PAK ವಿರುದ್ಧ ಮಂಕಾದ ಸೂರ್ಯ ಕುಮಾರ್ ಯಾದವ್ – ಕ್ಯಾಪ್ಟನ್ಸಿ & ಪ್ಲೇಯರ್ ಪ್ರೆಶರ್ ಗೆಲ್ತಾರಾ?
ಏಷ್ಯಾಕಪ್ ನಲ್ಲಿ ಹೇಗಿದೆ SKY ಜರ್ನಿ?

ಸೆಪ್ಟೆಂಬರ್ 9 ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, 17 ನೇ ಆವೃತ್ತಿಯಯಲ್ಲಿ ಒಟ್ಟು ಎಂಟು ತಂಡಗಳು ಪರಸ್ಪರ ಸೆಣಸಾಟ ನಡೆಸಲಿವೆ. ಭಾರತವು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದ್ದು, ಗ್ರೂಪ್ ಹಂತದಲ್ಲಿ ಓಮನ್, ಯುಎಇ ಮತ್ತು ಪಾಕಿಸ್ತಾನವನ್ನು ಎದುರಿಸಲಿದೆ. ಇದಲ್ಲದೆ, ಅಗ್ರ ಎರಡು ತಂಡಗಳು ಸೂಪರ್ ಸ್ಟೇಜ್ಗೆ ಅರ್ಹತೆ ಪಡೆದು ನಂತರ ಫೈನಲ್‌ಗೆ ಮುಂದುವರಿಯುತ್ತವೆ. ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಸಲವೂ ಕಪ್ ಗೆಲ್ಬೇಕು ಅಂದ್ರೆ ಪ್ರತಿಯೊಬ್ಬರೂ ಕೂಡ ಬೆಸ್ಟ್ ಪರ್ಫಾಮೆನ್ಸ್ ಕೊಡ್ಬೇಕು. ಅದ್ರಲ್ಲೂ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಎಲ್ರಿಗಿಂತ ಒಂದು ಕೈ ಜಾಸ್ತಿ ಅನ್ನುವಂತೆ ಇರ್ಬೇಕು.
ಇದನ್ನೂ ಓದಿ : ಪಾಂಡ್ಯ ಪವರ್ ಗೆ ಪತರಗುಟ್ಟಿದ್ದ ಪಾಕಿಸ್ತಾನ – ಬ್ಯಾಟಿಂಗ್ & ಬೌಲಿಂಗ್ ಸ್ಟ್ರೆಂಥ್ ಸೂಪರ್
ಭಾರತದ ಟಿ-20ಐ ಕ್ಯಾಪ್ಟನ್ ಆಗಿರೋ ಸೂರ್ಯ ಏಷ್ಯಾಕಪ್ನಲ್ಲಿ ಪಾಕಿಸ್ತಾನದ ವಿರುದ್ಧ 5 ಟಿ-20ಐ ಪಂದ್ಯಗಳನ್ನ ಆಡಿದ್ದಾರೆ. ಆದ್ರೆ ಹೇಳಿಕೊಳ್ಳುವಂತ ಪ್ರದರ್ಶನ ಬಂದಿಲ್ಲ. ಮೆನ್ ಇನ್ ಗ್ರೀನ್ ಜೆರ್ಸಿ ಆಟಗಾರರ ವಿರುದ್ಧ ಕಳಪೆ ರೆಕಾರ್ಡ್ಸ್ ಹೊಂದಿದ್ದಾರೆ. ಸೂರ್ಯ ಐದು ಇನ್ನಿಂಗ್ಸ್‌ಗಳಲ್ಲಿ 12.50 ಸರಾಸರಿಯಲ್ಲಿ 64 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ವಿರುದ್ಧ ಅವರ ಗರಿಷ್ಠ ಸ್ಕೋರ್ ಕೇವಲ 18, ಮತ್ತು ಅವರು 30 ರನ್‌ಗಳ ಸಂಖ್ಯೆಯನ್ನು ದಾಟಲು ಸಾಧ್ಯವಾಗಿಲ್ಲ. ಆದ್ರೆ ಶ್ರೀಲಂಕಾ ವಿರುದ್ಧ ಮಾತ್ರ ಒಳ್ಳೆ ಸ್ಕೋರ್ ಮಾಡಿದ್ದಾರೆ. ಐಲ್ಯಾಂಡ್ ನೇಷನ್ ವಿರುದ್ಧ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. SKY ಶ್ರೀಲಂಕಾ ವಿರುದ್ಧ ಎಂಟು T20I ಗಳನ್ನು ಆಡಿದ್ದಾರೆ ಮತ್ತು 346 ರನ್‌ಗಳನ್ನು ಗಳಿಸಿದ್ದಾರೆ, ಸರಾಸರಿ 49.58. ಮೂರು ಅರ್ಧಶತಕಗಳು ಮತ್ತು 112 ರನ್‌ಗಳ ಒಂದು ಶತಕವನ್ನು ಗಳಿಸಿದ್ದಾರೆ. ಇತರೆ ಯಾವುದೇ ರಾಷ್ಟ್ರಕ್ಕಿಂತ ಅತ್ಯಧಿಕ ಸರಾಸರಿ ಹೊಂದಿದ್ದಾರೆ. ಇನ್ನು ಬಾಂಗ್ಲಾದೇಶದ ವಿರುದ್ಧದ ರೆಕಾರ್ಡ್ಸ್ ನೋಡಿದ್ರೆ ಓಕೆ ಓಕೆ ಪ್ರದರ್ಶನ ನೀಡಿದ್ದಾರೆ. ಐದು ಪಂದ್ಯಗಳ ಐದು ಇನ್ನಿಂಗ್ಸ್‌ಗಳಲ್ಲಿ 148 ರನ್ ಗಳಿಸಿದ್ದಾರೆ. ಸರಾಸರಿ 29.60. ಒಂದೇ ಒಂದು ಸಲ ಐವತ್ತಕ್ಕೂ ಹೆಚ್ಚು ರನ್ ಗಳಿಸಿದ್ದು ಇದರಲ್ಲಿ 77 ರನ್‌ಗಳ ಅತ್ಯುತ್ತಮ ಸ್ಕೋರ್ ಸೇರಿದೆ. ಇನ್ನು ಹಾಂಗ್ ಕಾಂಗ್ ವಿರುದ್ಧ SKY ದಾಖಲೆ ನೋಡೋದಾದ್ರೆ ಸೂರ್ಯ ಹಾಂಗ್ ಕಾಂಗ್ ವಿರುದ್ಧ ಎರಡನೇ ಬಾರಿಗೆ ಕಾಣಿಸಿಕೊಳ್ಳಲಿದ್ದಾರೆ, ಏಕೆಂದರೆ ಬಲಗೈ ಬ್ಯಾಟ್ಸ್‌ಮನ್ ಹೊಸ ತಂಡದ ವಿರುದ್ಧ ಒಂದೇ ಒಂದು ಪಂದ್ಯವನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ಅಜೇಯ 68 ರನ್ ಗಳಿಸಿ ಶೈನ್ ಆಗಿದ್ರು. ಇನ್ನು ಅಫ್ಘಾನಿಸ್ತಾನ ವಿರುದ್ಧದ ದಾಖಲೆ ನೋಡಿದ್ರೆ ಮೂರು T20I ಗಳಿಂದ 59 ರನ್ ಗಳಿಸಿದ್ದಾರೆ. ಒಂದೇ ಪಂದ್ಯದಲ್ಲಿ 53 ರನ್‌ಗಳ ಇನ್ನಿಂಗ್ಸ್ ಆಗಿತ್ತು. ಆದ್ರೆ ಉಳಿದ ಎರಡು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾದರು.
ಹೀಗೆ ಐದು ರಾಷ್ಟ್ರಗಳ ವಿರುದ್ಧದ ಪಂದ್ಯಗಳಲ್ಲಿ ಸೂರ್ಯ ಸಾಕಷ್ಟು ಏರಿಳಿತಗಳನ್ನ ಕಂಡಿದ್ದಾರೆ. ಆದ್ರೆ ಏಷ್ಯಾಕಪ್ನಲ್ಲಿ ಇದುವರೆಗೆ ಯುಎಇ ಅಥವಾ ಒಮಾನ್ ವಿರುದ್ಧ ಯಾವುದೇ ಪಂದ್ಯವನ್ನು ಆಡಿಲ್ಲ. ಬಟ್ ಹಿಂದಿನ ಸೀಸನ್ಗಳಿಗೂ ಈ ಸೀಸನ್ಗೂ ಸೂರ್ಯನ ರೋಲ್ ಡಿಫ್ರೆಂಟ್ ಆಗಿದೆ. ಲಾಸ್ಟ್ ಸೀಸನ್ಗಳಲ್ಲಿ ಆಟಗಾರನಾಗಿ ಮಾತ್ರವೇ ಕಣಕ್ಕಿಳೀತಾ ಇದ್ರು. ಈ ಸಲ ಕ್ಯಾಪ್ಟನ್ ಆಗಿರೋದ್ರಿಂದ ಜವಾಬ್ದಾರಿ ಜಾಸ್ತಿನೇ ಇರುತ್ತೆ.

ನೋಡಿರಿ

