ಹಾರ್ದಿಕ್ ಪಾಂಡ್ಯ ಹಾಲಿವುಡ್ ಹೀರೋ ಸ್ಟೈಲ್ ಲುಕ್ – ಏಷ್ಯಾಕಪ್ ಟೂರ್ನಿಗೂ ಮುನ್ನ ಪಾಂಡ್ಯ ಬಿಂದಾಸ್

ಹಾರ್ದಿಕ್ ಪಾಂಡ್ಯ ಹಾಲಿವುಡ್ ಹೀರೋ ಸ್ಟೈಲ್ ಲುಕ್ – ಏಷ್ಯಾಕಪ್ ಟೂರ್ನಿಗೂ ಮುನ್ನ ಪಾಂಡ್ಯ ಬಿಂದಾಸ್

ಏಷ್ಯಾಕಪ್ ಆಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಇದರ ಮಧ್ಯೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಲಿವುಡ್ ಹೀರೋ ರೀತಿ ಶೈನ್ ಆಗಿದ್ದಾರೆ. ಹೊಸ ಹೇರ್‌ಸ್ಟೈಲ್‌ನೊಂದಿಗೆ ಬಿಂದಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮಹಾರಾಜ ಬಾಯ್ಸ್ ಮೇಲೆ RCB ಕಣ್ಣು – ಬೆಸ್ಟ್ ಬೌಲರ್ಸ್ & ಬ್ಯಾಟರ್ಸ್ ಯಾರೆಲ್ಲಾ?

ಏಷ್ಯಾಕಪ್ 2025 ಕ್ಕೆ ಭಾರತ ತಂಡ ಇನ್ನೇನು ಪ್ರಾಕ್ಟೀಸ್ ಸೆಷನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಅಭ್ಯಾಸದ ಜೊತೆಗೆ ತಮ್ಮ ಲುಕ್ ಮೂಲಕ ಮಿಂಚುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಹೊಸ ಹೇರ್ ಕಟ್ ಮತ್ತು ಕಲರ್ ಮಾಡಿಸಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೊಸ ಗೆಟಪ್ ನಲ್ಲಿ ಹಾರ್ದಿಕ್ ಪಾಂಡ್ಯ ಹಾಲಿವುಡ್ ಸ್ಟಾರ್ ಥರ ಕಾಣ್ತಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಹೊಸ ಗೆಟಪ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಹೊಸ ನಾನು” ಎಂದು ಬರೆದುಕೊಂಡಿದ್ದಾರೆ. ಬ್ಲಾಂಡ್ ಕಲರ್ ಕೂದಲು ಮತ್ತು ಕಪ್ಪು ಗಡ್ಡದ  ಈ ಲುಕ್ ಗೆ 9 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಲುಕ್ ಗೆ ಫ್ಯಾನ್ಸ್ ಫಿದಾ ಹಾರ್ದಿಕ್ ಫೋಟೋಗಳಿಗೆ ಫ್ಯಾನ್ಸ್ ಲವ್ ಇಮೋಜಿ ಹಾಕ್ತಿದ್ದಾರೆ. ಸ್ಟೈಲ್ ಸೂಪರ್ ಅಂತ ಕಮೆಂಟ್ ಮಾಡ್ತಿದ್ದಾರೆ.

ಭಾರತ ತಂಡದ ಸ್ಟೈಲಿಶ್ ಆಟಗಾರರಲ್ಲಿ ಹಾರ್ದಿಕ್ ಒಬ್ಬರು. ಈ ಬಾರಿ ಹೊಸ ಟ್ರೆಂಡಿ ಹೇರ್ ಕಲರ್ ಮಾಡಿಸಿದ್ದಾರೆ. ಏಷ್ಯಾಕಪ್ ನಲ್ಲಿ ಈ ಹೇರ್ ಸ್ಟೈಲ್ ನಲ್ಲಿ ಅವರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಸೆಪ್ಟೆಂಬರ್ 9 ರಿಂದ ದುಬೈನಲ್ಲಿ ಏಷ್ಯಾಕಪ್ ಶುರುವಾಗಲಿದೆ. ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ಮೊದಲ ಪ್ರಾಕ್ಟೀಸ್ ಸೆಷನ್‌ನಲ್ಲಿ ಪಾಂಡ್ಯ ಪಾಲ್ಗೊಳ್ಳುತ್ತಿದ್ದಾರೆ.

Sulekha