IND Vs UAE.. ಭಾರತಕ್ಕೆ ಚಾಲೆಂಜ್ – ದುಬೈ ತಂಡದಲ್ಲಿ 6 ಜನ ಭಾರತೀಯರು
ಏಷ್ಯಾಕಪ್ ನಲ್ಲಿ ಇಂಡಿಯನ್ಸ್ Vs ಇಂಡಿಯನ್ಸ್?

IND Vs UAE.. ಭಾರತಕ್ಕೆ ಚಾಲೆಂಜ್ – ದುಬೈ ತಂಡದಲ್ಲಿ 6 ಜನ ಭಾರತೀಯರುಏಷ್ಯಾಕಪ್ ನಲ್ಲಿ ಇಂಡಿಯನ್ಸ್ Vs ಇಂಡಿಯನ್ಸ್?

17ನೇ ಆವೃತ್ತಿಯ ಏಷ್ಯಾಕಪ್​ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಎರಡು ಗುಂಪುಗಳಾಗಿ ವಿಂಗಡಿಸಿದ್ದು ಎ ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್ ತಂಡಗಳು ಸ್ಥಾನ ಪಡೆದಿದ್ದರೆ, ಗ್ರೂಪ್  ಬಿಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಸ್ಥಾನ ಪಡೆದಿವೆ. ಏಷ್ಯಾಕಪ್​ನ ಹಾಲಿ ಚಾಂಪಿಯನ್ ಆಗಿರುವ ಭಾರತ ಸೆಪ್ಟೆಂಬರ್ 10ರಂದು ತನ್ನ ಮೊದಲ ಪಂದ್ಯವನ್ನ ಆಡಲಿದೆ. ಕಳೆದ ಶುಕ್ರವಾರವೇ ದುಬೈಗೆ ಹಾರಿರುವ ಟೀಂ ಇಂಡಿಯಾ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಕಾಡೆಮಿಯಲ್ಲಿ ಪ್ರಾಕ್ಟೀಸ್ ನಡೆಸಿದ್ದಾರೆ. ಅಚ್ಚರಿಯ ವಿಚಾರ ಅಂದ್ರೆ ಯುಎಇ ತಂಡದಲ್ಲೂ ಭಾರತೀಯರ ದಂಡೇ ಇದೆ. ಭಾರತದ ವಿರುದ್ಧದ ಪಂದ್ಯದಲ್ಲಿ 6 ಭಾರತೀಯ ಮೂಲದ ಆಟಗಾರರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ : 

ಯುಎಇಯ 17 ಸದಸ್ಯರ ತಂಡದಲ್ಲಿ 6 ಜನ ಭಾರತೀಯ ಮೂಲ!

ಟೀಂ ಇಂಡಿಯಾ ಏಷ್ಯಾಕಪ್​ಗಾಗಿ 15 ಜನರ ಸ್ಕ್ವಾಡ್ ಅನೌನ್ಸ್ ಮಾಡಿದ್ದು ಸೆಪ್ಟೆಂಬರ್ 10 ರಂದು ತಮ್ಮ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಇ ತಂಡವನ್ನು ಎದುರಿಸುವ ಮೂಲಕ ತಮ್ಮ ಏಷ್ಯಾಕಪ್ 2025 ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯವು ಯುಎಇ ಆಟಗಾರರಿಗೆ ಹಾಲಿ ಟಿ20ಐ ವಿಶ್ವಕಪ್ ಚಾಂಪಿಯನ್‌ಗಳ ವಿರುದ್ಧ ಆಡಲು ಒಂದು ಸುವರ್ಣಾವಕಾಶವಾಗಿದೆ. ಇನ್ನು ಯುಎಇ ತಂಡ ಒಟ್ಟು 17 ಆಟಗಾರರನ್ನ ಏಷ್ಯಾಕಪ್​ಗಾಗಿ ಸೆಲೆಕ್ಟ್ ಮಾಡಿದೆ. ಮುಹಮ್ಮದ್ ವಸೀಮ್ (ಸಿ), ರಾಹುಲ್ ಚೋಪ್ರಾ, ರೋಹಿದ್ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜೊಹೈಬ್, ಮತಿಯುಲ್ಲಾ ಖಾನ್, ಜುನೈದ್ ಸಿದ್ದಿಕ್, ಹರ್ಷಿತ್ ಕೌಶಿಕ್, ಹೈದರ್ ಅಲಿ, ಸಿಮ್ರಂಜೀತ್ ಸಿಂಗ್, ಎಥಾನ್ ಡಿಸೋಜಾ, ಧ್ರುವ್ ಪರಾಶರ್, ಮುಹಮ್ಮದ್ ಜವದುಲ್ಲಾ, ಆಸಿಫ್ ಖಾನ್, ಆರ್ಯನ್ಶ್ ಶರ್ಮಾ, ಅಲಿಶನ್ ಶರಫು, ಸಗ್ಹಿರ್ ಖಾನ್. ಇವ್ರ ಪೈಕಿ 6 ಮಂದಿ ಭಾರತೀಯ ಮೂಲದವರು. ಇಂಟ್ರೆಸ್ಟಿಂಗ್ ಅಂದ್ರೆ ಯುಎಇಯ 17 ಸದಸ್ಯರ ತಂಡದಲ್ಲಿ ಆರು ಭಾರತೀಯ ಮೂಲದ ಆಟಗಾರರು ಇದ್ದಾರೆ.

