ಜಿತೇಶ್ ಗೆ ಸೈಡ್ ಹೊಡೆದ ಸಂಜು – ಏಷ್ಯಾಕಪ್ ಗೆ ವಿಕೆಟ್ ಕೀಪರ್ ಫಿಕ್ಸ್?
ಸ್ಯಾಮ್ಸನ್ LUCK ಬದಲಿಸಿತಾ KCL?

ಸೆಪ್ಟೆಂಬರ್ 9ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು ಟಿ-20 ಮಾದರಿಯಲ್ಲಿ ನಡೀತಾ ಇರೋದ್ರಿಂದ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿ ಟೀಂ ಲೀಡ್ ಮಾಡಲಿದ್ದಾರೆ. ಶುಭಮನ್ ಗಿಲ್ ಅವರ ಉಪನಾಯಕತ್ವದ ರೀ ಎಂಟ್ರಿಯೊಂದಿಗೆ ಭಾರತ ತಂಡದ ಪ್ಲೇಯಿಂಗ್ IXನಲ್ಲಿ ಒಂದಷ್ಟು ಬದಲಾವಣೆಗಳೂ ಆಗಲಿವೆ. ಅದ್ರಲ್ಲೂ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಗುವುದು ಅನುಮಾನ ಎಂದು ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ. ಅಭಿಷೇಕ್ ಶರ್ಮಾ ಜೊತೆ ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭ ಮಾಡ್ಬೋದು. ಹೀಗಾದ್ರೆ ಸಂಜುಗೆ ಅವಕಾಶ ಸಿಗೋದು ಕಷ್ಟ ಎಂದಿದ್ದಾರೆ. ಆದ್ರೆ ಯಾರು ಏನೇ ಹೇಳಿದ್ರೂ ನನ್ ಪರ್ಫಾಮೆನ್ಸ್ ನೋಡಿಯೇ ಚಾನ್ಸ್ ಕೊಡ್ಬೇಕು ಅನ್ನೋ ರೇಂಜ್ನಲ್ಲಿ ಸಂಜು ಧೂಳೆಬ್ಬಿಸಿದ್ದಾರೆ. ಕೇರಳ ಕ್ರಿಕೆಟ್ ಲೀಗ್ನಲ್ಲಿ ರನ್ ಮಳೆ ಹರಿಸಿದ್ದಾರೆ.
ಇದನ್ನೂ ಓದಿ : IND Vs AUS ಫೈಟ್ ಗೆ ಡಬಲ್ ಶಾಕ್ – ಆಸೀಸ್ ಗೆ ಕೈಕೊಟ್ಟ ಸ್ಟಾರ್ಕ್, ಕಮಿನ್ಸ್
ಕೇರಳ ಕ್ರಿಕೆಟ್ ಲೀಗ್ ನಲ್ಲಿ ಧೂಳೆಬ್ಬಿಸಿದ ಸಂಜು!
2025ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ಆಗಿದ್ದ ಸಂಜು ಸ್ಯಾಮ್ಸನ್ ಇಂಜುರಿಗೆ ಒಳಗಾಗಿದ್ರು. ಪರಿಣಾಮ 9 ಪಂದ್ಯಗಳಲ್ಲಷ್ಟೇ ಕಣಕ್ಕಿಳಿದಿದ್ರು. ಬಟ್ ಈಗ ಕಂಪ್ಲೀಟ್ ಫಿಟ್ ಆಗಿದ್ದು ಏಷ್ಯಾಕಪ್ ಟೂರ್ನಿಗೆ ಸೆಲೆಕ್ಟ್ ಆಗಿದ್ದಾರೆ. ಶುಭ್ಮನ್ ಗಿಲ್ ಕೂಡ ಟಿ-20ಐ ತಂಡಕ್ಕೆ ಕಮ್ ಬ್ಯಾಕ್ ಮಾಡಿರೋದ್ರಿಂದ ಗಿಲ್ ಓಪನಿಂಗ್ ಸ್ಲಾಟ್ ಹಾಗೇ ಸಂಜು ಮಿಡಲ್ ಆರ್ಡರ್ನಲ್ಲಿ ಬ್ಯಾಟ್ ಬೀಸ್ತಾರಾ ಅನ್ನೋ ಲೆಕ್ಕಾಚಾರ ನಡೀತಿದ್ವು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸಂಜು ರೆಕಾರ್ಡ್ಸ್ ಕಳಪೆಯಾಗಿವೆ. ಹೀಗಾಗಿ ಜಿತೇಶ್ ಶರ್ಮಾಗೆ ಚಾನ್ಸ್ ಕೊಡ್ಬೋದು ಅನ್ನೋ ಮಾತುಗಳು ಕೇಳಿ ಬರ್ತಿದ್ವು. ಆದ್ರೆ ಕೇರಳ ಕ್ರಿಕೆಟ್ ಲೀಗ್ನಲ್ಲಿ ಧೂಳೆಬ್ಬಿಸಿರೋ ಸಂಜು ಬಿಸಿಸಿಐಗೆ ಬಿಗ್ ಮೆಸೇಜ್ ಪಾಸ್ ಮಾಡಿದ್ದಾರೆ.
