INDಗೆ ಏಷ್ಯಾಕಪ್ ಅಡ್ವಾಂಟೇಜ್ – ಸಾಲಿಡ್ ಫಾರ್ಮ್.. T-20I ನಂ.1
ಅಭಿ, ಪಾಂಡ್ಯ, ವರುಣ್.. ಕಪ್ ನಮ್ದೇ!

INDಗೆ ಏಷ್ಯಾಕಪ್ ಅಡ್ವಾಂಟೇಜ್ – ಸಾಲಿಡ್ ಫಾರ್ಮ್.. T-20I ನಂ.1ಅಭಿ, ಪಾಂಡ್ಯ, ವರುಣ್.. ಕಪ್ ನಮ್ದೇ!

ಏಷ್ಯಾಕಪ್​ನಲ್ಲಿ ಇದುವರೆಗೆ ಒಟ್ಟು 16 ಆವೃತ್ತಿಗಳು ಕಂಪ್ಲೀಟ್ ಆಗಿದ್ದು ಇದು 17ನೇ ಸೀಸನ್​. ಈ ಪೈಕಿ ಅರ್ಧಕ್ಕರ್ಧ ಬಾರಿ ಭಾರತವೇ ಚಾಂಪಿಯನ್ ಆಗಿದೆ. ಅಂದ್ರೆ 8 ಸಲ ಟ್ರೋಫಿ ಗೆದ್ದು ಬೀಗಿದೆ. ಹೀಗಾಗಿ ಈ ಸಲವೂ ಟೀಮ್ ಇಂಡಿಯಾ ಮೇಲೆಯೇ ಎಲ್ಲರ ಗಮನ ಇರುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತ ಟಿ-20 ಮಾದರಿಯಲ್ಲಿ ಸಾಲಿಡ್ ಫಾರ್ಮ್​ನಲ್ಲಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ 1ರಿಂದ ಹಲವು ರೂಲ್ಸ್ ಚೇಂಜ್ – ಯುಪಿಎಸ್‌ ಡೆಡ್‌ಲೈನ್‌, ಆಧಾರ್‌ ಅಪ್‌ ಡೇಟ್ ಸೇರಿ ಏನೆಲ್ಲಾ ಬದಲಾವಣೆ ಆಗಿವೆ ಗೊತ್ತಾ?

ವಿಶ್ವಕಪ್ ಬಳಿಕ ಸತತ ಟಿ-20 ಸರಣಿ ಗೆದ್ದಿದೆ ಭಾರತ!

2024ರ ಟಿ20 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಿತ್ತು. ವಿಶ್ವಕಪ್ ಮುಗಿದ್ಮೇಲೆ ಟೀಮ್ ಇಂಡಿಯಾದ ಹೆಡ್‌ ಕೋಚ್‌ ರಾಹುಲ್ ದ್ರಾವಿಡ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ರು., ಇನ್ನು ಲೆಜೆಂಡರಿ ಪ್ಲೇಯರ್​ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಚುಟುಕು ಫಾರ್ಮೆಟ್‌ಗೆ ವಿದಾಯ ಹೇಳಿದ್ರು. ನೂತನ ಕೋಚ್ ಆಗಿ ಗೌತಮ್ ಗಂಭೀರ್‌ ಆಯ್ಕೆ ಆದ್ಮೇಲೆ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಲಾಯಿತು. ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾ ಸತತವಾಗಿ 5 ಟಿ20 ಸರಣಿಗಳನ್ನು ಗೆದ್ದಿದೆ. 2024ರ ಜಿಂಬಾಬ್ವೆ ಪ್ರವಾಸದಿಂದ ಹಿಡಿದು ಈವರೆಗೆ ಕೇವಲ ಮೂರು ಟಿ20 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಹೀಗಾಗಿ ಇದೇ ಫಾರ್ಮ್​ನಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್​ನಲ್ಲೂ ಚಾಂಪಿಯನ್ ಪಟ್ಟಕ್ಕೇರೋ ಟಾರ್ಗೆಟ್ ಇಟ್ಕೊಂಡಿದೆ.

