ಬಿಗ್ ಬಾಸ್ 12 ಪ್ರೋಮೋ ಔಟ್.. ದೊಡ್ಮನೆಯ ದೊಡ್ಡ ಸೀಕ್ರೆಟ್ ರಿವೀಲ್! – BBKಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಇವ್ರೇ?

ಬಿಗ್ ಬಾಸ್.. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ.. ಸೀಸನ್ 11 ಯಶಸ್ವಿಯಾಗಿದ್ದು, 12ನೇ ಸೀಸನ್ ಆರಂಭಕ್ಕೆ ಯಾವಾಗ ಅಂತಾ ಫ್ಯಾನ್ಸ್ ಕಾಯ್ತಾ ಇದ್ರು.. ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ಕನ್ನಡ 12 ರ ಮೊದಲ ಪ್ರೋಮೋ ರಿಲೀಸ್ ಮಾಡಲಾಗಿದೆ.. ಮೊದಲ ಪ್ರೋಮೋದಲ್ಲೇ ಕಿಚ್ಚ ಸುದೀಪ್ ಅವರ ಹೊಸ ಲುಕ್ ಗಮನ ಸೆಳೆದಿದೆ.. ಆದ್ರೀಗ ಈ ಪ್ರೋಮೋದಲ್ಲೇ ಹೊಸ ಸೀಕ್ರೆಟ್ ರಿವೀಲ್ ಆಗಿದೆ. ಅಷ್ಟೇ ಅಲ್ಲ ಸ್ಪರ್ಧಿಗಳ ಬಗ್ಗೆ ಸುಳಿವೂ ಸಿಕ್ಕಿದೆ.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಅಡುಗೆ ಮಾಡಿದ ಶೋಭಿತಾ! – ನಾಗಚೈತನ್ಯ ಹೆಂಡ್ತಿ ಸರಳತೆಗೆ ಫ್ಯಾನ್ಸ್ ಫಿದಾ!
ಬಿಗ್ ಬಾಸ್ ರಿಯಾಲಿಟಿ ಶೋ ಫೀವರ್ ಈಗ ಎಲ್ಲಾ ಭಾಷೆಯಲ್ಲೂ ಶುರುವಾಗ್ತಿದೆ. ಈಗಾಗಲೇ ಹಿಂದಿಯ 19ನೇ ಸೀಸನ್ ಶುರುವಾಗಿದೆ. ಸಲ್ಮಾನ್ ಖಾನ್ ಅದೇ ಜೋಷ್ನಲ್ಲಿ ಮತ್ತೆ ಶೋ ಹೋಸ್ಟ್ ಮಾಡ್ತಿದ್ದಾರೆ. ಇತ್ತ ಮಲಯಾಳಂ 7ನೇ ಸೀಸನ್ ಕೂಡ ಆರಂಭಗೊಂಡಿದೆ. ಮೋಹನ್ಲಾಲ್ ಕೂಡ ಶೋನ ತುಂಬಾ ಚೆನ್ನಾಗಿ ಹೋಸ್ಟ್ ಮಾಡುತ್ತಿದ್ದಾರೆ. ಹೀಗಾಗೇ ಕನ್ನಡ ಬಿಗ್ಬಾಸ್ ಯಾವಾಗ ಶುರುವಾಗುತ್ತೆ ಅಂತಾ ಫ್ಯಾನ್ಸ್ ಕಾಯ್ತಾ ಇದ್ರು.. ಇದೀಗ ಕಡೆಗೂ ಕಿಚ್ಚ ಸುದೀಪ್ ಗುಡ್ನ್ಯೂಸ್ ಕೊಟ್ಟಿದ್ದಾರೆ.. ನಾನು ರೆಡಿ.. ಅಂತಾ ಹೇಳಿದ್ದಾರೆ ಅಭಿನಯ ಚಕ್ರವರ್ತಿ..
