ಟಗರು ಪುಟ್ಟಿ WPLಗೂ ಇಲ್ಲ.. WCಗೂ ಇಲ್ಲ.. – ಕನ್ನಡ ಬಿಗ್‌ ಬಾಸ್‌ಗೆ ಶ್ರೇಯಾಂಕ ಸ್ಪರ್ಧಿ?
ಪಾಟೀಲ್‌ ಶೋಗೆ Okay.. ಕ್ರಿಕೆಟ್‌ ಕತೆ?

ಟಗರು ಪುಟ್ಟಿ WPLಗೂ ಇಲ್ಲ.. WCಗೂ ಇಲ್ಲ.. – ಕನ್ನಡ ಬಿಗ್‌ ಬಾಸ್‌ಗೆ ಶ್ರೇಯಾಂಕ ಸ್ಪರ್ಧಿ?ಪಾಟೀಲ್‌ ಶೋಗೆ Okay.. ಕ್ರಿಕೆಟ್‌ ಕತೆ?

ಶ್ರೇಯಾಂಕ ಪಾಟೀಲ್..‌ ಆರ್‌ಸಿಬಿ ಅಭಿಮಾನಿಗಳ ಹಾಟ್‌ ಫೇವರೇಟ್‌ ಪ್ಲೇಯರ್‌.. ಕ್ರಿಕೆಟ್‌ ಲೋಕಕ್ಕೆ ಕಾಲಿಟ್ಟ ಕೆಲವೇ ಕೆಲವು ಟೈಮ್‌ನಲ್ಲಿ ಟಗರುಪುಟ್ಟಿ ಕ್ಲಿಕ್‌ ಆಗಿದ್ದಾರೆ.. ಬ್ಯಾಟಿಂಗ್‌.. ಫೀಲ್ಡಿಂಗ್‌.. ಬೌಲಿಂಗ್‌ ಈ ಮೂರರಲ್ಲೂ ಸಾಲಿಡ್‌ ಪರ್ಫಾಮೆನ್ಸ್‌ ಕೊಡ್ತಾ ಬಂದಿದ್ರು ಕನ್ನಡದ ಕುವರಿ.. ಆದ್ರೆ ಇತ್ತೀಚೆಗೆ ಶ್ರೇಯಾಂಕ ಮೈದಾನದಲ್ಲಿ ಕಾಣಿಸಿಕೊಳ್ತಿಲ್ಲ.. ಕಳೆದ ಸೀಸನ್​ WPLನಲ್ಲೂ ಕಾಣಿಸಿಕೊಂಡಿಲ್ಲ.. ಮುಂಬರೋ ವಿಶ್ವಕಪ್​ ತಂಡಕ್ಕೂ ಆಯ್ಕೆಯಾಗಿಲ್ಲ.. ಆದ್ರೆ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಶ್ರೇಯಾಂಕ ಫುಲ್‌ ಆಕ್ಟಿವ್..‌ ಇದೀಗ ಅಭಿಮಾನಿಗಳಿಗೆ ಒಂದು ಚಿಂತೆ ಕಾಡ್ತಾನೆ ಇದೆ.. ಟಗರುಪುಟ್ಟಿ ಆನ್​​ಫೀಲ್ಡ್ ಗೆ ಎಂಟ್ರಿ ಕೊಡೋದು ಯಾವಾಗ ಅಂತ? ಆದ್ರೀಗ ಶ್ರೇಯಾಂಕ ಬಗ್ಗೆ ಮತ್ತೊಂದು ಟಾಕ್‌ ಕೂಡ ಶುರುವಾಗಿದೆ. ಬಿಗ್‌ ಬಾಸ್‌ ಮನೆಗೆ ಕನ್ನಡತಿ ಕಾಲಿಡಲಿದ್ದಾರಂತೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದ ಕೋತಿಗಳು!

