ಸುಂಕಾಸುರ ಟ್ರಂಪ್ Vs ಮೋದಿ & ಚೀನಾ – ಭಾರತಕ್ಕೆ ಯಾರಿಂದ ಹೆಚ್ಚು ಲಾಭ?
ಚೀನಾದಿಂದ ಎಷ್ಟು ಬಿಲಿಯನ್ ನಷ್ಟ?

ಸುಂಕಾಸುರ ಟ್ರಂಪ್ Vs ಮೋದಿ & ಚೀನಾ – ಭಾರತಕ್ಕೆ ಯಾರಿಂದ ಹೆಚ್ಚು ಲಾಭ?ಚೀನಾದಿಂದ ಎಷ್ಟು ಬಿಲಿಯನ್ ನಷ್ಟ?

ಸುಂಕಾಸುರ ಟ್ರಂಪ್ ಭಾರತದ ಮೇಲೆ ಸುಂಕದ ಹೊರೆ ಹೊರಿಸಿದ್ದಾರೆ. ಡಬಲ್ ಟ್ಯಾಕ್ಸ್‌ ಹಾಕಿ  ಭಾರತವನ್ನ ಕುಗ್ಗಿಸೋ ಪ್ರಯತ್ನವನ್ನ ಮಾಡುತ್ತಿದ್ದಾರೆ. ಈ ಬೆಳವಣಿಗೆ ನಂತ್ರ ಭಾರತ ಮತ್ತು ಚೀನಾ ಮತ್ತೆ ದೋಸ್ತಿ ಆಗುತ್ತಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ಚೀನಾ ಮತ್ತು ಅಮೆರಿಕಾ ಇಬ್ಬರೂ ಪ್ರಮುಖ ವ್ಯಾಪಾರ ಪಾಲುದಾರರು. ಹಾಗಿದ್ರೆ ಚೀನಾ ಮತ್ತು ಅಮೆರಿಕಾದಲ್ಲಿ  ಯಾರು ಭಾರತಕ್ಕೆ ಹೆಚ್ಚು ಮುಖ್ಯ? ಯಾರಿಂದ ಲಾಭವಾಗುತ್ತಿದೆ, ಯಾರಿಂದ ನಷ್ಟವಾಗುತ್ತಿದೆ? ಅನ್ನೋ ಬಗ್ಗೆ ಈ ವಿಡಿಯೋದಲ್ಲಿ ನಮ್ಗೆ ತಿಳಿಸಿಕೊಡುತ್ತೇನೆ ನಾನು ನಿಮ್ಮ ಶಿವರಾಜ್ ಬಾಣಂಕಿ ನೀವು ಸುದ್ದಿಯಾನದ ಸಬ್‌ಸ್ಕೈಬರ್ ಆಗೋದ್ದನ್ನ ಮರೆಯಬೇಡಿ..

ಅಮೆರಿಕ ಮತ್ತು ಭಾರತದ ಸಂಬಂಧ ಸದ್ಯಕ್ಕೆ ಹಳಸಿ ಹೋಗಿದೆ. ಟ್ರಂಪ್ ಸುಂಕದ ಬರೆ ಎಳೆದ ಮೇಲೆ ಅನಿವಾರ್ಯವಾಗಿ ಭಾರತ ಚೀನಾ ಕಡೆ ಮುಖಮಾಡಿದೆ.  ಚೀನಾ ಜೊತೆ ಹೆಚ್ಚು ವ್ಯಾಪಾರ ಸಂಬಂಧ ಹೊಂದೋಕೆ ರೆಡಿಯಾಗುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಭೇಟಿ ನೀಡಿದ್ದು ಸಾಕಷ್ಟು ಈ ಬಗ್ಗೆ ಚರ್ಚೆ ಹೆಚ್ಚಾಗುವಂತೆ ಮಾಡಿದೆ. ಅಮೆರಿಕದ ಸುಂಕ ನೀತಿಯ ಪರಿಣಾಮವಾಗಿ ಭಾರತದ ರಫ್ತುಗಳ ಮೇಲೆ ಬಿದ್ದ ಒತ್ತಡದ ಮಧ್ಯೆ, ಚೀನಾದೊಂದಿಗೆ ನಮ್ಮ ವ್ಯಾಪಾರ ಸಂಬಂಧಗಳನ್ನು ಪುನಃ ರೂಪಿಸುವ ಅಗತ್ಯ ಹೆಚ್ಚಾಗಿದೆ.  ಆದ್ರೆ ನಮ್ಗೆ ಚೀನಾ ಜೊತೆ ವ್ಯಾಪಾರ ಸಂಬಂಧ ಹೊಂದಿದ್ರೆ ಲಾಭನ ನಷ್ಟನಾ ಅನ್ನೋದ್ದನ್ನ ನೋಡೋಣ ಬನ್ನಿ..

 ಭಾರತಚೀನಾ ವ್ಯಾಪಾರ ಲಾಭಕ್ಕಿಂತ ನಷ್ಟವೇ ಹೆಚ್ಚು

ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧ ದೊಡ್ಡದಾಗಿದೆ. ಆದ್ರೆ ಇದು ಸಮನಾಗಿಲ್ಲ..  ಭಾರತ  ಚೀನಾದಿಂದ ಹೆಚ್ಚಿನ ಸರಕುಗಳನ್ನು ಖರೀದಿ ಮಾಡುತ್ತೆ.  ಆದರೆ ಮಾರಾಟ ಮಾಡುತ್ತಿರುವ ಪ್ರಮಾಣ ತುಂಬಾ ಕಡಿಮೆ.

