ಡೆವಿಲ್, ಮಾರ್ಕ್, 45 ಒಟ್ಟಿಗೆ ರಿಲೀಸ್ ಯಾಕೆ? ಸೋಲಿನ ಭಯ.. ಹಿಂದೆ ಹೆಜ್ಜೆ ಇಟ್ರಾ?
ಸ್ಯಾಂಡಲ್ವುಡ್ಗೆ BIG ಲಾಸ್!

ದರ್ಶನ್ ಅಭಿನಯದ ಡೆವಿಲ್ ಡೆಸೆಂಬರ್ 12ಕ್ಕೆ ರಿಲೀಸ್ ಆದ್ರೆ 12 ದಿನ ಬಿಟ್ಟು ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಡಿಸೆಂಬರ್ 25ಕ್ಕೆ ರಿಲೀಸ್ ಆಗ್ತಿದೆ. ಅವತ್ತೇ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ 45 ಸಿನಿಮಾ ಕೂಡ ರಿಲೀಸ್ ಆಗ್ತಿದೆ.. ನೋಡಿ ಇವೆಲ್ಲಾ ಕೂಡ ಬಿಗ್ ಸ್ಟಾರ್‌ಗಳ ಸಿನಿಮಾವೇ.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್‌ಗಳನ್ನ ಹೊಂದಿರೋ ಈ ಸ್ಟಾರ್ ನಟರ 3 ಸಿನಿಮಾ ಒಂದೇ ಟೈಂನಲ್ಲಿ ರಿಲೀಸ್ ಆಗ್ತಿದೆ. ಇದು ಎಲ್ಲೋ ಒಂದ್ಕಡೆ ಸ್ಟಾರ್ ವಾರ್ ರೀತಿಯ ವಾತವರ್ಣವನ್ನ ಹುಟ್ಟು ಹಾಕುತ್ತದೆ ಅಂತನೇ ಹೇಳಬಹುದು.. ಊಟದ ಎಲೆ ಮೇಲೆ ರುಚಿ ರುಚಿದ ತನಿಸುಗಳನ್ನ ಒಂದೇ ಸಲ ಹಾಕಿದ್ರೆ ಹೇಗೆ ತಿನ್ನೋಕೆ ಆಗಲ್ವೋ.. ಹಾಗೇ ಬಿಗ್ ಸ್ಟಾರ್‌ಗಳ ಸಿನಿಮಾ ಒಟ್ಟಿಗೆ ರಿಲೀಸ್ ಆದ್ರೆ ಪ್ರೇಕ್ಷಕನಿಗೂ ನೋಡೋಕೆ ಆಗಲ್ಲ.. ಯಾರ ಸಿನಿಮಾ ನೋಡಬೇಕು.. ಯಾರ ಸಿನಿಮಾ ಬಿಡಬೇಕು ಅಂತ ಪ್ರೇಕ್ಷಕರು ಕನ್ಫ್ಯೂಸ್ ಆಗೋದು ಪಕ್ಕಾ.. ಅವರವರ ಫ್ಯಾನ್ಸ್ ಅವರ ಮೆಚ್ಚಿನ ನಟನ ಸಿನಿಮಾ ನೋಡಿದ್ರೂ, ಒದಷ್ಟು ಫ್ಯಾನ್ಸ್‌ಗೆ ಗೊಂದಲ ಆಗುವುದು ಪಕ್ಕಾ. ಈ ಮೂರು ಸಿನಿಮಾ ಬೇರೆ ಬೇರೆ ಟೈಂನಲ್ಲಿ ಬಂದಿದ್ರೆ ಸಿನಿಮಾಗಳಿಗೂ ಪ್ಲೇಸ್ ಆಗ್ತಾ ಇತ್ತು. ಬಟ್ ಯಾಕೋ 3 ಸಿನಿಮಾ ಕೂಡ ಮಾತುಕತೆ ನಡೆಸಿದ ಮುಂದಾಲೋಚನೆ ಇಲ್ಲದೇ ರಿಲೀಸ್ ಮಾಡ್ತಿವೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