ಟಿ-20ಐನಲ್ಲಿ ಭಾರತದ ಆಟಗಾರರೇ ನಂಬರ್ 1

ಏಷ್ಯನ್ ರಾಷ್ಟ್ರಗಳಷ್ಟೇ ಅಲ್ಲದೆ ಜಗತ್ತಿನಲ್ಲೇ ಟಿ-20ಐ ಕ್ರಿಕೆಟ್​ ಮಾದರಿಯಲ್ಲಿ ಭಾರತವೇ ಡಾಮಿನೇಟ್ ಮಾಡ್ತಿದೆ. ಟಿ20 ಶ್ರೇಯಾಂಕದಲ್ಲಿ ಭಾರತ ಸದ್ಯ ನಂಬರ್ 1 ಪ್ಲೇಸ್​ನಲ್ಲಿದೆ. 2024ರಲ್ಲಿ ಟಿ-20 ವಿಶ್ವ ಕಪ್‌ ಗೆದ್ದಿರುವ ಭಾರತ, ಟಿ-20 ಮಾದರಿಯಲ್ಲಿ ಏಷ್ಯಾಕಪ್​ನ ಮಾಜಿ ಚಾಂಪಿಯನ್ ಆಗಿದೆ. ಟೀಮ್ ಇಂಡಿಯಾದಲ್ಲಿ ಸ್ಪಿನ್ ಬೌಲರ್‌ ವರುಣ್‌ ಚಕ್ರವರ್ತಿ ಏಷ್ಯಾ ಕಪ್‌ನ ನಂಬರ್ 1 ಬೌಲರ್. ಇನ್ನು ಬ್ಯಾಟಿಂಗ್‌ನಲ್ಲಿ ಅಭಿಷೇಕ್‌ ಶರ್ಮಾ ವಿಶ್ವದ ನಂಬರ್ ಟಿ20 ಬ್ಯಾಟರ್‌. ಇನ್ನು ಹಾರ್ದಿಕ್ ಪಾಂಡ್ಯ ನಂಬರ್ ಆಲ್‌ರೌಂಡರ್‌ ಆಗಿದ್ದಾರೆ. ಈ ಮೂವರೂ ಕೂಡ ಏಷ್ಯಾಕಪ್​ಗೂ ಸೆಲೆಕ್ಟ್ ಆಗಿರೋದ್ರಿಂದ ಭಾರತವೇ ಟೈಟಲ್ ಗೆಲ್ಲೋ ನಿರೀಕ್ಷೆಯಲ್ಲಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸೂಪರ್ ಸ್ಟ್ರಾಂಗ್!

ವಿಶ್ವಕ್ರಿಕೆಟ್​ನಲ್ಲೇ ಭಾರತ ಬೆಸ್ಟ್ ಟೀಂ ಆಗಿದೆ. ಬ್ಯಾಕ್ ಟು ಬ್ಯಾಕ್ ಎರಡು ಐಸಿಸಿ ಟ್ರೋಫಿಗಳನ್ನ ಗೆದ್ದು ಬೀಗಿದೆ. ಈ ಬಾರಿ ಏಷ್ಯಾಕಪ್​ಗೆ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ಅವರಂತಹ ಸ್ಟಾರ್ ಆಟಗಾರರು ಇಲ್ಲದೇ ಇದ್ದರೂ ಸಹ ತಂಡ ಸ್ಟ್ರಾಂಗ್ ಆಗಿದೆ. ಅಭಿಷೇಕ್‌ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿದ್ರೆ, ತಿಲಕ್ ವರ್ಮಾ, ಸೂರ್ಯ ಮಿಡಲ್ ಆರ್ಡರ್ ನಲ್ಲಿ ಪವರ್ ಹಿಟ್ ಮೂಲಕ ಸದ್ದು ಮಾಡ್ತಾರೆ. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೇ ಆಲ್‌ರೌಂಡರ್‌ ರೋಲ್ ನ ಚೆನ್ನಾಗಿ ನಿಭಾಯಿಸೋ ಕೆಪಾಸಿಟಿ ಇದೆ. ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ, ಅರ್ಷದೀಪ್‌ ಸಿಂಗ್, ಹರ್ಷಿತ್ ರಾಣಾ ವೇಗದ ಬೌಲಿಂಗ್‌ನಲ್ಲಿ ಕಾಣಿಸಿಕೊಂಡರೆ, ನುರಿತ ಸ್ಪಿನ್ ಬೌಲರ್‌ಗಳಾಗಿ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಇದ್ದಾರೆ.

Shantha Kumari