ಸಾರಾ ತೆಂಡೂಲ್ಕರ್ ಗೂ ಕಂಕಣ ಭಾಗ್ಯ.. ಮಗಳಿಗೂ ವರ ಹುಡುಕಿದ ಸಚಿನ್? – ಸಿದ್ಧಾರ್ಥ್ ಕೆರ್ಕರ್ ಯಾರು ಗೊತ್ತಾ?

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್.. ಕಳೆದ ಕೆಲ ವರ್ಷಗಳಿಂದ ಸಾರಾ ತೆಂಡೂಲ್ಕರ್ ಸುದ್ದಿಯಲ್ಲಿರೋದು ಗೊತ್ತೇ ಇದೆ.. ತಮ್ಮ ಸ್ಟೈಲ್, ಫ್ಯಾಷನ್ ಮೂಲಕ ಮಿಂಚುತ್ತಿರೋ ಸಾರಾ ಯಾವ ಸೆಲಬ್ರಿಟಿಗಳಿಗೂ ಕಮ್ಮಿ ಇಲ್ಲ. ಹೀಗಾಗೇ ಸಾರಾ ನ್ಯಾಷನಲ್, ಇಂಟರ್ ನ್ಯಾಷನಲ್ ಪ್ರಾಡಕ್ಟುಗಳಿಗೆ ಮಾಡೆಲ್ ಆಗಿದ್ದಾರೆ. ಚಿಕ್ಕ ವಯಸ್ಸಿಗೆ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಇವೆಲ್ಲದ್ರ ಮಧ್ಯೆ ಸಚಿನ್ ಪುತ್ರಿ ಸಾರಾ ಪ್ರೀತಿಯಲ್ಲಿ ಬಿದ್ದಿರೋ ವಿಚಾರ ರಿವೀಲ್ ಆಗಿದೆ. ಆದ್ರೆ ಶುಭ್ಮನ್ ಗಿಲ್ ಜೊತೆ ಅಲ್ಲ.. ಸಾರಾ ಬೇರೆ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನ ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಂದ ಕೋತಿಗಳು!
ಸಾರಾ ತೆಂಡೂಲ್ಕರ್ ಸಖತ್ ಬ್ಯೂಟಿಫುಲ್.. ಈಕೆ ಅಂದಕ್ಕೆ ಮನಸೋಲದವರೇ ಇಲ್ಲ.. ಅದೆಷ್ಟೋ ಯುವಕರು ಈಕೆ ಅಂದಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸದ್ಯ ಸಾರಾ ತೆಂಡೂಲ್ಕರ್ ಈಕೆ ಕೂತ್ರೂ ನಿಂತ್ರೂ ಸುದ್ದಿಯಲ್ಲಿದ್ದಾರೆ.. ಶುಭಮನ್ ಗಿಲ್ ಹಾಗೇ ಸಾರಾ ತೆಂಡೂಲ್ಕರ್ ಜೊತೆ ಸಮ್ಥಿಂಗ್ ಸಮ್ಂಥಿಗ್ ನಡಿತಾ ಇದೆ. ಕೆಲ ವರ್ಷದಿಂದ ಡೇಟಿಂಗ್ ನಡೆಸ್ತಾ ಇದ್ದಾರೆ ಅಂತಾ ಹೇಳಲಾಗಿತ್ತು. ಅದಾದ್ಮೇಲೆ ಗಿಲ್ ನಾನು ಸಿಂಗಲ್ ಅನ್ನೋದ್ರ ಮೂಲಕ ಹರಿದಾಡ್ತಿರೋ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ರು. ಬಳಿಕ ಬಾಲಿವುಡ್ ನಟನ ಜೊತೆ ಸಾರಾ ಹೆಸ್ರು ತಳುಕು ಹಾಕಿಕೊಂಡಿತ್ತು. ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಸಾರಾ ಮದುವೆ.. ಎರಡೂ ಫ್ಯಾಮಿಲಿ ಈಗಾಗಲ್ಲೇ ಮಾತುಕತೆ ನಡೆಸಿದೆ ಅಂತಾ ಹೇಳಲಾಗಿತ್ತು. ಆದ್ರೆ ಸಿದ್ಧಾಂತ್ ಜೊತೆ ಬ್ರೇಕ್ಅಪ್ ಮಾಡಿಕೊಂಡಿದ್ದಾರೆ ಅಂತಾ ಸುದ್ದಿಯಾಯ್ತು.. ಆದ್ರೀಗ.. ಸಾರಾ ಡೇಟಿಂಗ್, ಲವ್ ಕಹಾನಿಯಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾರಾ ಗೋವಾ ಮೂಲದ ಯುವಕನಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಹೌದು, ಸಾರಾ ತೆಂಡೂಲ್ಕರ್ ಪ್ರೀತಿ, ಡೇಟಿಂಗ್ ವಿಚಾರವಾಗಿ ಸಖತ್ ಸುದ್ದಿಯಲ್ಲಿರ್ತಾರೆ. ಇದೀಗ ಸಾರಾ ತೆಂಡುಲ್ಕರ್ ಲೈಫ್ಗೆ ಹೊಸ ಹುಡುಗನ ಎಂಟ್ರಿಯಾಗಿದೆ ಎಂದು ಹೇಳಲಾಗ್ತಿದೆ. ಯುವಕನೊಬ್ಬನ ಜೊತೆ ಇರೊ ಸಾರಾ ಫೋಟೋ ಭಾರಿ ವೈರಲ್ ಆಗ್ತಿದೆ. ಈತನೇ ಸಾರಾ ಹೊಸ ಬಾಯ್ಫ್ರೆಂಡ್ ಅಂತಾ ಹೇಳಲಾಗ್ತಿದೆ.
