ಕೆಂಪು ಶ್ರೀಗಂಧದ ಮರ ಎಂದು ರೈತನಿಗೆ 1 ಕೋಟಿ ಪರಿಹಾರ ಕೊಟ್ಟ ರೈಲ್ವೇ ಇಲಾಖೆ! – ಅಸಲಿ ಬೆಲೆ ಕೇಳಿ ಅಧಿಕಾರಿಗಳೇ ಶಾಕ್!‌

ಕೆಂಪು ಶ್ರೀಗಂಧದ ಮರ ಎಂದು ರೈತನಿಗೆ 1 ಕೋಟಿ ಪರಿಹಾರ ಕೊಟ್ಟ ರೈಲ್ವೇ ಇಲಾಖೆ! – ಅಸಲಿ ಬೆಲೆ ಕೇಳಿ ಅಧಿಕಾರಿಗಳೇ ಶಾಕ್!‌

ರಸ್ತೆ ನಿರ್ಮಾಣ, ರೈಲು ಮಾರ್ಗ ನಿರ್ಮಾಣ ಮಾಗುವಾಗ ಸಾಕಷ್ಟು ಮರ, ಗಿಡಗಳನ್ನ ಕಡಿಯಲಾಗುತ್ತೆ. ಇನ್ನು ಕೃಷಿ ಭೂಮಿಯನ್ನ ಕೂಡ ಸ್ವಾಧೀನ ಮಾಡಿಕೊಳ್ಳಲಾಗುತ್ತೆ. ಈ ವೇಳೆ ರೈತರಿಗೆ ಒಂದಷ್ಟು ಪರಿಹಾರ ಕೂಡ ನೀಡಲಾಗುತ್ತೆ. ಇದೀಗ ರೈಲ್ವೇ ಇಲಾಖೆ ಮಹಾರಾಷ್ಟ್ರದಲ್ಲಿ ರೈತನೊಬ್ಬ ಬೆಳೆದ ಒಂದು ಮರಕ್ಕೆ ಪರಿಹಾರ ಕೊಡಲು ಹೋಗಿ ಸರಿಯಾಗೆ ಬಕ್ರಾ ಆಗಿದೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಅಬ್ಬರ –  ದೆಹಲಿಯಲ್ಲಿ ಅಪಾಯ ಮಟ್ಟ ಮೀರಿದ ಯಮುನಾ ನದಿ.. ಸಚಿವಾಲಯಕ್ಕೂ ನುಗ್ಗಿದ ನೀರು!

ಈ ಘಟನೆ ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ನಡೆದಿದೆ. ವಾರ್ಧಾ-ಯವತ್ಮಲ್-ಪುಸಾದ್-ನಾಂದೇಡ್ ರೈಲ್ವೆ ಯೋಜನೆಗಾಗಿ ಖರ್ಶಿ ಗ್ರಾಮದ ಕೇಶವ್ ತುಕಾರಾಮ್ ಶಿಂಧೆ ಅನ್ನೋರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹೀಗಾಗಿ 2018ರಲ್ಲಿ ಭೂಮಿಗೆ ಪರಿಹಾರ ನೀಡಲಾಯಿತು. ಆದರೆ ಮರಗಳು ಮತ್ತು ಇತರ ಆಸ್ತಿಗಳಿಗೆ ಪರಿಹಾರ ನೀಡೋದು ವಿಳಂಬವಾಗಿತ್ತು. ಹೀಗಾಗಿ ರೈತ ಕುಟುಂಬ ಸೂಕ್ತ ಪರಿಹಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿತ್ತು. ಅಲ್ಲಿದ್ದ ಮರ ಬೆಲೆಬಾಳುವ ರಕ್ತ ಚಂದನ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಈ ಆಧಾರದ ಮೇಲೆ, ಹೈಕೋರ್ಟ್ ರೈಲ್ವೆ ಇಲಾಖೆಗೆ ಮಧ್ಯಂತರ ಪರಿಹಾರವಾಗಿ 1 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿತು. ಹೈಕೋರ್ಟ್‌ ತೀರ್ಪು ಬೆನ್ನಲ್ಲೇ ರೈಲ್ವೇ ಇಲಾಖೆ ರೈತನಿಗೆ 1 ಕೋಟಿ ಪರಿಹಾರ ನೀಡಿತ್ತು.. ಆದ್ರೀಗ ಆ ಮರದ ಅಸಲಿಯತ್ತು ಬಯಲಾಗಿದೆ. ಮರದ ಬೆಲೆ ಕೇಳಿ ಅಧಿಕಾರಿಗಳು ಶಾಕ್‌ ಆಗಿದ್ದಾರೆ.

ಹೌದು.. ರೈತನ ಜಮೀನಿನಲ್ಲಿಇದ್ದ ಮರವನ್ನ ಆರಂಭದಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಕೆಂಪು ಶ್ರೀಗಂಧದ ಮರವೆಂದು ನೋಂದಾಯಿಸಲಾಗಿತ್ತು. ಈಗ ಅದರ ನಿಜವಾದ ಮೌಲ್ಯ ಗೊತ್ತಾಗಿ ಬೆಚ್ಚಿ ಬೀಳುವಂತಾಗಿದೆ. ಈ ಮರದ  ಮೌಲ್ಯ ಕೇವಲ 10,981 ರೂಪಾಯಿ ಅನ್ನೋದು ಗೊತ್ತಾಗಿದೆ. ಇದೀಗ ರೈಲ್ವೇ ಇಲಾಖೆ ರೈತನಿಗೆ ಪಾವತಿಸಿದ ಹೆಚ್ಚುವರಿ ಹಣ ಮರುಪಾವತಿಸುವಂತೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಮೆಟ್ಟಿಲೇರಿದೆ.

ಸತ್ಯ ಹೊರ ಬಂದಿದ್ದು ಹೇಗೆ..?

ಕೆಲವು ದಿನಗಳ ಹಿಂದೆ, ಪುಸಾದ್ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಬೆಂಗಳೂರಿನ ಇನ್​​ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಯನ್ನು ಮರದ ಮೇಲೆ ವೈಜ್ಞಾನಿಕ ಪರೀಕ್ಷೆ ನಡೆಸುವಂತೆ ಕೇಳಿಕೊಂಡರು. ಪರೀಕ್ಷೆಯಲ್ಲಿ ಆ ಮರವು ಬಿಜಸಲ್ (ಪ್ಟೆರೊಕಾರ್ಪಸ್ ಮಾರ್ಸುಪಿಯಂ) ಅನ್ನೋದು ದೃಢವಾಯಿತು. ಬಿಜಸಲ್ ಒಂದು ಸಾಮಾನ್ಯ ಮರವಾಗಿದೆ. ಅದರ ಮೌಲ್ಯ ಕೇವಲ 10,981 ರೂಪಾಯಿ. ಈ ಕಾರಣದಿಂದಾಗಿ ರೈಲ್ವೆ ಅಧಿಕಾರಿಗಳು 1 ಕೋಟಿ ರೂಪಾಯಿ ಹಿಂದಿರುಗಿಸುವಂತೆ ಕೊರಿ ಕೋರ್ಟ್​ ಮೊರೆ ಹೋಗಿದ್ದಾರೆ.

Shwetha M