8 ದಿನಗಳ ಕಾಲ ದಸರಾ ಯುವ ಸಂಭ್ರಮ – ದೊಡ್ಮನೆ ಯುವರಾಜನಿಂದ ಉದ್ಘಾಟನೆ

ಮೈಸೂರು ದಸರಾ ಈ ಬಾರಿ ಮತ್ತಷ್ಟು ಸುಂದರವಾಗಲಿದೆ. ದಸರಾ ಮಹೋತ್ಸವದ ಸಾಂಸ್ಕೃತಿಕ ರಂಗನ್ನು ಹೆಚ್ಚು ಮಾಡುವ ಯುವ ಸಂಭ್ರಮಕ್ಕೆ ಸಿದ್ಧತೆ ಜೋರಾಗಿ ಸಾಗಿದೆ. ಯುವ ಸಂಭ್ರಮದ ಸಂಭ್ರಮವನ್ನು ಹೆಚ್ಚಿಸುವುದಕ್ಕೆ ಈ ಬಾರಿ 14 ವಿಶಿಷ್ಟ ವಸ್ತು ವಿಷಯಗಳ ಅಡಿಯಲ್ಲಿ ರಾಜ್ಯದ ವಿವಿಧ ಕಾಲೇಜಿನ 450 ರಿಂದ 500 ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ:ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಮೈಸೂರು ಪೇಟ ತೊಡಿಸಿ ಅಧಿಕೃತವಾಗಿ ಆಮಂತ್ರಣ
ಯುವ ಸಂಭ್ರಮ ಉದ್ಘಾಟನೆಗೆ ನಟ ಯುವ ರಾಜಕುಮಾರ್ ಮತ್ತು ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಆಹ್ವಾನ ನೀಡಲಾಗಿದೆ. ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 17 ರವರೆಗೆ 8 ದಿನಗಳ ಕಾಲ ಯುವ ಸಂಭ್ರಮ ನಡೆಯಲಿದೆ. ಸಂಜೆ 5 ರಿಂದ ರಾತ್ರಿ 10 ರವರೆಗೆ ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕರ್ನಾಟಕ ಜನಪದ ವೈವಿಧ್ಯತೆ ಮತ್ತು ಪರಂಪರೆ ,ರಾಜ್ಯದ ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯಪ್ರಕಾರ ,ಕನ್ನಡ ಸಿನಿಮಾಧಾರಿತ ಆಧುನಿಕ ನೃತ್ಯ ಪ್ರಕಾರಗಳು ಕರ್ನಾಟಕ ವೈಭವ ಸಾರುವಂತ ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ ಸೆಪ್ಟೆಂಬರ್ 10 ರಂದು ನಡೆಯುವ ಯುವ ಸಂಭ್ರಮದ ಉದ್ಘಾಟನಾ ಸಮಾರಂಭಕ್ಕೆ ಕನ್ನಡ ಚಲನಚಿತ್ರ ರಂಗದ ಉದಯೋನ್ಮುಖ ನಟ ಯುವ ರಾಜಕುಮಾರ ಅವರನ್ನು ವಿಶೇಷ ಅಥಿತಿಯಾಗಿ ಆಹ್ವಾನ ಮಾಡಲಾಗಿದೆ. ಯುವ ಸಂಭ್ರಮ ಉಪಸಮಿತಿಯ ವತಿಯಿಂದ ಯುವರಾಜಕುಮಾರ ಅವರನ್ನು ಭೇಟಿ ನೀಡಿ ಅವರನ್ನು ಸನ್ಮಾನಿಸಿ ಯುವ ಸಂಭ್ರಮ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ. ಯುವ ರಾಜಕುಮಾರ ಅವರು ಕೂಡ ಯುವ ಸಂಭ್ರಮಕ್ಕೆ ಆಗಮಿಸುವುದಾಗಿ ಹೇಳಿದ್ದಾರೆ. ಇನ್ನು ಸ್ಯಾಂಡಲ್‍ವುಡ್ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಆಹ್ವಾನ ನೀಡಲಾಗಿದೆ.

ನೋಡಿರಿ

