ಅಂಬಿಕಾಳೇ ದೇವಿ.. ದಂಗಾದ ದುರ್ಗಾ! –  ಅಕ್ಕ ಅನ್ನೋ ರಹಸ್ಯ ರಿವೀಲ್‌ ಆಗುತ್ತಾ?
ಶರತ್‌ ಬಳಿ ಸತ್ಯ ಹೇಳ್ತಾಳಾ ದುರ್ಗಾ? 

ಅಂಬಿಕಾಳೇ ದೇವಿ.. ದಂಗಾದ ದುರ್ಗಾ! –  ಅಕ್ಕ ಅನ್ನೋ ರಹಸ್ಯ ರಿವೀಲ್‌ ಆಗುತ್ತಾ?ಶರತ್‌ ಬಳಿ ಸತ್ಯ ಹೇಳ್ತಾಳಾ ದುರ್ಗಾ? 

ಶರತ್‌ ನ ಮದುವೆ ಆಗ್ಬೇಕುಂತ ಅಂದ್ಕೊಂಡಿದ್ದ ಮಯಾ ಕನಸು ನುಚ್ಚು ನೂರಾಗಿದೆ. ಇದೀಗ ಅಂಬಿಕಾ, ಹಿತಾ ಆಸೆಯಂತೆ ಕಡೆಗೂ ದುರ್ಗಾ ಹಾಗೂ ಶರತ್‌ ಒಂದಾಗಿದ್ದಾರೆ. ದೇವಿ ಸಮ್ಮುಖದಲ್ಲೇ ಇವರಿಬ್ಬರ ಮದುವೆ ನಡೆದಿದೆ. ಆದ್ರೀಗ ಸೀರಿಯಲ್‌ ಸ್ಟೋರಿಯಲ್ಲಿ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ದುರ್ಗಾ ಶರತ್‌ ಮನೆಗೆ ಕಾಲಿಡ್ತಿದ್ದಂತೆ ಮಹಾ ರಹಸ್ಯವೊಂದು ಬಯಲಾಗಿದೆ. ಇದೀಗ ದುರ್ಗಾಳಿಗೆ ದೇವಿನೇ ಅಂಬಿಕಾ ಅನ್ನೋ ಸತ್ಯ ಗೊತ್ತಾಗಿದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಹೊಸ ಮನೆ ಹೋಗಿದೆ ಗೊತ್ತಾ? – ಕೊನೆಗೂ ಗುಟ್ಟು ರಿವೀಲ್‌ ಮಾಡಿದ ಕಿಚ್ಚ ಸುದೀಪ್‌!

ನಾನಿನ್ನ ಬಿಡಲಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಮಾಳವಿಕ ತನ್ನ ಶಕ್ತಿ ಹೆಚ್ಚಿಸಿಕೊಳ್ಬೇಕು ಅಂತಾ ಮಾಯ ಶರತ್‌ ಮದುವೆ ಮಾಡಿಸಲು ಪ್ಲ್ಯಾನ್‌ ಮಾಡಿದ್ಲು.. ಆದ್ರೆ ಅಲ್ಲಾಗಿದ್ದು ಬೇರೆ.. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ಮಾತಿನಂತೆ.. ಶರತ್‌ ಮಾಯಾಗೆ ತಾಳಿ ಕಟ್ಟೋ ಬದಲು ದುರ್ಗಾಗೆ ತಾಳಿ ಕಟ್ಟಿದ್ದಾನೆ. ದೇವಿ ಸಮ್ಮುಖದಲ್ಲೇ ಈ ವಿವಾಹ ನೆರವೇರಿದೆ ಅನ್ನೋದೇ ವಿಶೇಷ. ಈ ಮದುವೆಯಿಂದಾಗಿ ಮಾಳವಿಕಾ ಒಂದ್ಕಡೆ ತನ್ನ ಶಕ್ತಿ ಕಳ್ಕೊಂಡಿದ್ರೆ, ಇತ್ತ ಮಾಯ ಆಟಕ್ಕೂ ಬ್ರೇಕ್‌ ಬಿದ್ದಿದೆ. ಇದೀಗ ದುರ್ಗಾ ಶರತ್‌ ಮನೆ ಸೇರಿದ್ದಾಳೆ. ಮನೆಗೆ ಕಾಲಿಡ್ತಿದ್ದಂತೆ ದುರ್ಗಾ ಮುಂದೆ ಮಹಾ ರಹಸ್ಯ ರಿವೀಲ್‌ ಆಗಿದೆ..

