ಮೊದಲ ಬಾರಿಗೆ ಪುಷ್ಪ 3 ಸಿನಿಮಾ ಬಗ್ಗೆ ಹಾಗೂ ರೆಡಿಯಾಗುತ್ತಿರುವ ಸ್ಕ್ರೀಪ್ಟ್‌ ಬಗ್ಗೆ ಅಲ್ಲು ಅರ್ಜುನ್‌ ಮಾತನಾಡಿದ್ದಾರೆ.

ಪ್ರಸಕ್ತ ಸಾಲಿನ ಸೈಮಾ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಲಭಿಸಿದ್ದು, ದುಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲೇ `ಪುಷ್ಪ 3′ ಖಂಡಿತ ಬರುತ್ತೆ ಎಂದಿದ್ದಾರೆ ಅಲ್ಲು ಅರ್ಜುನ್‌. ಈ ಮೂಲಕ ಪುಷ್ಪರಾಜ್ ಅಭಿಮಾನಿಗಳಿಗೆ ಬಿಸಿ ಬಿಸಿ ಸುದ್ದಿ ಪುಷ್ಪ ಕಡೆಯಿಂದಲೇ ಬಂದಿದೆ. ಈ ವೇಳೆ ಚಿತ್ರದ ನರ‍್ದೇಶಕ ಸುಕುಮಾರ್ ಉಪಸ್ಥಿತರಿದ್ದರು. ಇಬ್ಬರೂ ಒಟ್ಟಿಗೆ ಪುಷ್ಪ3 ತಯಾರಾಗ್ತಿರೋ ಬಗ್ಗೆ ಕನ್ಫರ್ಮೇಷನ್‌ ಕೊಟ್ಟಿದ್ದಾರೆ. `ಪುಷ್ಪ 3′ ಖಂಡಿತವಾಗಲೂ ಬರುತ್ತೆ. ಸ್ಕ್ರೀಪ್ಟ್‌ ಪ್ರಗತಿಯಲ್ಲಿದೆ ಎಂದು ಅಲ್ಲು ಅರ್ಜುನ್‌  ಪುಷ್ಪ 3ಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಅಲ್ಲಿಗೆ ಪಾರ್ಟಿ ಇಲ್ವಾ ಪುಷ್ಪ ಎಂದು ಕೇಳುತ್ತಿದ್ದ ಪುಷ್ಪನ ಫ್ಯಾನ್ಸ್‌ಗೆ ಖುಷಿಯೋ ಖುಷಿ.

Shwetha M