ABD ಟಾಪ್ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಜಾಗ – ಪಾಕ್ ಮಾಜಿ ವೇಗಿಯೇ ವಿಲಿಯರ್ಸ್ ಅಚ್ಚುಮೆಚ್ಚು

ABD ಟಾಪ್ ಆಟಗಾರರ  ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಜಾಗ – ಪಾಕ್ ಮಾಜಿ ವೇಗಿಯೇ ವಿಲಿಯರ್ಸ್ ಅಚ್ಚುಮೆಚ್ಚು

ತಮ್ಮ ಜೊತೆ ಆಡಿದ ಹಾಗೂ ಎದುರಾಳಿಯಾಗಿ ಆಡಿದ ಆಟಗಾರರನ್ನು ಒಳಗೊಂಡ ಟಾಪ್ 5  ಕ್ರಿಕೆಟಿಗರನ್ನು   ಎಬಿ ಡಿ ವಿಲಿಯರ್ಸ್‌  ಆಯ್ಕೆ ಮಾಡಿದ್ದಾರೆ. ಆದರೆ  ಕೊಹ್ಲಿಯನ್ನ ಕೈ ಬಿಟ್ಟಿರೋ ABD, ತಮ್ಮ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಮೊಹಮ್ಮದ್‌ ಆಸಿಫ್‌   ಅವರನ್ನು ಆಯ್ಕೆ ಮಾಡಿದ್ದಾರೆ.

ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ಹಾಕ್ತೀರಾ? – ನಿಮ್ಮ ಮೇಲೂ ಕೇಸ್‌ ಬೀಳುತ್ತೆ ಹುಷಾರ್!‌

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಎಬಿ ಡಿ ವಿಲಿಯರ್ಸ್‌ಗೆ ತಮ್ಮ ನೆಚ್ಚಿನ ಐವರು ಆಟಗಾರರನ್ನು ಆರಿಸಲು ಕೇಳಲಾಯಿತು. ಅವರು ತಮ್ಮದೇ ದೇಶದ ದಿಗ್ಗಜ ಜಾಕ್‌ ಕಾಲಿಸ್‌, ಇಂಗ್ಲೆಂಡ್‌ ಆಲ್‌ರೌಂಡರ್‌ ಆಂಡ್ರೆ ಫ್ಲಿಂಟಾಫ್‌, ಆಸ್ಟ್ರೇಲಿಯಾ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್‌ ಹಾಗೂ ಭಾರತದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್‌ ಆಸಿಫ್‌ ಅವರನ್ನು ಆರಿಸಿದ್ದಾರೆ. ಆದರೆ, ತಮ್ಮ ಗೆಳೆಯ ವಿರಾಟ್‌ ಕೊಹ್ಲಿಯನ್ನು ಕೈ ಬಿಟ್ಟಿದ್ದಾರೆ. ಕಾಲಿಸ್‌, ಫ್ಲಿಂಟಾಫ್‌, ಮೊಹಮ್ಮದ್‌ ಆಸಿಪ್‌, ಶೇನ್‌ ವಾರ್ನ್‌ ಹಾಗೂ ಸಚಿನ್‌ ತೆಂಡೂಲ್ಕರ್ ಅವರನ್ನ ABD ಆಯ್ಕೆ ಮಾಡಿಕೊಂಡಿದ್ದಾರೆ.  ಮೈದಾನಕ್ಕೆ ಆಗಮಿಸುವ ವೇಳೆ ಸಚಿನ್‌ ತೆಂಡೂಲ್ಕರ್‌ಗೆ ಸಿಗುತ್ತಿದ್ದ ಬೆಂಬಲ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್‌ ನೋಡುವುದು ಅತ್ಯುತ್ತಮವಾಗಿದೆ. ವಿರಾಟ್‌ ನನ್ನನ್ನು ಕ್ಷಮಿಸಿ, ಸಚಿನ್‌. ಈ ಕಾರಣದಿಂದಲೇ ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಾಗಿದೆ,” ಎಂದು ಎಬಿ ಡಿವಿಲಿಯರ್ಸ್‌ ತಿಳಿಸಿದ್ದಾರೆ.

ಜಾಕ್‌ ಕಾಲಿಸ್‌ ವಿಶ್ವದ ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಹೇಳಿದ ಎಬಿಡಿ, ತನಗೆ ಯಾರ್ಕರ್‌ ಹಾಕಿ ಔಟ್‌ ಮಾಡಿದ್ದ ಆಂಡ್ರೆ ಫ್ಲಿಂಟಾಪ್‌ ಅವರನ್ನು ಸ್ಮರಿಸಿಕೊಂಡರು. ಜಾಕ್‌ ಕಾಲಿಸ್‌ ಅತ್ಯುತ್ತಮ ಆಲ್‌ರೌಂಡರ್‌ ಅಥವಾ ಸಾರ್ವಕಾಲಿಕ ಅತ್ಯುತ್ತಮ ಆಟಗಾರ. ನಾನು ನೋಡಿದ ಅತ್ಯುತ್ತಮ ವೇಗದ ಬೌಲರ್‌ ಮೊಹಮ್ಮದ್‌ ಆಸಿಫ್‌. ಶೇನ್‌ ವಾರ್ನ್‌ ವಿರುದ್ಧ ಆಡುವುದನ್ನು ನಾನು ಇಷ್ಟಪಡುತ್ತೇನೆ. ಆದರೆ, ಇವರನ್ನು ಒಮ್ಮೆಯೂ ಎದುರಿಸಿಲ್ಲ. ಅವರ ನೋಟ, ನಡೆ ಹಾಗೂ ನುಡಿಯನ್ನು ನಾನು ಇಷ್ಟಪಟ್ಟಿದ್ದೇನೆ. ಆಂಡ್ರೆ ಫ್ಲಿಂಟಾಫ್‌ ದೊಡ್ಡ ಮ್ಯಾಚ್‌ ವಿನ್ನರ್‌. ಜಾಕ್‌ ಕಾಲಿಸ್‌ಗೆ ಯಾರ್ಕರ್‌ ಹಾಕಿ ಬೌಲ್ಡ್‌ ಮಾಡಿದ್ದು ನಾನು ನೀಡಿದ ಅತ್ಯುತ್ತಮ ಎಸೆತ,” ಎಂದು ಎಬಿಡಿ ತಿಳಿಸಿದ್ದಾರೆ.

ಇತ್ತೀಚೆಗೆ ಎಬಿ ಡಿ ವಿಲಿಯರ್ಸ್‌ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಪಾಕಿಸ್ತಾನ ವಿರುದ್ದದ ಫೈನಲ್‌ ಪಂದ್ಯದಲ್ಲಿ ಎಬಿಡಿ ಶತಕವನ್ನು ಬಾರಿಸಿದ್ದರು. ಈ ಟೂರ್ನಿಯಲ್ಲಿ ಮೂರನೇ ಶತಕವನ್ನು ಸಿಡಿಸಿದ್ದರು. ಪಾಕ್‌ ನೀಡಿದ್ದ 196 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ, 16.5 ಓವರ್‌ಗಳಿಗೆ ಗೆಲುವಿನ ದಡ ಸೇರಿಸಿತ್ತು.

 

Kishor KV