ಸಿಡಿದ ಸಂಜು!
ಕೇರಳ ಕ್ರಿಕೆಟ್ ಲೀಗ್ ನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ಸಂಜು ಕಣಕ್ಕೆ
ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಕೇವಲ 13 ರನ್ಗಳನ್ನ ಮಾತ್ರ ಕಲೆ
ಕೊಲ್ಲಂ ಸೈಲರ್ಸ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ 121 ರನ್
ತ್ರಿಶೂರ್ ಟೈಟಾನ್ಸ್ ವಿರುದ್ಧ 46 ಎಸೆತಗಳಲ್ಲಿ 89 ರನ್ ಚಚ್ಚಿದ್ರು
ತಿರುವನಂತಪುರಂ ರಾಯಲ್ಸ್ ವಿರುದ್ಧ 37 ಎಸೆತಗಳಲ್ಲಿ 62 ರನ್
ಅಲೆಪ್ಪಿ ರಿಪ್ಪಲ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ 83 ರನ್
ಸತತ ನಾಲ್ಕು ಇನ್ನಿಂಗ್ಸ್ಗಳಲ್ಲಿ 50+ ಸ್ಕೋರ್, 30 ಸಿಕ್ಸ್, 24 ಫೋರ್
5 ಇನಿಂಗ್ಸ್ ಗಳಿಂದ ಒಟ್ಟು 368 ರನ್ ಗಳಿಸಿ ಅಬ್ಬರಿಸಿರುವ ಸಂಜು
ಹೀಗೆ ಏಷ್ಯಾಕಪ್ನಲ್ಲಿ ಕಾಂಪಿಟೇಷನ್ ಕೊಡ್ತಿದ್ದ ಜಿತೇಶ್ ಶರ್ಮಾಗೆ ಠಕ್ಕರ್ ಕೊಡೋಕೆ ಸಂಜು ಏನೋ ಗ್ರೇಟ್ ಕಮ್ ಬ್ಯಾಕ್ ಮಾಡಿದ್ದಾರೆ. ಕೆಸಿಎಲ್ನಲ್ಲಿ ರಿಯಲ್ ಗೇಮ್ ಆಗಿದ್ದಾರೆ. ಬಟ್ ಇರೋ ಪ್ರಶ್ನೆ ಅಂದ್ರೆ ಯಾವ ಸ್ಲಾಟ್ ಅನ್ನೋದು. ಸಂಜು ಓಪನರ್ ಆಗಿ ಮಾತ್ರ ಸಕ್ಸಸ್ ಕಂಡಿರೋದು. ಮಿಡಲ್ ಆರ್ಡರ್ ನಲ್ಲಿ ಕಂಪ್ಲೀಟ್ ಡಲ್ ಆಗಿದ್ದಾರೆ.
ಗಿಲ್ ಕಾರಣದಿಂದ ಸಂಜು ಮಿಡಲ್ ಆರ್ಡರ್ ಗೆ ಬರ್ತಾರಾ?