ಹೌದು.. ಬಿಗ್ ಬಾಸ್ ಕನ್ನಡದ 11ನೇ ಸೀಸನ್ ನಿನ್ನೆ ಮೊನ್ನೆಯಷ್ಟೇ ಮುಗಿದಂತೆ ಇದೆ. ಅಷ್ಟರಲ್ಲೇ ಮತ್ತೊಂದು ಸೀಸನ್ಗೆ ಸಕಲ ಸಿದ್ಧತೆಗಳು ಆರಂಭ ಆಗಿವೆ. ತಿಂಗಳ ಹಿಂದೆ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಲೋಗೋ ಲಾಂಚ್ ಆಗಿತ್ತು. ಲೋಗೋದಲ್ಲಿ ಕನ್ನಡದಲ್ಲಿ 12 ಸಂಖ್ಯೆಯನ್ನ ಬರೆಯಲಾಗಿತ್ತು. ಅಲ್ಲದೆ, ಲೋಗೋದಲ್ಲಿ ಗಡಿಯಾರವೂ ಇತ್ತು. ಹೀಗಾಗಿ 12ನೇ ಸೀಸನ್ನ ಥೀಮ್ ಏನು? ಯಾವಾಗ ಶುರುವಾಗುತ್ತೆ? ಸ್ಪರ್ಧಿಗಳು ಈಗಾಗಲೇ ಆಯ್ಕೆ ಆಗಿದ್ದಾರಾ? ಸೆಟ್ ಹೇಗಿರುತ್ತೆ? ಕಿಚ್ಚನ ಲುಕ್ ಹೇಗಿದೆ? ಎಂಬ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು.. ಕಡೆಗೂ .. ಈ ಎಲ್ಲಾ ಪ್ರಶ್ನೆಗಳಿಗೂ ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿರೋ ಪ್ರೋಮೋದಲ್ಲಿ ಉತ್ತರ ಸಿಕ್ಕಿದೆ. ಅಂದ್ಹಾಗೆ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಸೆಪ್ಟೆಂಬರ್ 28ರಿಂದ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳುತ್ತಿದೆ. ಅಂದು ಭಾನುವಾರ ಆಗಿದ್ದರಿಂದ ಬಿಗ್ ಬಾಸ್ 12ನೇ ಸೀಸನ್ ಕಿರುತೆರೆಯಲ್ಲಿ ಕಿಚ್ಚು ಹಚ್ಚಲಿದೆ. ಇದೀಗ ಫಸ್ಟ್ ಪ್ರೋಮೋದಲ್ಲಿ ಕರ್ನಾಟಕದಲ್ಲಿನ ವಿವಿಧತೆಯಲ್ಲಿ ಏಕತೆಯನ್ನ ತೋರಿಸಲಾಗಿದೆ.
ಬಿಗ್ ಬಾಸ್ ಕನ್ನಡ ಪ್ರೋಮೋದಲ್ಲಿ, ಕರ್ನಾಟಕದ ವಿವಿಧ ಪ್ರದೇಶಗಳು, ಅಲ್ಲಿನ ಸಂಸ್ಕೃತಿ, ಆಚರಣೆಗಳ ದೃಶ್ಯಗಳನ್ನ ತೋರಿಸಲಾಗಿದೆ.. ವೈವಿಧ್ಯಮಯ ಅಂದ್ರೇನೇ ಕರ್ನಾಟಕ.. ಪ್ರತಿ ಮೂರು ಮೈಲಿಗೊಂದು ಭಾಷೆ, ಭಾವ, ಊಟ, ತೊಡುವ ಬಟ್ಟೆ.. ಎಲ್ಲಾ ಬೇರೆ. ಎಂಟರ್ಟೇನ್ಮೆಂಟ್ನಲ್ಲಿ ಕೇಳಬೇಕಾ? ಒಬ್ಬರಿಗೆ ನ್ಯೂಸ್ ಇಷ್ಟ, ಇನ್ನೊಬ್ಬರಿಗೆ ಸ್ಪೋರ್ಟ್ಸ್, ಒಬ್ಬರಿಗೆ ಸಿನಿಮಾ, ಇನ್ನೊಬ್ಬರಿಗೆ ರೀಲ್ಸ್, ಸಾಂಗ್ಸ್, ಡ್ಯಾನ್ಸ್, ಸೀರಿಯಲ್ಸ್. ಇಷ್ಟೆಲ್ಲಾ ವೆರೈಟಿ ಇರೋ ನಾಡನ್ನ ಒಂದು ಮಾಡೋಕೆ ಸಾಧ್ಯ ಇರೋದು ಆ ಒಂದು ಶಕ್ತಿಗೆ ಮಾತ್ರ ಎಂಬ ಧ್ವನಿ ನೀಡಲಾಗಿದೆ. ಆ ಶಕ್ತಿ ಅಂತಿದ್ದ ಹಾಗೆ ಕಿಚ್ಚ ಸುದೀಪ್ ಅವರ ಎಂಟ್ರಿ ಆಗುತ್ತದೆ. ಎಂದಿನಂತೆ ತಮ್ಮ ಶೈಲಿಯಲ್ಲಿ, ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ..’’ ಅಂತ ಕಂಚಿನ ಕಂಠದಲ್ಲಿ ಸುದೀಪ್ ಹೇಳಿದ್ದಾರೆ. ನಂತರ, ‘’ಹೊಸ ಸೆಟ್ ರೆಡಿ, ಹೊಸ ಕಂಟೆಸ್ಟೆಂಟ್ಸ್ ರೆಡಿ, 7 ಕೋಟಿ ಕನ್ನಡಿಗರೂ ರೆಡಿ.. ನೀವು..’’ ಎಂಬ ವಾಯ್ಸ್ ಬರ್ತಿದ್ದಂತೆ, ರೆಡಿ ಅಂತ ಸುದೀಪ್ ಥಂಬ್ಸ್ ಅಪ್ ಹೇಳುವ ದೃಶ್ಯ ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿದೆ.
