ಇಂದು ರಕ್ತ ಚಂದ್ರಗ್ರಹಣ – ಎಲ್ಲಿ ಗೋಚರ.. ಹೇಗೆ ಆಚರಿಸಬೇಕು?

ಇಂದು ರಕ್ತ ಚಂದ್ರಗ್ರಹಣ – ಎಲ್ಲಿ ಗೋಚರ.. ಹೇಗೆ ಆಚರಿಸಬೇಕು?

ರಕ್ತ ಚಂದ್ರಗ್ರಹಣ ಇಂದು ( ಸೆಪ್ಟೆಂಬರ್ 7 )  ನಡೆಯಲಿದೆ.  ಈ ಗ್ರಹಣವು ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಕುಂಭ ರಾಶಿಯಲ್ಲಿ ಸಂಭವಿಸಲಿದೆ. ಗ್ರಹಣದಲ್ಲಿ ಸೂರ್ಯ ಮತ್ತು ಚಂದ್ರರ ಸಂಯೋಗವು ಕುಂಭ ರಾಶಿಯಲ್ಲಿ ಸಂಭವಿಸುತ್ತದೆ.  ಸೆಪ್ಟೆಂಬರ್ 7ರಂದು ರಾತ್ರಿ 8:58 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 8,ರಂದು ಬೆಳಗ್ಗೆ 1:25ರ ವರೆಗೆ ಇರುತ್ತದೆ. ಚಂದ್ರಗ್ರಹಣವು ರಾತ್ರಿ 11:00ರಿಂದ ಬೆಳಗ್ಗೆ 12:22ರ ವರೆಗೆ ಸಂಪೂರ್ಣವಾಗಿ ಕೆಂಪಾಗಿ ಕಾಣುತ್ತೆ.

ರಕ್ತ ಚಂದ್ರವು ಅಪರೂಪದ ವಿದ್ಯಮಾನವಾಗಿದ್ದು, ಇದರಲ್ಲಿ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಹೀಗಾಗಿಯೇ ಇದು ಸಾಕಷ್ಟು ವಿಶೇಷವಾಗಿದೆ. ಭೂಮಿಯ ನೆರಳು ಚಂದ್ರನನ್ನು ಆವರಿಸಿದಾಗ ಒಟ್ಟು ಚಂದ್ರಗ್ರಹಣ ಸಂಭವಿಸುತ್ತದೆ. ಮತ್ತು ಕತ್ತಲೆಯಾಗುವ ಬದಲು, ಚಂದ್ರನು ಗಾಢ ಕೆಂಪು ಬಣ್ಣವನ್ನು ಪಡೆಯುತ್ತಾನೆ ಮತ್ತು ಬ್ಲಡ್ ಮೂನ್ ಎಂದು ಕರೆಯಲ್ಪಡುತ್ತಾನೆ.

ಈ ಬಾರಿ ಭಾರತದಲ್ಲಿ. ರಕ್ತ ಚಂದ್ರಗ್ರಹಣವು ದೇಶದ ಬಹುತೇಕ ಎಲ್ಲಾ ಭಾಗಗಳಿಂದ ಗೋಚರಿಸುತ್ತದೆ. ನೀವು   ಲಕ್ನೋ, ದೆಹಲಿ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಮುಂಬೈ, ಪುಣೆ, ಗೋವಾ ಮತ್ತು ಇನ್ನೂ ಹೆಚ್ಚಿನ ನಗರಗಳಲ್ಲಿ ಗೋಚರಣೆ ಆಗುತ್ತೆ. ಮಳೆಯ ವಾತವರ್ಣವಿದ್ರೆ ಕಾಣುವುದಿಲ್ಲ.

ಇನ್ನೂ ಧಾರ್ಮಿಕ ವಿಚಾರಕ್ಕೆ ಬರುವುದಾದ್ರೆ ಒಟ್ಟಾರೆಯಾಗಿ ಗ್ರಹಣದ ಅವಧಿ 3 ಗಂಟೆ 31 ನಿಮಿಷಗಳ ಕಾಲ ಇರುತ್ತದೆ. ಗ್ರಹಣ ಆಚರಣೆ ಮಾಡುವವರು ಗ್ರಹಣ ಸ್ಪರ್ಶ ಕಾಲದಲ್ಲೂ ಹಾಗೂ ಮೋಕ್ಷವಾದ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. ಸೆಪ್ಟೆಂಬರ್ 7ನೇ ತಾರೀಕು  ಮಧ್ಯಾಹ್ನ 12.15ರ ಒಳಗಾಗಿ ಊಟವನ್ನು ಮಾಡಿ ಮುಗಿಸಬೇಕು. ಸಣ್ಣ ವಯಸ್ಸಿನ ಮಕ್ಕಳು, ಅನಾರೋಗ್ಯ ಇರುವಂಥವರು, ವಯಸ್ಸಿನಲ್ಲಿ ಹಿರಿಯರು ಮಧ್ಯಾಹ್ನ 3.15ರ ವರೆಗೂ ಆಹಾರವನ್ನು ಸೇವನೆ ಮಾಡಬಹುದು. ಅಂದರೆ ಆ ಟೈಂನಲ್ಲಿ ಊಟ ಮಾಡಬೇಕು.

ಜ್ಯೋತಿಷಿಗಳ ಪ್ರಕಾರ, ಕರ್ಕಾಟಕ, ಕುಂಭ ರಾಶಿಯವರಿಗೆ ಈ ಗ್ರಹಣ ಅಶುಭಕರವಾಗಿದೆ. ಇದು ಮನಸ್ಸಿನ ಚಂಚಲತೆ, ವ್ಯವಹಾರದಲ್ಲಿ ಸಮಸ್ಯೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.  ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ತಾಯಿಯ ಆರೋಗ್ಯ ಚೆನ್ನಾಗಿಲ್ಲದಿರಬಹುದು. ದೈಹಿಕ ನೋವು ಇರಬಹುದು.  ಹಾದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಈ ಸಮಯದಲ್ಲಿ, ಶಾಂತವಾಗಿರಲು ಪ್ರಯತ್ನಿಸಿ ಮತ್ತು ಜಗಳಗಳಿಂದ ದೂರವಿರಿ. ಚಂದ್ರನ ಆಶೀರ್ವಾದ ಪಡೆಯಲು ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸುವುದು ಉತ್ತಮ. ಗ್ರಹಣ ಕಾಲದಲ್ಲಿ ತಮ್ಮ ಬಳಿ ಇಟ್ಟುಕೊಂಡಿದ್ದು, ಗ್ರಹಣ ಸಂಪೂರ್ಣವಾದ ನಂತರದಲ್ಲಿ ಉದ್ದು, ಭತ್ತ ಅಥವಾ ಅಕ್ಕಿ, ಚಂದ್ರ ಬಿಂಬದೊಂದಿಗೆ  ತಮ್ಮಿಂದ ಸಾಧ್ಯವಾದಷ್ಟು ದಾನ- ದಕ್ಷಿಣೆ ಕೊಡಬೇಕು ಅಂತ ಜ್ಯೋತಿಷ್ಯ ಹೇಳುತ್ತೆ.

Kishor KV