ಅಂದ್ಹಾಗೆ, ಸಾರಾ ತೆಂಡುಲ್ಕರ್ ಜೊತೆಗೆ ಕಾಣಿಸಿಕೊಂಡಿರೋ ಹುಡುಗನ ಹೆಸರು ಸಿದ್ಧಾರ್ಥ್ ಕೆರ್ಕರ್. ಶ್ರೀಮಂತ ಉದ್ಯಮಿ ಹಾಗೂ ಖ್ಯಾತ ಆರ್ಟಿಸ್ಟ್.! ಗೋವಾದಲ್ಲಿ ಹೋಟೆಲ್ ಉದ್ಯಮವನ್ನ ನಡೆಸ್ತಾ ಇದ್ದಾರೆ. ಮೂಲತಃ ಸಿದ್ಧಾರ್ಥ್ ಕುಟುಂಬಸ್ಥರು ಶಿಲ್ಪಕಲೆಯ ಹಿನ್ನೆಲೆಯುಳ್ಳವರು. ಸಿದ್ಧಾರ್ಥ್ ಕೂಡ ಲಂಡನ್ನ ಯುನಿವರ್ಸಿಟಿ ಆಫ್ ಆರ್ಟ್ಸ್ನಲ್ಲಿ ಪದವಿ ಪಡೆದಿದ್ದು, ಶಿಲ್ಪಕಲೆಯ ವೃತ್ತಿಯನ್ನೂ ಮಾಡ್ತಿದ್ದಾರೆ. ಇನ್ನು ಸಾರಾ ತೆಂಡುಲ್ಕರ್ -ಸಿದ್ಧಾರ್ಥ್.. ಇವರಿಬ್ಬರ ಭೇಟಿ-ಪರಿಚಯ ಆಗಿದ್ದು ಲಂಡನ್ನಲ್ಲೇ. ಇದೀಗ ಭಾರತಕ್ಕೆ ವಾಪಾಸ್ಸಾಗಿರೋ ಇಬ್ಬರು ಇಲ್ಲೇ ಸೆಟಲ್ ಆಗೋ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ಸಾರಾ ತೆಂಡುಲ್ಕರ್ ಮುಂಬೈನಲ್ಲಿ ಬ್ಯುಸಿನೆಸ್ ಆರಂಭಿಸಿದ್ದಾರೆ. ಸಿದ್ಧಾರ್ಥ್ ಗೋವಾದಲ್ಲಿ ಸೆಟಲ್ ಆಗ್ತಾರೆ ಎಂದು ಹೇಳಲಾಗ್ತಿದೆ.
ಇನ್ನು ಸಾರಾ ಹಾಗೂ ಸಿದ್ಧಾರ್ಥ್ ಕೆರ್ಕರ್ ಪ್ರೀತಿಗೆ ಸಾರಾ ಮನೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ತಾ ಅನ್ನೋ ಪ್ರಶ್ನೆ ಅನೇಕರನ್ನ ಕಾಡ್ತಿದೆ. ಯಾಕಂದ್ರೆ ಸಿದ್ಧಾರ್ಥ್, ಸಚಿನ್ ತೆಂಡೂಲ್ಕರ್, ಅಂಜಲಿ ಜೊತೆಗೆ ಕಾಣಿಸಿಕೊಂಡ ಫೋಟೋ ಕೂಡ ವೈರಲ್ ಆಗಿದೆ. ಜೊತೆಗೆ ಸಚಿನ್, ಅಂಜಲಿ ಹಾಗೂ ಅರ್ಜುನ್ ಇನ್ಸ್ಸ್ಟಾಗ್ರಾಂನಲ್ಲಿ ಸಿದ್ಧಾರ್ಥ್ ಅವರನ್ನ ಫಾಲೋ ಮಾಡ್ತಿದ್ದಾರೆ. ಇದೀಗ ಈ ಹುಡುಗನೊಂದಿಗೆ ಸಾರಾ ಮದುವೆ ಫಿಕ್ಸ್ ಅಂತಾ ಹೇಳಲಾಗ್ತಿದೆ.. ಆದ್ರೆ ಇದು ಜಸ್ಟ್ ಅಂತೆ ಕಂತೆಗಳಷ್ಟೇ.. ಈ ಬಗ್ಗೆ ಸಾರಾ ಆಗ್ಲೀ, ಸಿದ್ಧಾರ್ಥ್ ಆಗ್ಲೀ ಎಲ್ಲೂ ಹೇಳಿಕೊಂಡಿಲ್ಲ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾರ್ಥ್ ಕೆರ್ಕರ್ ಜೊತೆಗೆ ಸಾರಾ ಮದುವೆ ಫಿಕ್ಸ್ ಅನ್ನೋ ಚರ್ಚೆ ಜೋರಾಗಿ ಸದ್ದು ಮಾಡ್ತಿದೆ. ಮುಂದಿನ ದಿನಗಳಲ್ಲಿ ಈ ಗಾಸಿಪ್ ಎಲ್ಲಿವರೆಗೆ ಮುಟ್ಟುತ್ತೆ ಅಂತಾ ಕಾದುನೋಡ್ಬೇಕು.

ನೋಡಿರಿ

