ವಿಷ್ಣು ಸ್ಮಾರಕಕ್ಕೆ ಜಾಗ ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದ ಭಾರತಿ ವಿಷ್ಣುವರ್ಧನ್‌!

ವಿಷ್ಣು ಸ್ಮಾರಕಕ್ಕೆ ಜಾಗ ಮಂಜೂರು ಮಾಡುವಂತೆ ಸಿಎಂಗೆ ಮನವಿ ಮಾಡಿದ ಭಾರತಿ ವಿಷ್ಣುವರ್ಧನ್‌!

ಅಭಿಮಾನ್‌ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್‌ ಸಮಾಧಿ ತೆರವು ಮಾಡಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಇದೀಗ ಮತ್ತೆ ಅದೇ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಿಸಲು ಭೂಮಿ ಮಂಜೂರು ಮಾಡಲು ಸರ್ಕಾರಕ್ಕೆ ಭಾರತಿ ವಿಷ್ಣುವರ್ಧನ್‌ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಲಂಡನ್ ನಲ್ಲೇ ಕೊಹ್ಲಿ ಫಿಟ್ ನೆಸ್ ಪರೀಕ್ಷೆ ಪಾಸ್ – ವಿರಾಟ್ ಗೆ ಮಾತ್ರವೇ ಯಾಕೆ ಬಿಸಿಸಿಐ ಸ್ಪೆಷಲ್  ಪರ್ಮಿಷನ್?

ಹೌದು, ಬೆಂಗಳೂರಿನ ಅಭಿನವ್ ಸ್ಟುಡಿಯೋದಲ್ಲಿರೋ ವಿಷ್ಣುವರ್ಧನ್ ಸಮಾಧಿ ಕೆಡವಿದ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಸ್ಟುಡಿಯೋದ 10 ಗುಂಟೆ ಜಾಗವನ್ನು ತಮಗೆ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ಇದೀಗ ಈ ವಿಚಾರವಾಗಿ ಭಾರತಿ ವಿಷ್ಣುವರ್ಧನ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವಿಷ್ಣು ಸ್ಮಾರಕ ನಿರ್ಮಿಸಲು ಭೂಮಿ ಮಂಜೂರು ಮಾಡಬೇಕೆಂದು ಭಾರತಿ ಅವರು ಸಿಎಂ ಬಳಿ ಮನವಿಯನ್ನು ಇಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಅಭಿಮಾನಿಗಳಿಗಾಗಿ ಸ್ಟುಡಿಯೋದಲ್ಲಿ ಜಾಗ ಕೊಡಿ ಎಂದು ಸಿಎಂ ಬಳಿ ಕೇಳಿದ್ದೇವೆ. ಅಭಿಮಾನಿಗಳ ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಮಾಡಿ ಕೊಡಬೇಕು ಎಂಬುದು ನಮ್ಮ ಮನವಿ. ವಿಷ್ಣುವರ್ಧನ್​ಗೆ ಕರ್ನಾಟಕ ರತ್ನ ಕೊಡಬೇಕು ಎಂಬುದು ಹಲವು ವರ್ಷಗಳ ಕೋರಿಕೆ. ಅಭಿಮಾನಿಗಳು ಈ ಬೇಡಿಕೆಯನ್ನು ಸರ್ಕಾರದ ಮಂದೆ ಇಡುತ್ತಲೇ ಬರುತ್ತಿದ್ದರು. ಈಗ ಅಭಿಮಾನಿಗಳ ಪರವಾಗಿ ಭಾರತಿ ಕೂಡ ಈ ರೀತಿಯ ಮನವಿ ಮಾಡಿದ್ದಾರೆ. ‘ಕರ್ನಾಟಕ ರತ್ನ ಕೊಡಬೇಕು ಎಂದು ನಾನು ಕೇಳುವುದಿಲ್ಲ. ಅಭಿಮಾನಿಗಳು ಕೇಳುತ್ತಿದ್ದಾರೆ. ಅವರ ಕೋರಿಕೆಯನ್ನು ಈಡೇರಿಸಬೇಕು ಎಂದು ಭಾರತಿ ಸಿಎಂ ಬಳಿ ಹೇಳಿದ್ದಾರೆ.

Shwetha M