ಚೀನಾದಿಂದ ಭಾರತಕ್ಕೆ ನಷ್ಟ 

2024-25ನೇ ಆರ್ಥಿಕ ವರ್ಷದಲ್ಲಿ  ಭಾರತ ಚೀನಾ ದ್ವಿಪಕ್ಷೀಯ ವ್ಯಾಪಾರ $127.7 ಬಿಲಿಯನ್ ಆಗಿದೆ. ಇದ್ರಲ್ಲಿ   ಭಾರತದಿಂದ ಚೀನಾಕ್ಕೆ ರಫ್ತು: $14.3 ಬಿಲಿಯನ್ ರಫ್ತು ಆಗಿದ್ರೆ,  ಚೀನಾದಿಂದ ಭಾರತಕ್ಕೆ ಆಮದು ಆಗಿದ್ದು $113.5 ಬಿಲಿಯನ್. ಅಂದ್ರೆ ನಾವು ಚೀನಾದಿಂದ   $99.2 ಬಿಲಿಯನ್ ನಷ್ಟು ಹೆಚ್ಚು ಖರೀದಿ ಮಾಡುತ್ತಿದ್ದೇವೆ.   ಇದರಿಂದ ಏನ್ ಗೊತ್ತಾಗುತ್ತೆ ಅಂದ್ರೆ ನಾವು ಚೀನಾದ ಮೇಲೆ ಬಹಳ ಅವಲಂಬಿತರಾಗಿದ್ದರೂ, ಲಾಭಕ್ಕಿಂತ ನಷ್ಟವೇ ಹೆಚ್ಚು ಆಗುತ್ತದೆ ಅನ್ನೋದು. ಪ್ರಸ್ತುತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಏಪ್ರಿಲ್ ಮತ್ತು ಜುಲೈ 2024 ರಲ್ಲಿ ಭಾರತವು ಚೀನಾಗೆ ಕೇವಲ $5.75 ಬಿಲಿಯನ್ ಮೌಲ್ಯದ ಸರಕುಗಳನ್ನು ಮಾರಾಟ ಮಾಡಿದ್ದು, ಆದರೆ $40.65 ಬಿಲಿಯನ್ ಮೌಲ್ಯದ ಸರಕುಗಳನ್ನು ಆಮದು ಮಾಡಿದೆ. ಇದರರ್ಥ ಚೀನಾದೊಂದಿಗೆ ನಮ್ಮ ವ್ಯಾಪಾರವು ದೊಡ್ಡದಾಗಿದ್ದರೂ, ಅದು ಭಾರತಕ್ಕೆ ಆರ್ಥಿಕ ಹೊರೆ ಹೆಚ್ಚಿಸಿದೆ.

ಚೀನಾಗೆ ಹೋಲಿಸಿದರೆ ಅಮೆರಿಕಾ ಭಾರತಕ್ಕೆ ಹೆಚ್ಚು ಲಾಭದಾಯಕ ವ್ಯಾಪಾರ ಪಾಲುದಾರ ಎನ್ನಬಹುದು. ಕಾರಣವೇನೆಂದರೆ  ಭಾರತವು ಅಮೆರಿಕಾಗೆ ಹೆಚ್ಚು ಮಾರಾಟ ಮಾಡುತ್ತದೆ, ಅವರಿಂದ ಕಡಿಮೆ ಖರೀದಿಸುತ್ತದೆ.

ಅಮೆರಿಕದಿಂದ ಭಾರತಕ್ಕೆ ಲಾಭ 

2024-25ನೇ ಆರ್ಥಿಕ ವರ್ಷ

ಭಾರತ – ಅಮೆರಿಕಾ ವ್ಯಾಪಾರ $128.9 ಬಿಲಿಯನ್

ಭಾರತದಿಂದ ಅಮೆರಿಕಾಗೆ ರಫ್ತು: $86.7 ಬಿಲಿಯನ್
ಅಮೆರಿಕಾದಿಂದ ಭಾರತಕ್ಕೆ ಆಮದು: $42.2 ಬಿಲಿಯನ್
ವ್ಯಾಪಾರ ಹೆಚ್ಚುವರಿ: $44.5 ಬಿಲಿಯನ್

ಇದರಿಂದ ಅರ್ಥ ಆಗುವುದು ಏನಂದ್ರೆ ಅಮೆರಿಕಾ ಭಾರತಕ್ಕೆ ಕೇವಲ ವ್ಯಾಪಾರ ಪಾಲುದಾರವಲ್ಲ, ಆರ್ಥಿಕ ಲಾಭದ ಮೂಲವೂ ಹೌದು ಅನ್ನೋದು.  ಒಟ್ಟು ಸಂಖ್ಯೆಗಳ ದೃಷ್ಟಿಯಿಂದ ನೋಡಿದರೆ, ಚೀನಾ ಮತ್ತು ಅಮೆರಿಕಾ ಇಬ್ಬರೂ ಭಾರತದೊಂದಿಗೆ ಅತಿ ದೊಡ್ಡ ವ್ಯಾಪಾರ ಪಾಲುದಾರರು. ಆದರೆ ಲಾಭನಷ್ಟದ ಲೆಕ್ಕಾಚಾರದಲ್ಲಿ ಅಮೆರಿಕಾ ಭಾರತಕ್ಕೆ ಹೆಚ್ಚು ಲಾಭದಾಯಕ ಅನ್ನೋದು ಸತ್ಯ.

 

Kishor KV