ಈ ಮದುವೆ ಬೆನ್ನಲ್ಲೇ ದುರ್ಗಾ ಹಾಗೂ ಶರತ್‌ ಫುಲ್‌ ಶಾಕ್‌ ಆಗಿದ್ದಾರೆ. ಶರತ್‌ ಗೆ ತಾನು ಹೇಗೆ ದುರ್ಗಾಗೆ ತಾಳಿಕಟ್ಟಿದೆ ಅನ್ನೋ ಪ್ರಶ್ನೆ ಕಾಡ್ತಿದ್ರೆ, ಇತ್ತ ದುರ್ಗಾ ತಾನು ಹೇಗೆ ಮಂಟಪಕ್ಕೆ ಬಂದೆ ಅನ್ನೋದು ಕಾಡ್ತಿದೆ. ಆದ್ರೆ ಶರತ್‌ ಮನೆಯವರು ದುರ್ಗಾಳನ್ನ ಸೊಸೆ ಅಂತ ಒಪ್ಪಿಕೊಂಡಿದ್ದಾರೆ.  ದುರ್ಗಾ ಮನೆಗೆ ಬರ್ತಿದ್ದಂತೆ ಶರತ್‌ ತಂದೆ ಅಂಬಿಕಾ ಬಗ್ಗೆ ತಿಳಿಸಿದ್ದಾರೆ. ಈಗ ನೀನು ಈ ಮನೆ ಸೊಸೆ. ಹೀಗಾಗಿ ನೀನು ಅಂಬಿಕಾ ಆಶಿರ್ವಾದ ಯಾವಾಗ್ಲೂ ನಿನಗೆ ಸಿಗ್ಬೇಕು ಅಂತಾ ಹೇಳಿದ್ದಾರೆ. ಬಳಿಕ ಶರತ್‌ ಬಂದು, ಅಂಬಿಕಾ ಫೋಟೋವನ್ನ ತೋರಿಸಿದ್ದಾನೆ. ಇವಳೇ ನನ್ನ ಅಂಬಿಕಾ ಅಂತಾ ಹೇಳಿದ್ದಾನೆ. ಅಂಬಿಕಾ ಫೋಟೋ ನೋಡ್ತಿದ್ದಂತೆ ದುರ್ಗಾ ಶಾಕ್‌ ಆಗಿದ್ದಾಳೆ. ಅಂಬಿಕಾ ಅವ್ರು ತೀರ್ಕೊಂಡಿದ್ದಾರಾ ಅಂತಾ ಹೇಳಿದ್ದಾಳೆ. ಬಳಿಕ ಅಂಬಿಕಾ ಜೊತೆ ಕಳೆದ ಕ್ಷಣವೆಲ್ಲಾ ದುರ್ಗಾ  ಕಣ್ಣಮುಂದೆ ಬಂದಿದೆ. ಹೀಗಾಗಿ ಆಕೆ ಅಲ್ಲೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಇದೀಗ ಇಷ್ಟು ದಿನ ತನ್ನ ಜೊತೆ ಇದ್ದ ದೇವಿನೇ ಅಂಬಿಕಾ ಅನ್ನೋ ಸತ್ಯ ದುರ್ಗಾಗೆ ಗೊತ್ತಾಗಿದೆ. ಈ ಸತ್ಯವನ್ನ ಶರತ್‌ ಬಳಿ  ಹೇಳ್ತಾಳಾ? ಅಂಬಿಕಾ, ದುರ್ಗಾ ಅಕ್ಕ ತಂಗಿ ಅನ್ನೋ ಸತ್ಯ ಗೊತ್ತಾಗುತ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಂದ್ವೇಳೆ. ಅಂಬಿಕಾ ಅಕ್ಕ ಅಂತಾ ಗೊತ್ತಾದ್ರೆ ದುರ್ಗಾ ಆಕೆ ಸಾವಿನ ರಹಸ್ಯ ಕಂಡು ಹಿಡಿಯೋದು ಪಕ್ಕಾ..

ಇನ್ನೊಂದ್ಕಡೆ ಹಿತಾ ಈ ಮದುವೆಯಿಂದಾಗಿ ಬೇಜಾರು ಮಾಡಿಕೊಂಡಿದ್ದಾಳೆ. ಇಷ್ಟು ದಿನ ದುರ್ಗಾಳನ್ನ ಪ್ರೀತಿಯಿಂದ ಮಾತಡಿಸ್ತಿದ್ರು. ಫ್ರೆಂಡ್‌ ಅಂತಾ ಅಂದ್ಕೊಂಡಿದ್ಲು. ಆದ್ರೀಗ ಶರತ್‌ ನ ಮದ್ವೆಯಾಗ್ತಿದ್ದಂತೆ ಹಿತಾ ದುರ್ಗಾಳನ್ನ ದ್ವೇಷ ಮಾಡೋದಿಕ್ಕೆ ಶುರುಮಾಡಿದ್ದಾಳೆ. ಮತ್ತೊಂದ್ಕಡೆ ಮಾಯಾ ಶರತ್‌ ತನ್ನಿಂದ ದೂರವಾದ ಅನ್ನೋ ಶಾಕ್‌ನಲ್ಲೇ ಇದ್ದಾಳೆ. ಇದೀಗ ಶರತ್‌ ನ ಪಡಿಬೇಕು ಅಂತಾ ಮತ್ತೆ ಶರತ್‌ ಮನೆಗೆ ಬರೋ ಸಾಧ್ಯತೆ ಇದೆ. ಮತ್ತೆ ಮನೆ ಸೆರ್ಕೊಂಡು ದುರ್ಗಾ, ಹಿತಾಳನ್ನ ಕೊಲ್ಲೋ ಪ್ಲ್ಯಾನ್‌ ಮಾಡೋ ಎಲ್ಲಾ ಸಾಧ್ಯತೆ ಇದೆ.  ಒಟ್ಟಾರೆ ಮುಂಬರುವ ಎಪಿಸೋಡ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿದೆ.

Shwetha M