ಕಳೆದೊಂದು ವರ್ಷದಿಂದ ಟೀಂ ಇಂಡಿಯಾದಲ್ಲಿ ಟಿ-20ಐ ಟೀಮ್ನಲ್ಲಿ ಸಂಜು ಸ್ಯಾಮ್ಸನ್ ಮೊದಲನೇ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್. ಅದ್ರಲ್ಲೂ ಬಾಂಗ್ಲಾದೇಶ ವಿರುದ್ಧದ ಭಾರತ ಸರಣಿಯ ನಂತರ ಸಂಜುಗೆ ಚಾನ್ಸ್ ಮಿಸ್ ಆಗಿಲ್ಲ. ಹೀಗಿದ್ರೂ ಈ ಸಲ ಏಷ್ಯಾಕಪ್ನಲ್ಲಿ ಶುಭಮನ್ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇರುವುದರಿಂದ ಸ್ಯಾಮ್ಸನ್ ಅವರ ಸ್ಥಾನ ತೂಗುಯ್ಯಾಲೆಯಲ್ಲಿದೆ. ಗಿಲ್ ಆರಂಭಿಕ ಸ್ಥಾನವನ್ನು ಅಲಂಕರಿಸುವ ನಿರೀಕ್ಷೆಯಿರುವುದರಿಂದ, ಸ್ಯಾಮ್ಸನ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ತಳ್ಳಬಹುದು. ಆದ್ರೆ ಮಿಡಲ್ ಆರ್ಡರ್ ನಲ್ಲಿ ಸಂಜು ಸದ್ದೇ ಮಾಡಿಲ್ಲ.
ಮಿಡಲ್ ಆರ್ಡರ್ ನಲ್ಲಿ ಸಂಜುಗಿಂತ ಜಿತೇಶ್ ಬೆಸ್ಟ್!
ಇನ್ನು ಜಿತೇಶ್ ಶರ್ಮಾ ಬಗ್ಗೆ ಹೇಳೋದಾದ್ರೆ 2025ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರೋಫಿ ಗೆಲುವಿನಲ್ಲಿ ಜಿತೇಶ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ರು. ಫಿನಿಷರ್ ರೋಲ್ನಲ್ಲಿ 176ರ ಸ್ಟ್ರೈಕ್ ರೇಟ್ನಲ್ಲಿ 261 ರನ್ಗಳನ್ನು ಕಲೆ ಹಾಕಿದ್ರು. ಇದೇ ಪರ್ಫಾಮೆನ್ಸ್ನಿಂದಲೇ ಏಷ್ಯಾಕಪ್ಗೆ ಮಿಡಲ್ ಆರ್ಡರ್ನಲ್ಲಿ ವಿಕೆಟ್ ಕೀಪರ್ ಕೋಟಾದಲ್ಲಿ ಚಾನ್ಸ್ ನೀಡಲಾಗಿದೆ. ಸಂಜು ಆರಂಭಿಕರಾಗಿ ಅಬ್ಬಿಸಿದ್ರೂ ಕೂಡ ಮಿಡಲ್ ಆರ್ಡರ್ನಲ್ಲಿ ಅವ್ರ ಸ್ಕೋರ್ ಕಳಪೆಯಾಗಿದೆ. ಐದನೇ ಸ್ಥಾನದಲ್ಲಿ ಟಿ20ಐಗಳಲ್ಲಿ 15 ಬಾರಿ ಬ್ಯಾಟಿಂಗ್ ಮಾಡಿರುವ ಸಂಜು ಕೇವಲ 12ರ ಸರಾಸರಿ ಹೊಂದಿದ್ದಾರೆ. ಆದ್ರೆ ಟೀಂ ಇಂಡಿಯಾ ಪರ ಕಳೆದ 12 ಪಂದ್ಯಗಳಲ್ಲಿ ಓಪನರ್ ಆಗಿ ಮೂರು ಶತಕಗಳನ್ನು ಬಾರಿಸಿದ್ದಾರೆ.
ಸದ್ಯ ಏಷ್ಯಾಕಪ್ಗೆ ಸೆಲೆಕ್ಟ್ ಆಗಿರೋ ಸಂಜು ಮತ್ತು ಜಿತೇಶ್ ಇಬ್ಬರೂ ಬೆಸ್ಟ್ ಪ್ಲೇಯರ್ಗಳೇ. ಬಟ್ ಸ್ಲಾಟ್ ಅಂತಾ ಬಂದಾಗ ಪರ್ಫಾಮೆನ್ಸ್ನಲ್ಲಿ ವೇರಿಯೇಷನ್ಸ್ ಇದೆ. ಸಂಜುಗೆ ಆರಂಭಿಕನಾಗಿ ಸಿಕ್ಕಷ್ಟು ಗೆಲುವು ಮಧ್ಯಮ ಕ್ರಮಾಂಕದಲ್ಲಿ ಸಿಕ್ಕಿಲ್ಲ. ಹಾಗೇ ಜಿತೇಶ್ಗೆ ಮಿಡಲ್ ಆರ್ಡರ್ ಹಾಗೇ ಫಿನಿಶರ್ ರೋಲ್ ಬೆಸ್ಟ್.

ನೋಡಿರಿ