ಶ್ರೇಯಾಂಕ ಪಾಟೀಲ್‌ ಆನ್‌ ದಿ ಫೀಲ್ಡ್..‌ ಆಫ್‌ ದಿ ಫೀಲ್ಡ್‌ ಸಖತ್‌ ಆಕ್ಟಿವ್‌.. ಟೀಮ್ ಇಂಡಿಯಾ ಹಾಗೂ ಆರ್​​ಸಿಬಿ ಪರ ಆಡಿ ಮೋಡಿ ಮಾಡಿರುವ ಶ್ರೇಯಾಂಕ ಕ್ರಿಕೆಟ್​ ಅಭಿಮಾನಿಗಳ ಕ್ರಶ್​ ಆಗಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಕ್ರಿಕೆಟ್‌ ಲೋಕದಲ್ಲಿ ಸದ್ದು ಮಾಡಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆದ್ರೆ ಶ್ರೇಯಾಂಕ ಮೈದಾನದಲ್ಲಿ ಬ್ಯಾಟ್‌ ಬೀಸಿ ಒಂದು ವರ್ಷವೇ ಆಗ್ತಾ ಬಂತು.. ಈ ವರ್ಷದ WPL ನಲ್ಲೂ ಆಟವಾಡಿಲ್ಲ.. ಮುಂಬರೋ ವಿಶ್ವಕಪ್‌ ಟೂರ್ನಿಗೂ ಆಯ್ಕೆಯಾಗಿಲ್ಲ. ಇಂಜುರಿ ಕಾರಣದಿಂದಾಗಿ ಟೀಮ್‌ ನಲ್ಲಿ ಅವಕಾಶ ಸಿಕ್ಕಿಲ್ಲ. 2024ರ ಅಕ್ಟೋಬರ್​​ನಲ್ಲಿ ಮಹಿಳಾ ಏಷ್ಯಾ ಕಪ್ ಪಂದ್ಯದ ವೇಳೆ ಶ್ರೇಯಾಂಕ ಇಂಜುರಿಗೆ ಒಳಗಾಗಿದ್ರು. ಅದಾದ ಬಳಿಕ ಯಾವುದೇ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ.. ಸಿಕ್ಕ ಟೈಮ್‌ ನಲ್ಲಿ ಟಗರು ಪುಟ್ಟಿ ಈಗ ಎಂಜಾಯ್‌ ಮಾಡ್ತಿದ್ದಾರೆ. ಡಾನ್ಸ್​, ಹಾಡು, ರೀಲ್ಸ್, ಸುತ್ತಾಟ​​ ಅಂತಾ ಫುಲ್​ ಎಂಜಾಯ್​ ಮಾಡ್ತಿದ್ದಾರೆ.  ಇದ್ರ ಜೊತೆಗೆ ಶ್ರೇಯಾಂಕ ಮರ್ಸಿಡಿಸ್​​ ಬೆಂಜ್​ನಂತಾ ಟಾಪ್​ ಬ್ರ್ಯಾಂಡ್​ ಜೊತೆಗೆ ಟೈ ಅಪ್​ ಆಗಿದ್ದಾರೆ.. ಹೀಗಾಗಿ  ಶ್ರೇಯಾಂಕ, ಶೂಟ್​ನಲ್ಲೂ ಭಾಗಿಯಾಗ್ತಿದ್ದಾರೆ.. ಇವೆಲ್ಲದ್ರ  ಮಧ್ಯೆ ಶ್ರೇಯಾಂಕ ಪಾಟೀಲ್‌ ಹೊಸ ವಿಚಾರ ಸದ್ದು ಮಾಡ್ತಿದೆ.. ಕನ್ನಡತಿ ಬಿಗ್‌ ಬಾಸ್‌ ಮನೆಗೂ ಕಾಲಿಡ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಹೌದು.. ಶ್ರೇಯಾಂಕ ಪಾಟೀಲ್‌ ಸದ್ಯ ಯಾವ ಟೂರ್ನಿಯಲ್ಲೂ ಆಡ್ತಿಲ್ಲ..   ಬೆಂಗಳೂರಿನ ಎನ್​ಸಿಎನಲ್ಲಿ ರಿಹ್ಯಾಬ್​ಗೆ​ ಒಳಗಾಗಿದ್ದಾರೆ. ಇದ್ರ ಜೊತೆಗೆ ನೆಟ್ಸ್​ನಲ್ಲಿ ಅಭ್ಯಾಸವನ್ನೂ ನಡೆಸ್ತಾ ಇದ್ದಾರೆ. ಈ ಮೂಲಕ  ಆಟವನ್ನ ಇಂಪ್ರೂವ್​ ಮಾಡಿಕೊಳ್ಳೋಕೆ ಶ್ರಮವಹಿಸ್ತಿದ್ದಾರೆ. ಇದೀಗ ಶ್ರೇಯಾಂಕ ಪಾಟೀಲ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ಸ್ಪರ್ಧಿಯಾಗಿ ಬರಲಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡಿತಾ ಇದೆ. ಆದ್ರೆ ಈ ಬಗ್ಗೆ ಶ್ರೇಯಾಂಕ ಆಗ್ಲೀ, ಬಿಗ್‌ ಬಾಸ್‌ ಟೀಮ್‌ ಆಗ್ಲೀ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದ್ವೇಳೆ.. ಕನ್ನಡತಿ ದೊಡ್ಮನೆಗೆ ಬಂದ್ರೂ ಸ್ಪರ್ಧಿಯಾಗಿ ಬರ್ಲಿಕ್ಕಿಲ್ಲ..‌ ಗ್ರ್ಯಾಂಡ್‌ ಓಪನಿಂಗ್‌ ದಿನ ಗೆಸ್ಟ್‌ ಆಗಿ ಬರ್ಬೋದು.. ಅಥವಾ ಒಂದೆರಡು ಸಂಚಿಕೆಗಳಿಗೆ ಅವರನ್ನ ಕರೆಸಿಕೊಳ್ಬೋದು ಅಷ್ಟೇ.. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ಸಿಗುತ್ತಾ ಅಂತಾ ಕಾದುನೋಡ್ಬೇಕು.. ಆದ್ರೆ ಶ್ರೇಯಾಂಕ ಅಭಿಮಾನಿಗಳು ಮಾತ್ರ ಕನ್ನಡತಿ ಆದಷ್ಟು ಬೇಗ ಫುಲ್​ ಫಿಟ್​ ಆಗಿ. ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಲಿ ಅಂತಾ ಬಯಸ್ತಿದ್ದಾರೆ.

Shwetha M