ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ಗೆ ಆಹ್ವಾನ – ಮೈಸೂರು ಪೇಟ ತೊಡಿಸಿ ಅಧಿಕೃತವಾಗಿ ಆಮಂತ್ರಣ

ನಾಡಹಬ್ಬ ದಸರಾ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಸೆಪ್ಟೆಂಬರ್ 22ರಂದು ಉದ್ಘಾಟನೆ ಮಾಡಲಾಗುತ್ತದೆ. ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಬಿಜೆಪಿ ನಾಯಕರು ಹಿಂದೂ ಪರ ಸಂಘಟನೆಗಳ ವಿರೋಧವಿದ್ದರೂ ಸಹ, ಯಾವುದಕ್ಕೂ ಜಗ್ಗದ ಸರ್ಕಾರ ಆಹ್ವಾನ ನೀಡಿದೆ. ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆಯಾಗಿರುವ ಬರಹಗಾರ್ತಿ ಬಾನು ಮುಷ್ತಾಕ್ ಅವರನ್ನು ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ನೀಡಲಾಯತು. ಹಾಸನದ ಅವರ ನಿವಾಸದಲ್ಲಿ ಅಧಿಕಾರಿಗಳು ಆಹ್ವಾನ ನೀಡಿದರು. ಮೈಸೂರು ಪೇಟ ತೋಡಿಸಿ, ಫಲಫುಷ್ಪ ನೀಡಿ ಸಾಂಪ್ರದಾಯಿಕ ಸ್ವಾಗತಿಸಿದರು.
ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮತ್ತು ಸ್ವಾಗತ ಸಮಿತಿಯವರು ಪಾಲ್ಗೊಂಡಿದ್ದರು. ಬಾನು ಮುಷ್ತಾಕ್ ಆಯ್ಕೆ ತೀವ್ರ ವಿವಾದ ಪ್ರತಿಭಟನೆಗಳು ನಡೆದಿದ್ದವು ಆದರೆ, ಇದ್ಯಾವುದಕ್ಕೂ ಹಿಂದೆ ಸರಿಯದ ಸಿದ್ದರಾಮಯ್ಯ ಸರ್ಕಾರ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಅಧಿಕೃತ ಆಹ್ವಾನಕ್ಕೆ ಸಿದ್ಧತೆ ನಡೆಸಿಕೊಂಡಿದೆ.
2025 ನೇ ಸಾಲಿನ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರವು ತೀರ್ಮಾನಿಸಿದೆ. ಈ ಹಿನ್ನೆಲೆ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಯನ್ನು ಕರ್ನಾಟಕದ ಪ್ರತಿಷ್ಠಿತ ಸಾಹಿತಿಗಳು ಹಾಗೂ ಪ್ರತಿಷ್ಠಿತ ಅಂತರ ರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ಟಾಕ್ ರವರಿಂದ ನೆರವೇರಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆ ಭಾನು ಮುಷ್ಟಾಕ್ ರವರನ್ನು ಸರ್ಕಾರ ಪರವಾಗಿ, ಮೈಸೂರು ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಹಾಸನ ನಗರದಲ್ಲಿರುವ ಗೌರವಾನಿತರ ಸ್ವಗೃಹಕ್ಕೆ ತೆರಳಿ ಆಹ್ವಾನಿಸಲಾಗುವುದು ಎಂದು ಬರೆದುಕೊಂಡಿದೆ. ಆ ಮೂಲಕ ಸರ್ಕಾರ ಯಾವುದೇ ವಿರೋಧಕ್ಕೂ ಮಣಿದಿಲ್ಲ ಎಂಬುದು ತಿಳಿದುಬಂದಿದೆ.
ಭುವನೇಶ್ವರಿ ಬಗ್ಗೆ ಬಾನು ಮುಷ್ತಾಕ್ ಹೇಳಿಕೆ ವಿಚಾರವಾಗಿ ಬಿಜೆಪಿಯಿಂದ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ಕುಂಕುಮದ ಬಗ್ಗೆ ಬಾನು ಮುಷ್ತಾಕ್ ಏನು ಮಾತನಾಡಿದ್ದಾರೋ ಅದು ನನಗೆ ಗೊತ್ತಿಲ್ಲ. ಅವರು ಕನ್ನಡದ ಬರಹಗಾರ್ತಿ. ಕನ್ನಡದ ಪ್ರೀತಿ ಅಭಿಮಾನ ಇಲ್ಲದಿದ್ದರೆ ಪುಸ್ತಕಗಳನ್ನ ಬರೆಯುತ್ತಿರಲಿಲ್ಲ. ಕುಂಕುಮ ಹಾಕುವುದು ಅವರ ಧರ್ಮದಲ್ಲಿ ಇದ್ಯಾ?ಮತ್ತೊಂದು ಧರ್ಮದವರನ್ನ ಉದ್ಘಾಟನೆ ಕರೆದು ಕುಂಕುಮ ಹಾಕಿಕೊಳ್ಳಿ ಎಂದು ಹೇಳಲು ಸಾಧ್ಯನಾ? ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮ

ನೋಡಿರಿ

