ಬಿಗ್‌ ಬಾಸ್‌ ಹೊಸ ಮನೆ ಹೋಗಿದೆ ಗೊತ್ತಾ? – ಕೊನೆಗೂ ಗುಟ್ಟು ರಿವೀಲ್‌ ಮಾಡಿದ ಕಿಚ್ಚ ಸುದೀಪ್‌!

ಬಿಗ್‌ ಬಾಸ್‌ ಹೊಸ ಮನೆ ಹೋಗಿದೆ ಗೊತ್ತಾ? – ಕೊನೆಗೂ ಗುಟ್ಟು ರಿವೀಲ್‌ ಮಾಡಿದ ಕಿಚ್ಚ ಸುದೀಪ್‌!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಸೆಪ್ಟೆಂಬರ್‌ 28 ಗ್ರ್ಯಾಂಡ್‌ ಲಾಂಚ್‌ ಆಗಲಿದೆ. ಈಗಾಗಲೇ ದೊಡ್ಮನೆಗೆ ಯಾರೆಲ್ಲಾ ಸ್ಪರ್ಧಿಗಳಾಗಿ ಬರಬಹುದು ಎಂಬ ಚರ್ಚೆ ಶುರುವಾಗಿದೆ. ಕೆಲ ಹೆಸರುಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇವೆಲ್ಲದ್ರ ಮಧ್ಯೆ ಬಿಗ್‌ ಬಾಸ್‌ ಮನೆ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಎಲ್ಲರನ್ನ ಕಾಡ್ತಿದೆ. ಇದೀಗ ಕಿಚ್ಚ ಸುದೀಪ್‌ ಈ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಬಿಗ್ ಲಾಸ್ – ಸೂರ್ವವಂಶಿ ಸಿನಿಮಾ ಖ್ಯಾತಿಯ ಆಶಿಶ್ ವಾರಂಗ್ ನಿಧನ

ಪ್ರತಿ ಬಾರಿಯೂ ಬಿಗ್‌ ಬಾಸ್‌ ಮನೆಯನ್ನು ವಿಭಿನ್ನ ಥೀಮ್ ಮೇಲೆ ನಿರ್ಮಾಣ ಮಾಡಲಾಗುತ್ತದೆ. ಈ ಮೊದಲು ಬಿಗ್ ಬಾಸ್ ಮನೆ ಇನೋವೇಟಿವ್ ಫಿಲ್ಮ್​ ಸಿಟಿಯಲ್ಲಿ ಇತ್ತು. ಆ ಬಳಿಕ ಬೆಂಗಳೂರು ಹೊರವಲಯದಲ್ಲಿ ಪ್ರತ್ಯೇಕ ಜಾಗ ಪಡೆದು ಅಲ್ಲಿ ದೊಡ್ಡದಾದ ಮನೆ ನಿರ್ಮಾಣ ಮಾಡಲಾಯಿತು. ಆದರೆ, ಕಳೆದ ಬಾರಿ ಕೆಲವರು ಈ ಮನೆಯ ವಿಚಾರಕ್ಕೆ ಅಪಸ್ವರವಿತ್ತು. ಕಾನೂನು ಸಂಕಷ್ಟ ಕೂಡ ಎದುರಾಗಿತ್ತು. ಹೀಗಾಗಿ ಈ ಬಾರಿ ತುಂಬಾ ಎಚ್ಚರಿಕೆಯಿಂದ ಮನೆ ನಿರ್ಮಾಣ ಮಾಡಲಾಗಿದೆ. ಇನೋವೇಟಿವ್ ಫಿಲ್ಮ್​ ಸಿಟಿಯಲ್ಲೇ ಮತ್ತೆ ಮನೆ ನಿರ್ಮಾಣ ಆಗಿದೆ.

ಹೊಸ ಬಿಗ್‌ ಬಾಸ್‌ ಮನೆಯ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಈ ಬಾರಿಯ ಮನೆ ದೊಡ್ಡದಾಗಿ ಹಾಗೂ ಭಿನ್ನ ರೀತಿಯಲ್ಲಿ ಇರಲಿದೆಯಂತೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಹಿಂಟ್ ಕೊಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕಿಚ್ಚ ಪೋಸ್ಟ್‌ ಹಾಕಿದ್ದಾರೆ.

ಪ್ರೋಮೋ ವಿಷಯದಲ್ಲಿ ಬಿಗ್ ಬಾಸ್ ತಂಡ ನಿಜಕ್ಕೂ ತನ್ನ ಸೃಜನಶೀಲತೆಯನ್ನು ತೋರಿಸಿದೆ. ಬಿಡುಗಡೆಯಾಗಲಿರುವ ಎರಡನೇ ಪ್ರೋಮೋ ಇನ್ನೂ ಉತ್ತಮವಾಗಿದೆ. ಈ ಬಾರಿ ದೊಡ್ಡ ಮತ್ತು ಉತ್ತಮ ವೇದಿಕೆ, ಮತ್ತು ಹೆಚ್ಚು ಬೆಚ್ಚಗಿನ ಮತ್ತು ಪ್ರಕಾಶಮಾನವಾದ ಬಿಗ್ ಬಾಸ್ ಮನೆ. ಈ ಸೀಸನ್​ನಲ್ಲಿ ಬಹಳ ವಿಷಯಗಳಿವೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸೆಪ್ಟೆಂಬರ್ 28ರಿಂದ ಬಿಗ್ ಬಾಸ್ 12 ಆರಂಭ ಆಗುತ್ತಿದೆ.

Shwetha M