ಸಿಲಿಕಾನ್‌ ಸಿಟಿ ಬೆಂಗಳೂರು ಬಲು ದುಬಾರಿ! – 2BHK ಮನೆಯ ತಿಂಗಳ ಬಾಡಿಗೆ 70,000!

ಸಿಲಿಕಾನ್‌ ಸಿಟಿ ಬೆಂಗಳೂರು ಬಲು ದುಬಾರಿ! – 2BHK ಮನೆಯ ತಿಂಗಳ ಬಾಡಿಗೆ 70,000!

ಬರು ಬರುತ್ತಾ ಸಿಲಿಕಾನ್‌ ಸಿಟಿ ಬೆಂಗಳೂರು ದುಬಾರಿಯಾಗುತ್ತಿದೆ. ಸ್ವಂತ ಮನೆ ಬಿಡಿ.. ಬಾಡಿಗೆ ಮನೆ ಹುಡುಕೋದು ಕೂಡ ಕಷ್ಟವಾಗಿದೆ. ನಮಗೆ ಬೇಕಾದ ಸ್ಥಳಗಳಲ್ಲಿ ಮನೆ ಹುಡುಕೋದು ಕಷ್ಟವಾಗಿದೆ. ಆಫೀಸ್‌ ಗೆ ಹತ್ರ ಇರೋ ಮನೆ ಸಿಕ್ಕಿದ್ರೂ ಬಾಡಿಗೆ ದರ ಫುಲ್‌ ಕಾಸ್ಟ್ಲಿ ಆಗಿರುತ್ತೆ. ಇದೀಗ ಬೆಂಗಳೂರಿನ ಈ ಏರಿಯಾದಲ್ಲಿ ಮನೆ ಬಾಡಿಗೆ ದರ ನೋಡಿ ಜನ ಫುಲ್‌ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಬಿಗ್‌ ಪ್ರಾಜೆಕ್ಟ್‌ ಬಾಚಿಕೊಂಡ‌ ರಶ್ಮಿಕಾ ಮಂದಣ್ಣ! – ದೆವ್ವವಾಗಿ ಕಾಡಲಿದ್ದಾರೆ ಕಿರಿಕ್ ಬ್ಯೂಟಿ!

ಹೌದು, ಸಿಲಿಕಾನ್‌ ಸಿಟಿ ಬೆಂಗಳೂರು ದುಬಾರಿ ಸಿಟಿ ಅನ್ನಿಸಿಕೊಳ್ತಿದೆ. ಒಂದ್ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದ್ರೆ, ಮತ್ತೊಂದ್ಕಡೆ ನೀರು, ಕರೆಂಟ್‌ ದರ ಕೂಡ ದುಪ್ಪಟ್ಟಾಗಿದೆ. ಇವೆಲ್ಲದ್ರ ಮಧ್ಯೆ ಮನೆ ಬಾಡಿಗೆ ದರ ಕೂಡ ದುಬಾರಿಯಾಗ್ತಿದೆ. ಹೀಗಾಗಿ ಸೌಕರ್ಯ ಕಡಿಮೆಯಿದ್ದರೂ ತೊಂದರೆಯಿಲ್ಲ, ಬಾಡಿಗೆ ಕಡಿಮೆಯಿರುವ ಮನೆ ಸಿಕ್ಕರೆ ಅದೇ ಅದೃಷ್ಟ. ಬೆಂಗಳೂರಿನ ಬಾಡಿಗೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತವೆ. ಆದರೆ ಇದೀಗ ಬೆಂಗಳೂರಿನ ಪಣತ್ತೂರು ಪ್ರದೇಶದಲ್ಲಿ 2ಬಿಹೆಚ್‌ಕೆ ಮನೆಗೆ ಮಾಸಿಕ ಬಾಡಿಗೆ 70,000 ರೂ ಹಾಗೂ 5 ಲಕ್ಷ ರೂ ಠೇವಣಿ ಎನ್ನಲಾಗಿದೆ.  ಇದ್ರ ಪೋಸ್ಟ್ ಸೋಶಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

r/Indianrealestate ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಬಾಡಿಗೆ ಮನೆ ಖಾಲಿಯಿರುವ ಬಗ್ಗೆ ಹಂಚಿಕೊಳ್ಳಲಾಗಿದ್ದು, ಆದರೆ ಇದರಲ್ಲಿ ಮನೆ ಬಾಡಿಗೆ ಹಾಗೂ ಡೆಪಾಸಿಟ್ ಹಣವನ್ನು ನೋಡಿದ್ರೆ ತಲೆ ಗಿರ್ ಎನ್ನುತ್ತೆ. ಬೆಂಗಳೂರಿನ ಪಣತ್ತೂರು ಪ್ರದೇಶದಲ್ಲಿ ಮನೆ ಮಾಲೀಕರು 2ಬಿಹೆಚ್‌ಕೆ ಮನೆಗೆ ಮಾಸಿಕ ಬಾಡಿಗೆ 70,000 ರೂ ಹಾಗೂ ಐದು ಲಕ್ಷ ರೂ ಅಡ್ವಾನ್ಸ್ ಡಿಮ್ಯಾಂಡ್ ಮಾಡುತ್ತಾರೆ. ಈ ಪೋಸ್ಟ್‌ನಲ್ಲಿ ಶಿರ್ಷಿಕೆಯಲ್ಲಿ 70 ಸಾವಿರ ರೂ ಬಾಡಿಗೆ, ಇದು ಅನೇಕ ಯುರೋಪಿಯನ್ ಅಪಾರ್ಟ್‌ಮೆಂಟ್‌ಗಳಿಗಿಂತ ಹೆಚ್ಚು. ಈ ಬಾಡಿಗೆಗಳನ್ನು ಪಾವತಿಸುವ ಜನರು ಯಾರು?.70,000 ರೂ ಬಾಡಿಗೆ ಪಾವತಿಸುವ ಬದಲು. ಆ ಹಣವನ್ನು ಇಎಂಐಯಲ್ಲಿ ಆಸ್ತಿಯನ್ನು ಖರೀದಿ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಪ್ರವಾಹ ಪೀಡಿತ ಪ್ರದೇಶದಲ್ಲಿರುವ 2 ಬಿಹೆಚ್ ಕೆ ಮನೆಗೆ 70 ಸಾವಿರ ರೂ ಪಾವತಿಸೋದಾದ್ರೂ ಹೇಗೆ?  ಅಲ್ಲಿನ ರಸ್ತೆಗಳು ದುಃಸ್ವಪ್ನವಾಗಿದ್ದು, RUB ದಾಟುವುದು ಸಿಲ್ಕ್ ಬೋರ್ಡ್ ದಾಟುವುದಕ್ಕಿಂತ ಕೆಟ್ಟದಾಗಿದೆ ಎಂದಿದ್ದಾರೆ. ಮತ್ತೊಬ್ಬರು ಇಷ್ಟು ಹಣಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸಲು ರೆಡಿ ಇರುವ ಜನರು ಇದ್ದಾರೆ. ಭಾರತದಲ್ಲಿ ಅಂತಹವರ ಸಂಖ್ಯೆಯೂ ದೊಡ್ಡದಿದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ಪ್ರದೇಶದಲ್ಲಿ ಬಾಡಿಗೆ 40,000 ರೂ ರಿಂದ 45,000 ರೂವರೆಗೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.

Shwetha M