ಬೆಂಗಳೂರಿನಲ್ಲಿ ಹೆಚ್ಚಾಯ್ತು ಹಾವುಗಳ ಹಾವಳಿ – ಶೂ ಒಳಗೆ ಬೆಚ್ಚಗೆ ಕುಳಿತಿತ್ತು ನಾಗರ ಹಾವಿನ ಮರಿ!  

ಬೆಂಗಳೂರಿನಲ್ಲಿ ಹೆಚ್ಚಾಯ್ತು ಹಾವುಗಳ ಹಾವಳಿ – ಶೂ ಒಳಗೆ ಬೆಚ್ಚಗೆ ಕುಳಿತಿತ್ತು ನಾಗರ ಹಾವಿನ ಮರಿ!  

ಮಳೆಗಾಲ ಶುರುವಾದ ಬಳಿಕ, ಹಾವುಗಳು ಕೂಡ ಮನೆಯಸುತ್ತ-ಮುತ್ತ ಆಗಾಗ ಕಾಣಿಸಿಕೊಳ್ಳಲು ಶುರುವಾಗುತ್ತವೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.. ಇದೀಗ ಇಲ್ಲೊಂದು ಕಡೆ ನಾಗರ ಹಾವಿನ ಮರಿ, ಶೂ ಒಳಗೆ ಸೇರಿಕೊಂಡಿದೆ.

ಇದನ್ನೂ ಓದಿ: ಆಟೋ ಮತ್ತು ಕ್ಯಾಬ್ ಚಾಲಕರಿಗೆ ಗುಡ್‌ನ್ಯೂಸ್ – ಹೃದಯ ಆರೋಗ್ಯ ಯೋಜನೆ ಜಾರಿಗೆ ನಿರ್ಧಾರ

ಹೌದು.. ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚಾಗಿರುತ್ತೆ. ನಾವು ಧರಿಸೋ ಬಟ್ಟೆ, ಹೆಲ್ಮೆಟ್‌, ಶೂ ಗಳನ್ನ ಚೆಕ್ ಮಾಡಿಕೊಳ್ಳಲೇಬೇಕು.. ಯಾವಾಗ ಹಾವಿನ ಮರಿಗಳು ಅದ್ರೊಳಗೆ ಸೇರಿಕೊಳ್ಳುತ್ತೆ ಅಂತ ಹೇಳೋಕೆ ಸಾಧ್ಯ ಇಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ಹಾವುಗಳು ಶೂ, ಚಪ್ಪಲಿಗಳಲ್ಲಿ ಸೇರಿಕೊಳ್ಳುತ್ತಿರುವ ಘಟನೆ ಹೆಚ್ಚುತ್ತಿದೆ. ಗಮನಿಸದೇ ಶೂ ಧರಿಸಿದ ಇಬ್ಬರು ಇತ್ತೀಚಿಗೆ ಸಾವನ್ನಪ್ಪಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.  ಇದೀಗ ಮತ್ತೊಂದು ಮನೆಯಲ್ಲಿ ನಾಗರಹಾವಿನ ಮರಿ ಶೂ ಒಳಗೆ ಪ್ರತ್ಯಕ್ಷವಾಗಿದ್ದು, ಮನೆಯವರು ಬೆಚ್ಚಿಬಿದ್ದಿದ್ದಾರೆ.

ಮಾರತ್‌ಹಳ್ಳಿಯ ಮನೆಯೊಂದ್ರಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿಯೊಬ್ಬರು ಮನೆಯಿಂದ ಹೊರ ಬಂದು ಶೂ ಹಾಕಲು ಹೋಗಿದ್ದಾರೆ. ಈ ವೇಳೆ ಶೂ ಒಳಗೆ ನಾಗರಹಾವಿತ್ತು. ಶೂ ಒಳಭಾಗದಲ್ಲೇ ಹೆಡೆ ಎತ್ತಿ ಆತಂಕ ಮೂಡಿಸಿತ್ತು. ಮಳೆ ಕಾರಣದಿಂದಾಗಿ ಹಾವುಗಳು ಬೆಚ್ಚಗಿನ ಜಾಗವನ್ನು ಅರಸಿಬಂದಿರುತ್ತವೆ. ಶೂ, ಚಪ್ಪಲಿಗಳು ತುಂಬಾ ಬೆಚ್ಚಗಿರುವುದರಿಂದ ಇವುಗಳಲ್ಲಿ ಸೇರಿರುತ್ತವೆ.

3 ದಿನಗಳ ಹಿಂದೆ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಹಾವು ಕಚ್ಚಿ ಟೆಕ್ಕಿ ಪ್ರಕಾಶ್ ಮೃತ ಪಟ್ಟಿದ್ದರು. ಇನ್ನೂ ರಾಜ್ಯದಲ್ಲಿ ಜನವರಿ 1ರಿಂದ ಆಗಸ್ಟ್ 17ರ ತನಕ 13,494 ಹಾವು ಕಡಿತ ಪ್ರಕರಣ ದಾಖಲಾಗಿವೆ.

Shwetha M