ಇನ್ನು ‘ಬಿಗ್ ಬಾಸ್ ಕನ್ನಡ 12’ ಮೊದಲ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಹೊಸ ಹೇರ್ ಸ್ಟೈಲ್ ತುಂಬಾ ಹೈಲೈಟ್ ಆಗಿದೆ.. ಕಿಚ್ಚ ಕರ್ಲೀ ಹೇರ್ಸ್ಟೈಲ್ ಮಾಡಿಸಿಕೊಳ್ಳೋದಿಕ್ಕೂ ಒಂದು ಕಾರಣವಿದೆ. ಸುದೀಪ್ ತಮ್ಮ 47ನೇ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾಗಾಗಿ ಹೇರ್ ಸ್ಟೈಲ್ ಬದಲಾಯಿಸಿದ್ದಾರೆ. ‘ಮಾರ್ಕ್’ ಹಾಗೂ ಬಿಗ್ ಬಾಸ್ ಶೋ ಅನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ‘ಮಾರ್ಕ್’ ಲುಕ್ನಲ್ಲಿಯೇ ಬಿಗ್ ಬಾಸ್ ಶೋ ಮಾಡ್ತಾರೆ ಎಂದು ಹೇಳಲಾಗ್ತಿದೆ.
ಇನ್ನು ಹೊಸ ಪ್ರೋಮೋದಲ್ಲಿ ಸ್ಪರ್ಧಿಗಳ ಬಗ್ಗೆಯೂ ಕ್ಲೂ ನೀಡಲಾಗಿದೆ. ಪ್ರೋಮೋದಲ್ಲೇ ‘ಒಬ್ಬರಿಗೆ ನ್ಯೂಸ್ ಇಷ್ಟ, ಇನ್ನೊಬ್ಬರಿಗೆ ಸ್ಪೋರ್ಟ್ಸ್, ಒಬ್ಬರಿಗೆ ಸಿನಿಮಾ, ಇನ್ನೊಬ್ಬರಿಗೆ ರೀಲ್ಸ್, ಸಾಂಗ್ಸ್, ಡ್ಯಾನ್ಸ್, ಸೀರಿಯಲ್ಸ್ ಇಷ್ಟ’ ಅಂತ ಹೇಳಲಾಗಿದೆ. ಹೀಗಾಗಿ ಈ ಸೀಸನ್ ನಲ್ಲಿ ನ್ಯೂಸ್ ಆಂಕರ್, ಕ್ರೀಡಾಪಟು, ರೀಲ್ಸ್ ಸ್ಟಾರ್ಸ್, ಗಾಯಕರು, ಡ್ಯಾನ್ಸರ್ಸ್, ಕಿರುತೆರೆ ಕಲಾವಿದರು ಹಾಗೂ ಸಿನಿಮಾ ತಾರೆಯರು ಸ್ಪರ್ಧಿಸುವುದು ಫಿಕ್ಸ್.. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲೂ ಕೆಲ ಹೆಸರು ವೈರಲ್ ಆಗ್ತಿದೆ. ಡಾ.ಬ್ರೋ, ಅರ್ಚನಾ ಜೋಯಿಸ್, ಜಾಹ್ನವಿ, ಶ್ರೀ ಮಹಾದೇವ್, ಗಗನ್ ಚಿನ್ನಪ್ಪ, ಆಂಕರ್ ಚಂದನ್ ಶರ್ಮಾ, ಪೂಜಾ ಲೋಕೇಶ್, ಧನುಷ್ ಗೌಡ ಮುಂತಾದವರ ಹೆಸ್ರು ಹರಿದಾಡುತ್ತಿವೆ. ಆದರೆ, ಇದ್ಯಾವುದೂ ಅಧಿಕೃತವಲ್ಲ.

ನೋಡಿರಿ

