ಬಿಗ್‌ಬಾಸ್‌ 12 ಗೆ ಗಿಲ್ಲಿನಟ ಫಿಕ್ಸ್?‌ – ‌ಡೀಲ್‌ ಫೈನಲ್‌.. ಶೋಗಳಿಂದ ನಾಪತ್ತೆ 
Zee ಕನ್ನಡ ಬಿಟ್ಟಿದ್ದು ಇದೇ ಕಾರಣಕ್ಕಾ?

ಬಿಗ್‌ಬಾಸ್‌ 12 ಗೆ ಗಿಲ್ಲಿನಟ ಫಿಕ್ಸ್?‌ – ‌ಡೀಲ್‌ ಫೈನಲ್‌.. ಶೋಗಳಿಂದ ನಾಪತ್ತೆ Zee ಕನ್ನಡ ಬಿಟ್ಟಿದ್ದು ಇದೇ ಕಾರಣಕ್ಕಾ?

ಕಾಮಿಡಿ ಕಿಂಗ್‌ ಗಿಲ್ಲಿನಟ.. ಶಾರ್ಟ್‌ ಫಿಲಂ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆದ ಗಿಲ್ಲಿನಟ ಬಳಿಕ ಕನ್ನಡ ಕಿರುತೆಗೆ ಎಂಟ್ರಿಕೊಟ್ಟಿದ್ರು. ಕಾಮಿಡಿ ಕಿಲಾಡಿಗಳು ಸೀಸನ್‌ 4 ರಲ್ಲಿ ಸ್ಪರ್ಧಿಸಿದ್ದ ಗಿಲ್ಲಿ ರನ್ನರಪ್‌ ಆಗಿ ಮಿಂಚಿದ್ರು.. ಅಲ್ಲಿಂದ ಶುರುವಾದ ಗಿಲ್ಲಿ ಕಿರುತೆರೆ ಜರ್ನಿ ಈಗ ಸ್ಟಾರ್‌ ಆಗುವಂತೆ ಮಾಡಿದೆ. ರಿಯಾಲಿಟಿ ಶೋಗಳಲ್ಲಿ ಗಗನಾ ಗಿಲ್ಲಿ ಕಾಂಬಿನೇಷನ್‌ ಅಂತೂ ವೀಕ್ಷಕರಿಗೆ ಇಷ್ಟ ಆಗಿತ್ತು.. ಆದ್ರೀಗ ಗಿಲ್ಲಿ ಯಾವ ಶೋನಲ್ಲೂ ಕಾಣಿಸಿಕೊಳ್ತಿಲ್ಲ.. ಇದೀಗ ಗಿಲ್ಲಿ ಬಿಗ್‌ ಬಾಸ್‌ 12 ಕ್ಕೆ ಸ್ಪರ್ಧಿಯಾಗಿ ಬರ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.

ಇದನ್ನೂ ಓದಿ: GST ಇಳಿಕೆಯಿಂದ ಕರ್ನಾಟಕಕ್ಕೆ ವಾರ್ಷಿಕ 70,000 ಕೋಟಿ ಲಾಸ್ – ಸಚಿವ ಕೃಷ್ಣ ಬೈರೇಗೌಡ

ಕಾಮಿಡಿ ಕಿಲಾಡಿಗಳು ಸೀಸನ್‌ 4 ರಲ್ಲಿ ಸ್ಪರ್ಧಿಸಿದ್ದ ಗಿಲ್ಲಿನಟ ವೀಕ್ಷಕರಿಗೆ ಸಖತ್‌ ಮನರಂಜನೆ ನೀಡಿದ್ರು.  ಗಿಲ್ಲಿ ಪಂಚಿಂಗ್‌ ಡೈಲಾಗ್ಸ್..‌ ಮುಗ್ದತೆ ಎಲ್ಲವೂ ವೀಕ್ಷಕರಿಗೆ ಇಷ್ಟವಾಗಿತ್ತು. ಗಿಲ್ಲಿ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ ಅನ್ನುವಷ್ಟರ ಮಟ್ಟಿಗೆ ಶೋನಲ್ಲಿ ಹವಾ ಕ್ರಿಯೇಟ್‌ ಮಾಡಿದ್ರು. ಕಾಮಿಡಿ ಕಿಲಾಡಿಗಳು ಶೋ ಬಳಿಕವೂ ಜೀ ಕನ್ನಡದ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ರು.. ಡಿಕೆಡಿ, ಭರ್ಜರಿ ಬ್ಯಾಚುಲರ್ಸ್‌ನಲ್ಲೂ ಭಾಗವಹಿಸಿದ್ರು.. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ನಲ್ಲಿ ಗಿಲ್ಲಿ ಹಾಗೂ ಗಗನಾ ಕಾಲೆಳಿತಾ ಇದ್ರು.. ಗಿಲ್ಲಿ ಗಗನಾ ಕಾಂಬಿನೇಷನ್‌ ವೀಕ್ಷಕರಿಗೆ ಸಖತ್‌ ಇಷ್ಟವಾಗಿತ್ತು.. ಆದ್ರೆ ಗಿಲ್ಲಿ ಏಕಾಏಕಿ ಜೀ ಕನ್ನಡದಿಂದ ಹೊರ ನಡೆದು.. ಬಳಿಕ ಕ್ವಾಟ್ಲೆ ಕಿಚನ್‌ ಶೋಗೆ ಎಂಟ್ರಿ ಕೊಟ್ಟಿದ್ರು.. ಆದ್ರೆ ಕೆಲವು ವಾರಗಳಿಂದ ಗಿಲ್ಲಿ ಈ ಶೋನಲ್ಲೂ ಕಾಣಿಸಿಕೊಂಡಿಲ್ಲ.. ಇದೀಗ ಗಿಲ್ಲಿ ಬಗ್ಗೆ ಬೇರೆಯದ್ದೇ ಟಾಕ್‌ ಶುರುವಾಗಿದೆ.

