ಮನೆಯಲ್ಲಿ ಮಲಗಿದ್ದ ಮಗುವನ್ನ ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಂದ ಕೋತಿಗಳು!

ಈ ಭೂಮಿ ಮೇಲೆ ಯಾರು ಶಾಶ್ವತ ಅಲ್ಲ.. ಇಂದು ಇದ್ದವರು ನಾಳೆ ಇರ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಸಾವು ಯಾವಾಗ ಬೇಕಾದ್ರೂ ಬರ್ಬೋದು.. ಇದೀಗ 2 ತಿಂಗಳ ಪುಟ್ಟ ಕಂದಮ್ಮಗೆ ಸಾವು ಕೋತಿಗಳ ರೂಪದಲ್ಲಿ ಬಂದಿದೆ. ಪ್ರಪಂಚ ನೋಡೋದಿಕ್ಕೂ ಮುನ್ನವೇ ಪುಟ್ಟ ಕಂದ ಉಸಿರು ನಿಲ್ಲಿಸಿದೆ.
ಇದನ್ನೂ ಓದಿ: ಅಂಬಿಕಾಳೇ ದೇವಿ.. ದಂಗಾದ ದುರ್ಗಾ! – ಅಕ್ಕ ಅನ್ನೋ ರಹಸ್ಯ ರಿವೀಲ್ ಆಗುತ್ತಾ?
ಏನಿದು ಘಟನೆ?
ಈ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ಮನೆಯಲ್ಲಿ ಮಲಗಿಸಿದ್ದ ಮಗುವನ್ನ ಕೋತಿಗಳು ಎತ್ತಿಕೊಂಡು ಹೋಗಿವೆ.. ಬಳಿಕ ನೀರು ತುಂಬಿದ ಡ್ರಮ್ ಒಳಗೆ ಆ ಮಗುವನ್ನ ಎಸೆದ್ದು, ಮಗು ಕ್ಷಣದಲ್ಲೇ ಪ್ರಾಣ ಕಳೆದುಕೊಂಡಿದೆ. ಇದೀಗ ಮಗುವನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಕಳೆದ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನುಜ್ ಕುಮಾರ್ ಅವರ ಮಗುವನ್ನ ಸ್ನಾನ ಮಾಡಿಸಿ ಮನೆಯ ವರಾಂಡಾದಲ್ಲಿ ಮಲಗಿಸಲಾಗಿತ್ತು. ಬಳಿಕ ತಾಯಿ ಸವಿತಾ ಸ್ನಾನಕ್ಕೆ ಹೋಗಿದ್ದಾರೆ. ಈ ವೇಳೆ ಮನೆಯೊಳಗೆ ನುಗ್ಗಿದ ಮಂಗಗಳು ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿವೆ. ಸದ್ದಿಲ್ಲದೆ ಬಂದು ಮಂಚದಿಂದ ಮಗುವನ್ನು ಎತ್ತಿಕೊಂಡು ಹೋದ ಕೋತಿಗಳು ಮನೆಯ ಟೆರೇಸ್ ಮೇಲೆ ಹಾರಿ ಹೋಗಿವೆ. ಅಲ್ಲಿದ್ದ ನೀರಿನ ಡ್ರಮ್ನಲ್ಲಿ ಮಗುವನ್ನು ಬಿಸಾಡಿವೆ. ಇದರಿಂದ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ.
ಸವಿತಾ ಸ್ನಾನ ಮಾಡಿ ಬರುವಷ್ಟರಲ್ಲಿ ಮಗು ಕಾಣೆಯಾಗಿದೆ. ಮಲಗಿಸಿದ್ದ ಮಗು ಎಲ್ಲೂ ಕಾಣದಿದ್ದಾಗ ಮನೆಯವರು ಗಾಬರಿಯಾಗಿ ಹುಡುಕಾಡಿದ್ದರು. ಬಹಳ ಸಮಯ ಹುಡುಕಾಟ ನಡೆಸಿದ ನಂತರ ಮಗುವಿನ ಶವ ಮನೆಯ ಟೆರೇಸಿನ ಮೇಲೆ ನೀರು ತುಂಬಿದ ಡ್ರಮ್ನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಆ ದಂಪತಿಗೆ ಇದು ಮೊದಲ ಮಗುವಾಗಿತ್ತು. ಈ ಪ್ರಕರಣ ಸಂಬಂಧ ಮಖ್ರೆಹ್ತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಗುವಿನ ಕುಟುಂಬ ಯಾವುದೇ ದೂರು ದಾಖಲಿಸಿಲ್ಲ. ಮಗು ಸಾವನ್ನಪ್ಪುತ್ತಿದ್ದಂತೆ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಗುವಿನ ತಂದೆ ಅನುಜ್ ಕುಮಾರ್ ತಮ್ಮ ಮನೆಯ ಹೊರಗೆ ವಿದ್ಯುತ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಇಲ್ಲಿಯವರೆಗೆ, ಆ ಕುಟುಂಬವು ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ. ಆದರೆ ಮಗು ಸಾವಿನ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ನೋಡಿರಿ