ಯುಎಇ ತಂಡದಲ್ಲಿ ಭಾರತೀಯರು!

ಯುಎಇ ತಂಡದಲ್ಲಿರುವ ಆರು ಭಾರತೀಯ ಮೂಲದ ಆಟಗಾರರು

ಹರ್ಷಿತ್ ಕೌಶಿಕ್, ಸಿಮ್ರನ್‌ಜೀತ್ ಸಿಂಗ್, ಧ್ರುವ್ ಪರಾಶರ್, ಅಲಿಶನ್ ಶರಫು

ಆರ್ಯನ್ಶ್ ಶರ್ಮಾ, ರಾಹುಲ್ ಚೋಪ್ರಾ ಭಾರತೀಯ ಮೂಲದವರು

ಕೌಶಿಕ್ ಸೆಪ್ಟೆಂಬರ್ 1, 2025 ರಂದು ಪಾದಾರ್ಪಣೆ, ಯುಎಇ ಪರ 3 ಪಂದ್ಯ

ಸ್ಪಿನ್ನರ್ ಸಿಮ್ರನ್‌ ಜೀತ್ ಸ್ವಲ್ಪ ಅನುಭವಿ, 12 ಟಿ20ಐಗಳಿಂದ 15 ವಿಕೆಟ್‌ ಬೇಟೆ

ಆಲ್‌ ರೌಂಡರ್ ಪರ್ಷರ್ 23 ಪಂದ್ಯಗಳಿಂದ 128 ರನ್ ಮತ್ತು 25 ವಿಕೆಟ್‌

ಕೇರಳದಲ್ಲಿ ಜನಿಸಿದ ಅಲಿಶಾನ್ 53 ಟಿ20ಐಗಳಿಂದ 1249 ರನ್‌

ಆರ್ಯನ್ಶ್ 2023ರಲ್ಲಿ ಯುಎಇ ಪರ ಟಿ20ಐಗೆ, 15 ಪಂದ್ಯ, 365 ರನ್

ವಿಕೆಟ್ ಕೀಪರ್ ರಾಹುಲ್ ಚೋಪ್ರಾ 29 ಟಿ20ಐಗಳಿಂದ 600 ರನ್‌

ಭಾರತದ ಎದುರು ಯುಎಇ ಟೀಂ ವೀಕ್ ಅನ್ಸಿದ್ರೂ ಕೂಡ ಅಲ್ಲಿಯೂ ಭಾರತೀಯರೇ ಇದ್ದಾರೆ. ಅಂದ್ರೆ ಭಾರತ ಮೂಲದವ್ರು ಯುಎಇಯಲ್ಲಿ ಸೆಟಲ್ ಆಗಿ ಆ ರಾಷ್ಟ್ರದ ಪರ ಕಣಕ್ಕಿಳೀತಿದ್ದಾರೆ. ಸೋ ಅಲ್ಲಿಗೆ ಸೆಪ್ಟೆಂಬರ್ 10ರಂದು ನಡೆಯೋ ಪಂದ್ಯ ಭಾರತೀಯರು ವರ್ಸಸ್ ಭಾರತೀಯ ಮೂಲದವ್ರ ನಡುವಿನ ಕದನವಾಗಿ ಮಾರ್ಪಡಲಿದೆ.

Shantha Kumari