ಹೌದು.. ಗಿಲ್ಲಿ ನಟ ಕ್ವಾಟ್ಲೆ ಕಿಚನ್‌ ಶೋನಲ್ಲಿ ಕೇವಲ ನಾಲ್ಕು ವಾರ ಮಾತ್ರ ಭಾಗವಹಿಸಿದ್ರು.. ಅದಾದ ಬಳಿಕ ಈ ಶೋನಲ್ಲೂ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ, ಒಪ್ಪಂದ ಎಂದು ಹೇಳಲಾಗ್ತಿದೆ.. ಕ್ವಾಟ್ಲೆ ಕಿಚನ್‌ನಲ್ಲಿ ಗಿಲ್ಲಿ ಕೇವಲ 4 ವಾರಕ್ಕೆ ಮಾತ್ರ ಒಪ್ಪಂದ ಮಾಡಿಕೊಂಡಿದ್ರು. ಈ ಕಾರಣಕ್ಕೆ ಗಿಲ್ಲಿ ಕ್ವಾಟ್ಲೆ ಕಿಚನ್‌ ಶೋನಲ್ಲಿ ಕಾಣಿಸಿಕೊಳ್ತಿಲ್ಲ.. ಆದ್ರೀಗ ಗಿಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಸ್ಪರ್ಧಿಸಲಿದ್ದಾರೆ ಅನ್ನೋ ಟಾಕ್‌ ಶುರುವಾಗಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಬಿಗ್‌ ಬಾಸ್‌  ತಂಡ  ಈಗಾಗಲೇ ಶೋಗಾಗಿ ಕೆಲವರನ್ನ ಅಪ್ರೋಚ್‌ ಮಾಡಿದೆ ಅಂತಾ ಹೇಳಲಾಗ್ತಿದೆ. ಸೋಶಿಯಲ್‌ ಮೀಡಿಯಾದಲ್ಲೂ ಕೆಲ ಹೆಸರುಗಳ ಸದ್ದು ಮಾಡ್ತಿದೆ. ವೈರಲ್‌ ಆಗ್ತಿರೋ ಪಟ್ಟಿಯಲ್ಲಿ ಗಿಲ್ಲಿನಟ ಹೆಸ್ರೂ ಕೂಡ ಇದೆ. ಈಗಾಗಲೇ ಗಿಲ್ಲಿನಟನನ್ನ ಟೀಮ್‌ ಅಪ್ರೋಚ್‌ ಮಾಡಿದೆ. ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಭಾಗವಹಿಸಲು ಗಿಲ್ಲಿ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಗಿಲ್ಲಿ ಜೀ ಕನ್ನಡದಿಂದ ಕಲರ್ಸ್‌ ಕನ್ನಡಕ್ಕೆ ಜಂಪ್‌ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.  ಅಂದ್ಹಾಗೆ ಗಿಲ್ಲಿನಟ ತುಂಬಾ ಟ್ಯಾಲೆಂಟೆಡ್..‌ ಈಗಾಗಲೇ ತನ್ನ ಪ್ರತಿಭೆ ಏನು ಅನ್ನೋದನ್ನ ಇಡೀ ಕರ್ನಾಟಕದ ಮುಂದೆ ಪ್ರೆಸೆಂಟ್‌ ಮಾಡಿದ್ದಾರೆ. ಗಿಲ್ಲಿ ಇದ್ರೆ ಮನರಂಜನೆ ಫಿಕ್ಸ್..‌ ಟಿ ಆರ್‌ ಪಿ ಕೂಡ ಜಂಪ್‌ ಆಗ್ಬೋದು ಅನ್ನೋ ಲೆಕ್ಕಾಚಾರ ಹಾಕಲಾಗಿದೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಗಿಲ್ಲಿ ಆಗ್ಲೀ.. ವಾಹಿನಿ ಆಗ್ಲೀ ಮಾಹಿತಿ ಅಪ್‌ಡೇಟ್‌ ಕೊಟ್ಟಿಲ್ಲ.

Shwetha M