ಇಲ್ಲಿ ಸತತ ಎರಡನೇ ವರ್ಷವೂ ಸುದೀಪ್ ಸಿನಿಮಾ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುತ್ತಿದೆ. 2024 ರ ಡಿಸೆಂಬರ್ 25ಕ್ಕೆ ಮ್ಯಾಕ್ಸ್ ರಿಲೀಸ್ ಆಗಿತ್ತು. ಅದರಂತೆ ಒಂದು ವರ್ಷದ ನಂತ್ರ ಸುದೀಪ್ ರ ಮಾರ್ಕ್ ಅದೇ ಡೇಟ್‌ಗೆ ರಿಲೀಸ್ ಆಗ್ತಿದೆ.. ಇವರು ಮೊದಲೇ ಪ್ಲ್ಯಾನ್ ಮಾಡಿದ್ರು. ಇನ್ನೂ ಅವತ್ತೇ ಶಿವಣ್ಣ, ಉಪೇಂದ್ರ ಹಾಗೂ ರಾಜ್‌ಬಿ ಶೆಟ್ಟಿ ಅಭಿನಯರ 45 ರಿಲೀಸ್ ಆಗ್ತಿದೆ. ಇದು ಬಿಗ್ ಸ್ಟಾರ್‌ಗಳೇ ಸಿನಿಮಾ ಆಗಿದ್ದು.. ಆಗಸ್ಟ್ 15ಕ್ಕೆ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದ್ರೆ CG ಕೆಲಸ ಮತ್ತು ಪೋಸ್ಟ್ ಪ್ರೊಡಕ್ಷನ್ ಲೇಟ್ ಆಗಿರೋದ್ರಿಂದ ಡಿಸೆಂಬರ್ 25ಕ್ಕೆ ರಿಲೀಸ್ ಮಾಡೇಕೆ ಡೇಟ್ ಅನೌನ್ಸ್ ಮಾಡಿದೆ. ಆದ್ರೆ ಈ ದಿನವೇ ಮಾರ್ಕ್ ರಿಲೀಸ್ ಆಗ್ತಾ ಇರೋದು 45 ಸಿನಿಮಾಕ್ಕೆ ಹೊಡೆತ ಅಂತ ಹೇಳಲಾಗ್ತಿದೆ. ಸುದೀಪ್ ಈಗಾಗಲೇ ನಾವು ಡೇಟ್ ಚೇಂಜ್ ಮಾಡಲ್ಲ.. ನಾವು ಮೊದ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ವಿ.. ಒಂದೇ ದಿನ 4 ಶೋ ಇರುತ್ತೆ.. ಪ್ರೇಕ್ಷಕರು ಬೇರೆ ಬೇರೆ ಸಿನಿಮಾ ನೋಡ್ತಾರೆ.. ತುಂಬಾ ಥಿಯೇಟರ್ ಕೂಡ ಇವೆ. ನಾವು ಹಿಂದೆ ಸರಿಯಲ್ಲ ಅಂತ ಹೇಳಿದ್ದಾರೆ. ಈ ಎರಡು ಸಿನಿಮಾ ರಿಲೀಸ್‌ಗೂ ಮುಂಚೆ ಅಂದ್ರೆ ಡಿಸೆಂಬರ್ 12ಕ್ಕೆ ಡೆವಿಲ್ ರಿಲೀಸ್ ಆಗಿರುತ್ತೆ. ಇದು ಬಿಗ್ ಹಿಟ್ ಕೊಡುವ ಸಿನಿಮಾ ಅಂತಾನೆ ಹೇಳಬಹುದು. ಯಾಕಂದ್ರೆ ದರ್ಶನ್ ಜೈಲಿನಲ್ಲಿದ್ದಾರೆ. ಅವರಿಗೆ ಕರ್ನಾಟದ ತುಂಬೆಲ್ಲಾ ಫ್ಯಾನ್ಸ್ ಇದ್ದಾರೆ. ಜೊತೆಗೆ ದರ್ಶನ್ 2011 ರಲ್ಲಿ ಜೈಲಿಗೆ ಹೋದಾಗ ಸಾರಥಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದೇ ರೀತಿ ಡೆವಿಲ್ ಸಿನಿಮಾ ಕೂಡ ಹಿಟ್ ಆಗುತ್ತೆ ಅನ್ನೋ ಭರವಸೆ ಹೆಚ್ಚಿದೆ. ಈ ಸಿನಿಮಾ 12 ದಿನದ ತನಕ ಹವಾ ಇಟ್ಕೊಂಡ್ರು, ಆಮೇಲೆ ಎರಡು ಸಿನಿಮಾ ಬಂದ ಮೇಲೆ ಯಾವ ಸಿನಿಮಾದ ಹವಾ ಜಾಸ್ತಿ ಆಗುತ್ತೆ ಅನ್ನೋ ಕುತೂಹಲ ಫ್ಯಾನ್ಸ್‌ಗೂ ಇದೆ.
ಇನ್ನು ಡಿಸೆಂಬರ್‌ನಲ್ಲೇ ಯಾಕೆ ದೊಡ್ಡ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತೆ ಅಂದ್ರೆ ಈ ಟೈಂನಲ್ಲಿ ಕ್ರಿಸ್‌ಮಸ್ ರಜೆ ಇರುತ್ತೆ. ಶಾಲಾ ಕಾಲೇಜುಗಳಿಗೆ ಆಫೀಸ್‌ಗಳಿಗೆ ರಜೆ ಇರುತ್ತೆ.. ಹೀಗಾಗಿ ಈ ಟೈಂನಲ್ಲಿ ಸಿನಿಮಾ ರಿಲೀಸ್ ಆಗ್ತಾವೆ. ಈ ಟೈಂ ಬಿಟ್ರೆ ಮತ್ತೆ 3-4 ತಿಂಗಳು ಕಾಯಬೇಕಾಗುತ್ತೆ.. ಹೀಗಾಗಿ ಕನ್ನಡದ ಸ್ಟಾರ್ ಸಿನಿಮಾಗಳಾದ ಮಾರ್ಕ್ ,ಡೆವಿಲ್ , 45 ಒಂದೇ ಟೈಂನಲ್ಲಿ ರಿಲೀಸ್ ಆಗ್ತಿವೆ. 3 ರಲ್ಲಿ ಯಾವ ಸಿನಿಮಾ ರೇಸ್‌ನಿಂದ ಹಿಂದೆ ಸರಿಯುತ್ತೆ? ಅಥವಾ 3 ಸಿನಿಮಾ ಕೂಡ ತಾವು ಅಂದುಕೊಂಡಂತೆ ರಿಲೀಸ್ ಮಾಡ್ತಾವ ಅನ್ನೋದ್ದನ್ನ ಕಾದು ನೋಡಬೇಕಿದೆ.

ನೋಡಿರಿ

